ಗೋದಾಮಿನಲ್ಲಿ ಸೆಕ್ಸ್ ಆಟಿಕೆ ರಾಶಿ!: ದುಬಾರಿ ಹಣ ತೆತ್ತು ವಿದೇಶದಿಂದ ಟಾಯ್ಸ್ ಖರೀದಿಸಿದವರಿಗೆ ನಿರಾಸೆ

ಜನರು ತಮ್ಮ ಲೈಂಗಿಕ ತೃಪ್ತಿಗಾಗಿ ಸೆಕ್ಸ್‌ ಟಾಯ್‌ಗಳ ಮೊರೆ ಹೋಗುವುದು ಹೆಚ್ಚುತ್ತಿದೆ. ಆದರೆ ದೇಶದ ಕಾನೂನು ಇಂತಹ ಸೆಕ್ಸ್ ಆಟಿಕೆಗಳನ್ನು ನಿಷೇಧಿಸಿದೆ. ಇದರ ಅರಿವಿಲ್ಲದೆ ಅನೇಕರು ವಿದೇಶಿ ಪೋರ್ಟಲ್‌ಗಳಿಂದ ಖರೀದಿ ಮಾಡಿದ್ದಾರೆ. ಅವೆಲ್ಲವೂ ಈಗ ಬೆಂಗಳೂರಿನ ಗೋದಾಮುಗಳಲ್ಲಿ ತುಂಬಿಕೊಂಡಿವೆ.

ಗೋದಾಮಿನಲ್ಲಿ ಸೆಕ್ಸ್ ಆಟಿಕೆ ರಾಶಿ!: ದುಬಾರಿ ಹಣ ತೆತ್ತು ವಿದೇಶದಿಂದ ಟಾಯ್ಸ್ ಖರೀದಿಸಿದವರಿಗೆ ನಿರಾಸೆ
Linkup
ಬೆಂಗಳೂರು: ಬೆಂಗಳೂರಿನ ಇಲಾಖೆಯ ಗೋದಾಮುಗಳಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ಬಗೆಯ ರಾಶಿಗಟ್ಟಲೆ ತುಂಬಿಕೊಂಡಿವೆ. ಡಿಲ್ಡೋಗಳು, ಸೆಕ್ಸ್ ಗೊಂಬೆಗಳನ್ನು ಸುಂಕ ಅಧಿಕಾರಿಗಳು ವಶಪಡಿಸಿಕೊಂಡು ಗೋದಾಮುಗಳಲ್ಲಿ ತುಂಬಿದ್ದಾರೆ. ವಿದೇಶಿ ಪೋರ್ಟಲ್‌ಗಳ ಮೂಲಕ ಅನೇಕ ಬೆಂಗಳೂರಿಗರು ಈ ಸೆಕ್ಸ್ ಟಾಯ್‌ಗಳನ್ನು () ಆಮದು ಮಾಡಿಕೊಂಡಿದ್ದಾರೆ. ಅವೆಲ್ಲವೂ ವಿದೇಶಿ ಅಂಚೆ ಕಚೇರಿಗೆ () ಬಂದು ತಲುಪಿವೆ. ಆದರೆ ಅಲ್ಲಿಂದ ಅವು ಖರೀದಿದಾರರ ಕೈಗೆ ಸೇರಿಲ್ಲ. ಮಾನವ ದೇಹದ ಅಂಗವನ್ನು ಹೋಲುವಂತಹ ಆಟಿಕೆಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಿರುವ ಕಾನೂನಿನ ಬಗ್ಗೆ ಜನರಿಗೆ ಅರಿವು ಇಲ್ಲದಿರುವುದು ಇದಕ್ಕೆ ಕಾರಣ. ವಿದೇಶಿ ವೆಬ್‌ಸೈಟ್‌ಗಳು ಸೇರಿದಂತೆ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ವಿವಿಧ ಬಗೆಯ ಸೆಕ್ಸ್ ಆಟಿಕೆಗಳನ್ನು ಆಫರ್ ಸಹಿತ ಭಾರತಕ್ಕೆ ಮಾರಾಟ ಮಾಡಲಾಗುತ್ತಿದೆ. ಆನ್‌ಲೈನ್ ಖರೀದಿದಾರರು ವೆಬ್‌ಸೈಟ್‌ಗಳಲ್ಲಿ ಇವುಗಳನ್ನು ಹುಡುಕಿ ತರಿಸಿಕೊಳ್ಳುತ್ತಿದ್ದಾರೆ. ಇವು ಬೆಂಗಳೂರಿನ ಎಫ್‌ಪಿಒವರೆಗೆ ರವಾನೆ ಕೂಡ ಆಗುತ್ತವೆ. ಅನೇಕ ವಿದೇಶಿ ಇ ಕಾರ್ಮಸ್ ತಾಣಗಳು ಪುರುಷರು ಮತ್ತು ಮಹಿಳೆಯರು ಇಬ್ಬರಿಗೂ ಸೂಕ್ತವಾಗುವ ವಿಭಿನ್ನ ಬಗೆಯ ಸೆಕ್ಸ್ ಟಾಯ್‌ಗಳನ್ನು ಮಾರಾಟ ಮಾಡುತ್ತವೆ. ಈ ಟಾಯ್‌ಗಳು ಕಡಿಮೆ ಮೊತ್ತದ್ದೇನಲ್ಲ. ದುಬಾರಿ ದರ, ಹೆಚ್ಚುವರಿ ಸಾಗಾಟ ವೆಚ್ಚ ಎಲ್ಲವನ್ನೂ ಗ್ರಾಹಕರು ಪಾವತಿಸಿರುತ್ತಾರೆ. ಆದರೆ, ವಿದೇಶಿ ಅಂಚೆ ಕಚೇರಿಗೆ ವೈಮಾನಿಕ ಕೊರಿಯರ್ ಮೂಲಕ ತಲುಪಿದ ನಂತರ ಅವು ನೆಲದ ಕಾನೂನುಗಳಿಗೆ ಒಳಪಡುತ್ತವೆ. ಅಲ್ಲಿಂದ ಅಷ್ಟು ದುಬಾರಿ ಹಣ ತೆತ್ತ ಗ್ರಾಹಕರಿಗೆ ಅದರ 'ಖುಷಿ' ಸಿಗುವುದಿಲ್ಲ. 