ಫೇಸ್‌ಬುಕ್‌ನಲ್ಲಿ ಐಸಿಸ್ ಉಗ್ರ ಸಂಘಟನೆ ಪರ ಪೋಸ್ಟ್..! ತಮಿಳುನಾಡಿನಲ್ಲಿ ಎನ್‌ಐಎ ಶೋಧ

​​ಇಕ್ಬಾಲ್‌ ತನ್ನ ಫೇಸ್‌ಬುಕ್‌ ಪೋಸ್ಟ್‌ಗಳಲ್ಲಿ ಐಸಿಸ್‌ ಮತ್ತು 'ಎಚ್‌ಯುಟಿ' ಸಂಘಟನೆಯ ತತ್ವಗಳನ್ನು ಬೆಂಬಲಿಸುವಂತೆ ಪ್ರಚೋದನೆ ನೀಡಿದ್ದ. ವಿವಿಧ ಕೋಮುಗಳ ನಡುವೆ ವಿಷಬೀಜ ಬಿತ್ತಿ, ಸಮಾಜದ ಸೌಹಾರ್ದತೆ ಹಾಳುಗೆಡವುವಂತಹ ಸಂದೇಶ ಹಾಕಿದ್ದ.

ಫೇಸ್‌ಬುಕ್‌ನಲ್ಲಿ ಐಸಿಸ್ ಉಗ್ರ ಸಂಘಟನೆ ಪರ ಪೋಸ್ಟ್..! ತಮಿಳುನಾಡಿನಲ್ಲಿ ಎನ್‌ಐಎ ಶೋಧ
Linkup
: ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಐಸಿಸ್‌ ಉಗ್ರ ಸಂಘಟನೆಗೆ ಬೆಂಬಲ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ತಂಡವು ಭಾನುವಾರ ತಮಿಳುನಾಡಿನ ಮದುರೈನಲ್ಲಿ ನಾಲ್ಕು ಕಡೆ ನಡೆಸಿ ಶೋಧ ಕೈಗೊಂಡಿದೆ. ಐಸಿಸ್‌ ಮತ್ತು ಇಸ್ಲಾಂ ಮೂಲಭೂತವಾದಿ ಸಂಘಟನೆ 'ಹಿಜಬ್‌-ಉತ್‌ ತಹ್ರಿರ್‌' ಸಿದ್ಧಾಂತವನ್ನು ಬೆಂಬಲಿಸಿ ಮದುರೈನ ನಿವಾಸಿ ಮೊಹಮ್ಮದ್‌ ಇಕ್ಬಾಲ್‌ ಎಂಬಾತ ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದ. ಈತನನ್ನು ಕಳೆದ ಡಿಸೆಂಬರ್‌ನಲ್ಲೇ ಬಂಧಿಸಲಾಗಿತ್ತು. ಈತನ ವಿಚಾರಣೆ ವೇಳೆ ಸಿಕ್ಕ ಮಾಹಿತಿ ಆಧರಿಸಿ ಭಾನುವಾರ ಶೋಧ ಕಾರ್ಯ ನಡೆಸಲಾಗಿದೆ. ಜಿಲ್ಲೆಯ ಕಝಿಮರ್‌ ಸ್ಟ್ರೀಟ್‌, ಕೆ. ಪುದುರ್‌, ಪೆಥಾನಿಯಪುರಂ, ಮೆಹಬೂಬ್‌ ಪಾಲಯಂನಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ ಲ್ಯಾಪ್‌ಟಾಪ್‌, ಹಾರ್ಡ್‌ಡಿಸ್ಕ್‌, ಮೊಬೈಲ್‌ ಫೋನ್‌, ಮೆಮೊರಿ ಕಾರ್ಡ್‌, ಸಿಮ್‌ಕಾರ್ಡ್‌, ಪೆನ್‌ಡ್ರೈವ್‌ ಸೇರಿದಂತೆ 16 ಡಿಜಿಟಲ್‌ ಉಪಕರಣಗಳು, ಹಲವು ಪ್ರಚೋದನಕಾರಿ ಪುಸ್ತಕಗಳು ಹಾಗೂ ಕರಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಕ್ಬಾಲ್‌ ತನ್ನ ಫೇಸ್‌ಬುಕ್‌ ಪೋಸ್ಟ್‌ಗಳಲ್ಲಿ ಐಸಿಸ್‌ ಮತ್ತು 'ಎಚ್‌ಯುಟಿ' ಸಂಘಟನೆಯ ತತ್ವಗಳನ್ನು ಬೆಂಬಲಿಸುವಂತೆ ಪ್ರಚೋದನೆ ನೀಡಿದ್ದ. ವಿವಿಧ ಕೋಮುಗಳ ನಡುವೆ ವಿಷಬೀಜ ಬಿತ್ತಿ, ಸಮಾಜದ ಸೌಹಾರ್ದತೆ ಹಾಳುಗೆಡವುವಂತಹ ಸಂದೇಶವನ್ನು ಪೋಸ್ಟ್‌ ಮಾಡಿದ್ದ.