ದೇಶದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ವೀಸಾ ಮಾನ್ಯತೆ ಆಗಸ್ಟ್ 31ರವರೆಗೂ ವಿಸ್ತರಣೆ

ಕೋವಿಡ್ ಕಾರಣದಿಂದ ತಮ್ಮ ತಾಯ್ನಾಡಿಗೆ ಪ್ರಯಾಣಿಸಲಾಗದೆ ಭಾರತದಲ್ಲಿಯೇ ಸಿಲುಕಿರುವ ವಿದೇಶಿ ಪ್ರಜೆಗಳ ಭಾರತೀಯ ವೀಸಾವನ್ನು ಆಗಸ್ಟ್ 31ರವರೆಗೂ ವಿಸ್ತರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ವೀಸಾ ಮಾನ್ಯತೆ ಆಗಸ್ಟ್ 31ರವರೆಗೂ ವಿಸ್ತರಣೆ
Linkup
ಹೊಸದಿಲ್ಲಿ: ಕೋವಿಡ್ ಕಾರಣದಿಂದ ತಮ್ಮ ದೇಶಕ್ಕೆ ಮರಳಲು ಅಂತಾರಾಷ್ಟ್ರೀಯ ವಿಮಾನಗಳು ಲಭ್ಯವಾಗದ ಕಾರಣದಿಂದ ಭಾರತದಲ್ಲಿಯೇ ಸಿಕ್ಕಿಬಿದ್ದಿರುವ ವಿದೇಶಿಗರ ವೀಸಾವನ್ನು 2021ರ ಆಗಸ್ಟ್ 31ರವರೆಗೂ ವಿಸ್ತರಿಸಲಾಗಿದೆ. 2020ರ ಮಾರ್ಚ್‌ಗೂ ಮುನ್ನ ಭಾರತಕ್ಕೆ ಅಧಿಕೃತ ಭಾರತೀಯ ವೀಸಾದೊಂದಿಗೆ ಬಂದ ಅನೇಕ ವಿದೇಶಿ ಪ್ರಜೆಗಳು ಸಾಮಾನ್ಯ ವಾಣಿಜ್ಯ ವಿಮಾನಗಳ ಹಾರಾಟ ಲಭ್ಯವಿಲ್ಲದ ಕಾರಣ ಇಲ್ಲಿಯೇ ಸಿಲುಕಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೆ ನೀಡಿದೆ. 2020ರ ಜೂನ್ 29ರಂದು ಆದೇಶ ಹೊರಡಿಸಿದ್ದ ಗೃಹ ಸಚಿವಾಲಯ, 2020ರ ಜೂನ್ 30ರ ಬಳಿಕ ಅವಧಿ ಮುಕ್ತಾಯಗೊಳ್ಳುವ ವಿದೇಶಿ ಪ್ರಜೆಗಳ ವೀಸಾ ಅವಧಿಯನ್ನು ಅಂತಾರಾಷ್ಟ್ರೀಯ ವಿಮಾನ ಕಾರ್ಯಚರಣೆಗಳು ಸಹಜವಾಗುವ ದಿನದ ನಂತರದ 30 ದಿನಗಳವರೆಗೂ ಮಾನ್ಯವಾಗಿರುತ್ತದೆ ಎಂದು ತಿಳಿಸಿತ್ತು. ಕಳೆದ ವರ್ಷದ ಲಾಕ್‌ಡೌನ್‌ ವೇಳೆ ತಮ್ಮ ವೀಸಾ ವಿಸ್ತರಣೆಯನ್ನು ಪಡೆದುಕೊಳ್ಳಲು ಎದುರಿಸುವ ಕಷ್ಟಗಳ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಆದರೆ ಅಂತಹ ವಿದೇಶಿಗರು ತಮ್ಮ ವೀಸಾಗಳ ಅವಧಿ ಅಥವಾ ತಿಂಗಳ ಆಧಾರದಲ್ಲಿ ತಮ್ಮ ವಾಸ ಅವಧಿಯ ಷರತ್ತನ್ನು ವಿಸ್ತರಿಸಿಕೊಳ್ಳಲು ಅರ್ಜಿ ಸಲ್ಲಿಸುತ್ತಿದ್ದಾರೆ. ' ಕಾರಣದಿಂದ ವಾಣಿಜ್ಯ ವಿಮಾನಗಳ ಕಾರ್ಯಾಚರಣೆ ಸಹಜಗೊಳ್ಳದಿರುವುದರಿಂದ, ಭಾರತದಲ್ಲಿಯೇ ಸಿಲುಕಿರುವ ವಿದೇಶಿಗರ ಭಾರತೀಯ ವೀಸಾ ಅಥವಾ ವಾಸ ಅವಧಿಯ ಮಿತಿಯನ್ನು 2021ರ ಆಗಸ್ಟ್ 31ರವರೆಗೂ ಮಾನ್ಯಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಯಾವುದೇ ತೆರಿಗೆ ಅಥವಾ ಅವಧಿ ಮೀರಿದ ವಾಸದ ದಂಡ ವಿಧಿಸಲಾಗುತ್ತಿಲ್ಲ. ತಮ್ಮ ವೀಸಾಗಳ ವಿಸ್ತರಣೆಗೆ ವಿದೇಶಿಗರು ಯಾವುದೇ ಎಫ್‌ಆರ್‌ಆರ್‌ಒ/ಎಫ್‌ಆರ್‌ಒಅನ್ನು ಸಲ್ಲಿಸುವ ಅಗತ್ಯವಿಲ್ಲ' ಎಂದು ಗೃಹ ಸಚಿವಾಲಯದ ಹೇಳಿಕೆ ತಿಳಿಸಿದೆ. 'ಇಂತಹ ವಿದೇಶಿ ಪ್ರಜೆಗಳು ದೇಶದಿಂದ ಹೊರ ಹೋಗುವ ಮುನ್ನ ಎಫ್‌ಆರ್‌ಆರ್‌ಒ/ಎಫ್‌ಆರ್‌ಒಗೆ ನಿರ್ಗಮನ ಅನುಮತಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಯಾವುದೇ ಶುಲ್ಕ ಅಥವಾ ಹೆಚ್ಚುವರಿ ವಾಸದ ದಂಡವಿಲ್ಲದೆ ನೀಡಲಾಗುವುದು' ಎಂದು ಅದು ತಿಳಿಸಿದೆ.