ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗಾಗಿ ಕ್ಯೂ ನಿಂತು ಸುಸ್ತಾದ ಜನ..!

ನಗರದಲ್ಲಿರುವ ಬಹುತೇಕ ಬಿಬಿಎಂಪಿ ಲಸಿಕಾ ಕೇಂದ್ರಗಳಲ್ಲಿ ಸೋಮವಾರ ಲಸಿಕೆ ಸಿಗಲಿಲ್ಲ. ಜೆಪಿ ನಗರ, ಗೊಟ್ಟಿಗೆರೆ, ಬಸನಗುಡಿ, ಹೆಬ್ಬಾಳ, ವಿಜಯನಗರ ಸೇರಿದಂತೆ ಹಲವು ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲ ಎಂದು ಸೂಚನಾ ಫಲಕ ಹಾಕಲಾಗಿತ್ತು.

ಬೆಂಗಳೂರಿನಲ್ಲಿ ಕೊರೊನಾ ಲಸಿಕೆಗಾಗಿ ಕ್ಯೂ ನಿಂತು ಸುಸ್ತಾದ ಜನ..!
Linkup
: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಜನರು ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಆದರೆ ನಗರದ ಬಹುತೇಕ ಕೇಂದ್ರಗಳಲ್ಲಿ ಲಸಿಕೆ ಕೊರತೆ ಇದೆ ಎಂದು ಫಲಕ ಹಾಕಲಾಗಿದೆ. ಇದರಿಂದ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಕ್ಕೆ ಬಂದವರು ಬಹಳ ನಿರಾಶೆಯಿಂದ ಮರಳುವಂತಾಗಿದೆ. ನಗರದಲ್ಲಿರುವ ಬಹುತೇಕ ಬಿಬಿಎಂಪಿ ಲಸಿಕಾ ಕೇಂದ್ರಗಳಲ್ಲಿ ಸೋಮವಾರ ಲಸಿಕೆ ಸಿಗಲಿಲ್ಲ. ಜೆಪಿ ನಗರ, ಗೊಟ್ಟಿಗೆರೆ, ಬಸನಗುಡಿ, ಹೆಬ್ಬಾಳ, ವಿಜಯನಗರ ಸೇರಿದಂತೆ ಹಲವು ಕೇಂದ್ರಗಳಲ್ಲಿ ಲಸಿಕೆ ಲಭ್ಯವಿಲ್ಲ ಎಂದು ಸೂಚನಾ ಫಲಕ ಹಾಕಲಾಗಿತ್ತು. ಕೆಲವು ಕೇಂದ್ರಗಳಲ್ಲಿ ಮಧ್ಯಾಹ್ನ 12 ಗಂಟೆಗೆ ಲಸಿಕೆ ಖಾಲಿಯಾಯಿತು. ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳ ಮುಂದೆ ಜನರು ಬೆಳಗ್ಗೆ 8 ಗಂಟೆಯಿಂದಲೇ ಕಾದು ನಿಂತಿದ್ದರು. ಆದರೆ ಕೆಲವೇ ಮಂದಿಗೆ ಲಸಿಕೆ ಸಿಕ್ಕಿತು. 'ಸರಕಾರ ಸೋಂಕಿತರಿಗೆ ಸರಿಯಾದ ಮೂಲ ಸೌಕರ್ಯವನ್ನೂ ಕಲ್ಪಿಸಿಲ್ಲ, ಇತ್ತ ಲಸಿಕೆಯನ್ನೂ ಸರಿಯಾಗಿ ಪೂರೈಕೆ ಮಾಡುತ್ತಿಲ್ಲ' ಎಂದು ಲಸಿಕಾ ಕೇಂದ್ರದ ಮುಂದೆ ಕಾದು ನಿಂತ ಜನರು ಆಕ್ರೋಶ ವ್ಯಕ್ತಪಡಿಸಿದರು. ಯಲಹಂಕ: ಯಲಹಂಕ ತಾಲೂಕು ವ್ಯಾಪ್ತಿಯ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಹೆಚ್ಚಿನವರಿಗೆ ಲಸಿಕೆ ದೊರೆಯಲಿಲ್ಲ. ಇದರಿಂದ ಲಸಿಕೆ ಹಾಕಿಸಲು ಬಂದಿದ್ದವರು ನಿರಾಶೆಯಿಂದ ಮರಳಿದರು. ತಾಲೂಕಿನ ಬೆಟ್ಟಹಲಸೂರು ಸೊಣ್ಣೇನಹಳ್ಳಿ, ಹೆಸರಘಟ್ಟ ಸೇರಿದಂತೆ 12 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೇವಲ 10ರಿಂದ 20 ಜನರಿಗೆ ಮಾತ್ರ ಕೋವಿಡ್‌ ಲಸಿಕೆ ಹಾಕಲಾಯಿತು.