ಬರೀ ಸೋಲುಗಳನ್ನೇ ಹೊದ್ದು ಮಲಗಿರುವ ಕಾಂಗ್ರೆಸ್‌ಗೆ ಮೈತ್ರಿ ನಾಯಕತ್ವದ ಹಕ್ಕಿಲ್ಲ; ಪ್ರಶಾಂತ್ ಕಿಶೋರ್

'ಕಾಂಗ್ರೆಸ್ ಪಕ್ಷದ ನಾಯಕತ್ವಕ್ಕೆ ಅಂತಹ ಅಧಿಕಾರವನ್ನು ಪಡೆದೇ ತೀರುವ ದೈವಿಕ ಹಕ್ಕು ಇಲ್ಲ. ಕಳೆದ 10 ವರ್ಷಗಳಲ್ಲಿ ಬರೀ ಸೋಲುಗಳನ್ನೇ ಒದ್ದು ಮಲಗಿರುವ ಪಕ್ಷ ಕಾಂಗ್ರೆಸ್‌. ಹತ್ತು ವರ್ಷಗಳಲ್ಲಿ ಶೇ.90ರಷ್ಟು ಚುನಾವಣೆ ಸೋಲುಗಳನ್ನು ಕಂಡಿದೆ. ಇಂತಹ ಅಸಮರ್ಥ ಪಕ್ಷ ಮೈತ್ರಿಕೂಟ ನಾಯಕತ್ವ ಕೇಳುವುದು ಸರಿಯಲ್ಲ’ ಎಂದು ಪ್ರಶಾಂತ್‌ ಕಿಶೋರ್‌ ಅವರು ಹೇಳಿದ್ದಾರೆ.

ಬರೀ ಸೋಲುಗಳನ್ನೇ ಹೊದ್ದು ಮಲಗಿರುವ ಕಾಂಗ್ರೆಸ್‌ಗೆ ಮೈತ್ರಿ ನಾಯಕತ್ವದ ಹಕ್ಕಿಲ್ಲ; ಪ್ರಶಾಂತ್ ಕಿಶೋರ್
Linkup
ಹೊಸದಿಲ್ಲಿ: ತೃಣಮೂಲ ಕಾಂಗ್ರೆಸ್‌ ನೇತೃತ್ವದಲ್ಲಿ ಪರ್ಯಾಯ ಪ್ರತಿಪಕ್ಷ ಕೂಟ ಕಟ್ಟಲು ಕಸರತ್ತು ನಡೆಸಿರುವ ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌, ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಗುರುವಾರ ಮತ್ತೊಮ್ಮೆ ಕಟು ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ದೇಶದಲ್ಲಿ ಬಿಜೆಪಿಗೆ ಪ್ರಬಲ ಪರ್ಯಾಯ ಪ್ರತಿಕೂಟ ರಚನೆ ಆಗಬೇಕಾದ ಅಗತ್ಯವನ್ನು ಪ್ರತಿಪಾದಿಸಿರುವ ಪ್ರಶಾಂತ್‌ ಕಿಶೋರ್‌, ‘ಪ್ರಬಲ ಪ್ರತಿಪಕ್ಷವನ್ನು ಕಾಂಗ್ರೆಸ್‌ ಪ್ರತಿನಿಧಿಸಬೇಕು ಎನ್ನುವ ಐಡಿಯಾ ಸರಿಯಿದೆ. ಆದರೆ ಆ ಪಕ್ಷದ ನಾಯಕತ್ವಕ್ಕೆ ಅಂತಹ ಅಧಿಕಾರವನ್ನು ಪಡೆದೇ ತೀರುವ ದೈವಿಕ ಹಕ್ಕು ಇಲ್ಲ. ಕಳೆದ 10 ವರ್ಷಗಳಲ್ಲಿ ಬರೀ ಸೋಲುಗಳನ್ನೇ ಹೊದ್ದು ಮಲಗಿರುವ ಪಕ್ಷ ಕಾಂಗ್ರೆಸ್‌. ಹತ್ತು ವರ್ಷಗಳಲ್ಲಿ ಶೇ.90ರಷ್ಟು ಚುನಾವಣೆ ಸೋಲುಗಳನ್ನು ಕಂಡಿದೆ. ಇಂತಹ ಅಸಮರ್ಥ ಪಕ್ಷ ಮೈತ್ರಿಕೂಟ ನಾಯಕತ್ವ ಕೇಳುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ. ಬಿಜೆಪಿ ವಿರೋಧಿ ಮೈತ್ರಿಕೂಟ ಬಲಪಡಿಸಲು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜತೆಗೆ ಕೆಲವು ದಿನಗಳ ಹಿಂದೆ ಪ್ರಶಾಂತ್‌ ಕಿಶೋರ್‌ ಮಾತುಕತೆ ನಡೆಸಿದ್ದರು. ಆದರೆ, ಎರಡನೇ ಸುತ್ತಿನ ಮಾತುಕತೆ ಮುಗಿಯುವ ವೇಳೆಗೆ ಅವರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗಿ ಬೇರ್ಪಟ್ಟಿದ್ದರು. ಆ ನಂತರ ಸರಣಿ ಟ್ವೀಟ್‌ಗಳ ಮೂಲಕ ಕಿಶೋರ್‌, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ, ಮುಂಬಯಿನಲ್ಲಿ ಬುಧವಾರಷ್ಟೇ ಕಾಂಗ್ರೆಸ್‌ ವಿರುದ್ಧ ಉದಾಸೀನದ ಹೇಳಿಕೆ ನೀಡಿದ್ದರು. ಯುಪಿಎ ಎನ್ನುವುದು ಅಸ್ತಿತ್ವದಲ್ಲಿಯೇ ಇಲ್ಲ ಎಂದಿದ್ದರು. ವಿದೇಶ ಸುತ್ತುವ ಹುಚ್ಚು ಅಂಟಿಸಿಕೊಂಡಿರುವ ರಾಹುಲ್‌ ಗಾಂಧಿಯನ್ನು ಅವರು ಹೀಯಾಳಿಸಿದ್ದರು. ಇದರ ಬೆನ್ನಿಗೆ ಈಗ ಪ್ರಶಾಂತ್‌ ಕಿಶೋರ್‌, ಕೈ ಸಾರಥ್ಯವನ್ನು ಕುಟುಕಿದ್ದಾರೆ. ಪ್ರಶಾಂತ್‌ ಕಿಶೋರ್‌ ಟೀಕೆಗೆ ಪ್ರತಿಕ್ರಿಯಿ ಸಿರುವ ಕಾಂಗ್ರೆಸ್‌, ‘ಆತ ದುಡ್ಡಿಗಾಗಿ ಪಕ್ಷಗಳ ಪರ ಕೆಲಸ ಮಾಡುವ ಆಸಾಮಿ. ಸೈದ್ಧಾಂತಿಕ ಬದ್ಧತೆ ಇಲ್ಲದೇ ಆಡುವ ಮಾತುಗಳಿಗೆ ಬೆಲೆ ಇಲ್ಲ. ಮುಖ್ಯವಾಗಿ ಪ್ರಶಾಂತ್‌ ಒಬ್ಬ ರಾಜಕೀಯ ಮುಖಂಡನೇ ಅಲ್ಲ’ ಎಂದು ಜರಿದಿದೆ.