ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಮಹಾರಾಷ್ಟ್ರದಲ್ಲಿ 52 ಸಾವು

ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅಡ್ಡಪರಿಣಾಮ 'ಭ್ಲ್ಯಾಕ್‌ ಫಂಗಸ್‌' ಸೋಂಕಿಗೆ ಇದುವರೆಗೂ ಮಹಾರಾಷ್ಟ್ರದಲ್ಲಿ 52 ಮಂದಿ ಮೃತರಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬ್ಲ್ಯಾಕ್‌ ಫಂಗಸ್‌ ಸೋಂಕಿಗೆ ಮಹಾರಾಷ್ಟ್ರದಲ್ಲಿ 52 ಸಾವು
Linkup
ಮುಂಬಯಿ: ಕೊರೊನಾದಿಂದ ಚೇತರಿಕೆ ಕಂಡವರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅಡ್ಡಪರಿಣಾಮ 'ಭ್ಲ್ಯಾಕ್‌ ಫಂಗಸ್‌' (ಮುಕೊರ್‌ಮೈಕೊಸಿಸ್‌) ಸೋಂಕಿಗೆ ಇದುವರೆಗೂ ಮಹಾರಾಷ್ಟ್ರದಲ್ಲಿ 52 ಮಂದಿ ಮೃತರಾಗಿದ್ದಾರೆ. ಈ ಅಪಾಯಕಾರಿ ಫಂಗಸ್‌ ಸೋಂಕಿಗೆ ತುತ್ತಾದವರಲ್ಲಿ ಪ್ರಮುಖವಾಗಿ ಕಣ್ಣಿನ ದೃಷ್ಟಿದೋಷ , ಜ್ವರ, ತಲೆನೋವು, ಕಣ್ಣಿನ ಕೆಳಗಡೆ ತೀವ್ರ ನೋವು, ಉಸಿರಾಟದಲ್ಲಿ ತೊಂದರೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ಮೊದಲ ಬಾರಿಗೆ ರಾಜ್ಯದ ಆರೋಗ್ಯ ಸಚಿವಾಲಯವು ಫಂಗಸ್‌ ಸೋಂಕಿನಿಂದ ಮೃತಪಟ್ಟವರ ಪಟ್ಟಿಯನ್ನು ಕೂಡ ಸಿದ್ಧಪಡಿಸಿದೆ. ಕೊರೊನಾ ಎರಡನೇ ಅಲೆಯ ಭೀತಿಯ ನಡುವೆ ಮಹಾರಾಷ್ಟ್ರದಲ್ಲಿ ಸುಮಾರು 1500 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಕಣ್ಣಿನ ತಜ್ಞರು ಸೇರಿದಂತೆ ವಿವಿಧ ಅಂಗಾಂಗಳ ತಜ್ಞ ವೈದ್ಯರಿಂದ ಔಷಧಗಳನ್ನು ಪಡೆದು ಈ ಸೋಂಕಿನಿಂದ ಗುಣವಾಗಬೇಕಾಗುತ್ತದೆ. ಇದಕ್ಕೆ ಮಲ್ಟಿಡಿಸಿಪ್ಲೀನರಿ ಪದ್ಧತಿ ಎನ್ನಲಾಗುತ್ತದೆ. ಈ ನಿಟ್ಟಿನಲ್ಲಿ ಒಂದು ಲಕ್ಷದಷ್ಟು ಆಂಫೊಟೆರಿಸಿನ್‌-ಬಿ ಇಂಜೆಕ್ಷನ್‌ಗಳ ಖರೀದಿಗೆ ಈಗಾಗಲೇ ಜಾಗತಿಕ ಟೆಂಡರ್‌ ಅನ್ನು ಕೂಡ ರಾಜ್ಯ ಸರಕಾರ ಕರೆದಿದೆ. ಸಕ್ಕರೆ ಕಾಯಿಲೆಯಿದ್ದು, ಕೊರೊನಾಗೆ ತುತ್ತಾದ ಬಳಿಕ ಸಕ್ಕರೆ ಪ್ರಮಾಣದ ಹತೋಟಿಗೆ ಬರದಿದ್ದರೆ ಫಂಗಸ್‌ ಸೋಂಕು ಉಲ್ಬಣಗೊಳ್ಳುತ್ತಿದೆ. ರಕ್ತದಲ್ಲಿನ ಕಬ್ಬಿಣದ ಅಂಶ ಕೂಡ ವಿಪರೀತ ಏರಿಕೆ ಕಾಣುತ್ತಿರುವ ಲಕ್ಷಣಗಳು ಗೋಚರವಾಗುತ್ತಿದೆ. ಮೂಗು, ಕಣ್ಣುಗಳ ಮೂಲಕ ಈ ಸೋಂಕು ಹರಡುವ ಸಾಧ್ಯತೆಯಿದೆ ಎಂದು ಕೆಲದಿನಗಳ ಮುನ್ನ ಆರೋಗ್ಯ ಸಚಿವ ರಾಜೇಶ್‌ ತೋಪೆ ಎಚ್ಚರಿಸಿದ್ದರು.