ಭಾನುವಾರವೂ ಇಲ್ಲ ರಜೆ!: ಪೆಟ್ರೋಲ್ ಮತ್ತೆ ಡೀಸೆಲ್ ದರ ಏರಿಕೆಗಿಲ್ಲ ವಿರಾಮ! ಎಲ್ಲೆಲ್ಲಿ ಎಷ್ಟು ದರ?

ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾನುವಾರ ಸತತ ಐದನೇ ದಿನ ಏರಿಕೆಯಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಕನಿಷ್ಠ 35 ಪೈಸೆ ಹೆಚ್ಚಳವಾಗಿದೆ. ಇದರಿಂದ ದೇಶದೆಲ್ಲೆಡೆ ಗ್ರಾಹಕರಿಗೆ ಮತ್ತಷ್ಟು ಬಿಸಿ ತಟ್ಟಿದೆ.

ಭಾನುವಾರವೂ ಇಲ್ಲ ರಜೆ!: ಪೆಟ್ರೋಲ್ ಮತ್ತೆ ಡೀಸೆಲ್ ದರ ಏರಿಕೆಗಿಲ್ಲ ವಿರಾಮ! ಎಲ್ಲೆಲ್ಲಿ ಎಷ್ಟು ದರ?
Linkup
ಹೊಸದಿಲ್ಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಭಾನುವಾರವೂ ರಜೆ ಸಿಕ್ಕಿಲ್ಲ! ಸತತ ಐದನೇ ದಿನ ದೇಶದೆಲ್ಲೆಡೆ ತೈಲ ದರ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 35 ಪೈಸೆ ಹೆಚ್ಚಳವಾಗಿದೆ. ಹಾಗೆಯೇ ಕೂಡ 35 ಪೈಸೆಯಷ್ಟು ತುಟ್ಟಿಯಾಗಿದೆ. ಇದರಿಂದ ಒಂದು ಲೀಟರ್ ಪೆಟ್ರೋಲ್ ಬೆಲೆ 107.24 ರೂಪಾಯಿಯಿಂದ 107.59 ರೂಪಾಯಿಗೆ ತಲುಪಿದೆ. ಡೀಸೆಲ್ ದರ 95.97 ರೂಪಾಯಿಯಿಂದ ಪ್ರತಿ ಲೀಟರ್‌ಗೆ 96.32 ರೂಪಾಯಿ ಮುಟ್ಟಿದೆ. ವಾಣಿಜ್ಯ ನಗರಿ ಮುಂಬಯಿಯಲ್ಲಿ ಕೂಡ ಹೆಚ್ಚಳ ಕಂಡಿದೆ. ಪೆಟ್ರೋಲ್ ಪ್ರತಿ ಲೀಟರ್‌ಗೆ 34 ಪೈಸೆ ಏರಿಕೆಯಾಗಿದ್ದು, ಒಂದು ಲೀಟರ್‌ಗೆ 113.46 ರೂಪಾಯಿ ಆಗಿದೆ. ಡೀಸೆಲ್ ದರ 38 ಪೈಸೆ ಹೆಚ್ಚಳದೊಂದಿಗೆ 104.38 ರೂಪಾಯಿಗೆ ಮುಟ್ಟಿದೆ. ಕೋಲ್ಕತಾದಲ್ಲಿ ಡೀಸೆಲ್ ಶತಕ ಬಾರಿಸಲು ತುದಿಗಾಲಲ್ಲಿ ನಿಂತಿದೆ. 35 ಪೈಸೆ ಹೆಚ್ಚಳದೊಂದಿಗೆ ಲೀಟರ್ ಡೀಸೆಲ್ ದರ 99.45 ರೂಪಾಯಿಗೆ ಮುಟ್ಟಿದೆ. ಪೆಟ್ರೋಲ್ ಬೆಲೆ 33 ಪೈಸೆ ದುಬಾರಿಯಾಗಿದ್ದು, 108.11 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ 36 ಪೈಸೆ ಬೆಲೆ ಹೆಚ್ಚಳ ಕಂಡಿದೆ. ಡೀಸೆಲ್ ಕೂಡ 37 ಪೈಸೆ ತುಟ್ಟಿಯಾಗಿದೆ. ಇದರೊಂದಿಗೆ ಡೀಸೆಲ್ ದರ 102.23 ರೂ ತಲುಪಿದೆ. ಪೆಟ್ರೋಲ್ ಬೆಲೆ ಲೀಟರ್‌ಗೆ 111.34 ರೂಪಾಯಿ ಇದೆ. ಚೆನ್ನೈನಲ್ಲಿ ಪೆಟ್ರೋಲ್ 104.52 ರೂ ಮತ್ತು ಡೀಸೆಲ್ 100.59 ರೂಪಾಯಿ ದರವಿದೆ. ರಾಜಸ್ಥಾನದ ಗಂಗಾನಗರದಲ್ಲಿ ದೇಶದಲ್ಲಿಯೇ ತೈಲ ದರ ಅತ್ಯಂತ ದುಬಾರಿಯಾಗಿದೆ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ 119.79 ರೂಪಾಯಿ ಇದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ 110.63 ರೂ ಇದೆ. ರಾಜ್ಯದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ: ಮೈಸೂರು ಪೆಟ್ರೋಲ್: 110.84 ರೂ, ಡೀಸೆಲ್: 101.77 ರೂ ಮಂಗಳೂರು ಪೆಟ್ರೋಲ್: 111.20 ರೂ., ಡೀಸೆಲ್: 102.07 ರೂ ಬೆಳಗಾವಿ ಪೆಟ್ರೋಲ್: 111.89 ರೂ., ಡೀಸೆಲ್: 102.76 ರೂ ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯಕ್ಕೆ ಇಳಿಯುವ ಲಕ್ಷಣಗಳಿಲ್ಲ. ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ದೇಶಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಆದರೆ ದರದಲ್ಲಿ ಇಳಿಕೆಯ ಸಾಧ್ಯತೆ ಇಲ್ಲ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಕಡಿತದ ಔದಾರ್ಯ ಪ್ರದರ್ಶಿಸಿರಲಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 32.9 ರೂ ಹಾಗೂ ಡೀಸೆಲ್ ಮೇಲೆ 31.8 ರೂ ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.