'ನಾನು 140 ಡಾಲರ್‌ ನೀಡಿ ಡಚ್ ಪೋರ್ಟಲ್ ಒಂದರಿಂದ 2019ರ ಮಾರ್ಚ್‌ ವೇಳೆ ಡಿಲ್ಡೋ ಖರೀದಿ ಮಾಡಿದ್ದೆ. ಅದನ್ನು ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಗೆ ರವಾನಿಸಲಾಗಿತ್ತು. ಅದನ್ನು ಪಡೆದುಕೊಳ್ಳಲು ತೆರಳಿದಾಗ, ಸೆಕ್ಸ್ ಟಾಯ್‌ಗಳನ್ನು ಆಮದು ಮಾಡಿಕೊಳ್ಳುವುದು ಭಾರತದಲ್ಲಿ ಅಕ್ರಮ. ಆ ಸಾಧನವನ್ನು ಜಪ್ತಿ ಮಾಡಲಾಗುವುದು ಎಂದು ಸುಂಕ ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ಮಾರಾಟಗಾರರು ನನಗೆ ಮಾಹಿತಿ ನೀಡಿರಲಿಲ್ಲ' ಎಂದು ಬನಶಂಕರಿ ನಿವಾಸಿಯೊಬ್ಬರು ತಿಳಿಸಿದ್ದಾರೆ. ಕಾನೂನಿನ ಅಡಿ ನಿಷೇಧ ಬೆಂಗಳೂರಿನ ಅನೇಕ ಯುವ ಜನರಿಗೆ ಸುಂಕ ಕಾಯ್ದೆ, 1962ರ ಸೆಕ್ಷನ್ 11 ಸಬ್ ಸೆಕ್ಷನ್ 2 (ಯು) ಬಗ್ಗೆ ತಿಳಿದಿಲ್ಲ. ಈ ಸೆಕ್ಷನ್ ಅಡಿ ಸೆಕ್ಸ್ ಆಟಿಕೆಗಳ ಆಮದು ಹಾಗೂ ರಫ್ತನ್ನು ನಿಷೇಧಿಸಲಾಗಿದೆ. ಭಾರತೀಯ ದಂಡ ಸಂಹಿತೆಯು (ಐಪಿಸಿ) ಸೆಕ್ಸ್ , ಸಾಹಿತ್ಯ, ವಿಡಿಯೋ ಫಿಲ್ಮ್ ಅಥವಾ ಪೋಟೊಗ್ರಾಫಿಕ್ ನೆಗೆಟಿವ್‌ಗಳು ಸೇರಿದಂತೆ ಅಶ್ಲೀಲ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರ ವಿರುದ್ಧ ನಿರ್ಬಂಧ ವಿಧಿಸಿದೆ. ಅಮೆರಿಕದ ಪ್ರಸಿದ್ಧ ಪೋರ್ಟಲ್ ಒಂದರಿಂದ ಆಟಿಕೆಗಳನ್ನು ತರಿಸಿಕೊಂಡಿದ್ದ ಮಹಿಳೆಯೊಬ್ಬರು, ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ನನಗೆ ಅಂಚೆ ಕಚೇರಿಯಿಂದ ಕರೆ ಬಂದಿತ್ತು. ನಾನು ತರಿಸಿಕೊಂಡ ಪಾರ್ಸೆಲ್‌ನಲ್ಲಿ ಆಕ್ಷೇಪಾರ್ಹ ವಸ್ತು ಇದೆ. ಇದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ತಿಳಿಸಿದ್ದರು. ನನ್ನ ವೈಯಕ್ತಿಕ ಆಯ್ಕೆಯ ಬಗ್ಗೆ ಏಕೆ ಈ ನಿಯಂತ್ರಣ ಎನ್ನುವುದು ಅರ್ಥವಾಗುತ್ತಿಲ್ಲ' ಎಂದು ಅವರು ಹೇಳಿದ್ದಾರೆ. ಜನರಿಗೆ ಕಾನೂನಿನ ಅರಿವು ಇಲ್ಲ ಕಸ್ಟಮ್ಸ್ ಗೋದಾಮು ಜಪ್ತಿ ಮಾಡಲಾದ ವಸ್ತುಗಳಿಂದ ಬಹುತೇಕ ತುಂಬಿ ಹೋಗಿದೆ. ಇವುಗಳಲ್ಲಿ ಹೆಚ್ಚಿನವು ವೈಯಕ್ತಿಕವಾಗಿ ಆಮದು ಮಾಡಿಕೊಂಡಿರುವಂತಹವು ಎಂದು ಚಾಮರಾಜಪೇಟೆ ಎಫ್‌ಪಿಒ ಮೂಲಗಳು ತಿಳಿಸಿವೆ. 'ನಮ್ಮ ಜನರು ಕಾನೂನನ್ನು ಕಡೆಗಣಿಸಿ ಬಹಳ ದುಬಾರಿ ಸೆಕ್ಸ್ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ. ತಮ್ಮ ವಸ್ತುಗಳನ್ನು ನೀಡದೆ ಇರುವುದಕ್ಕೆ ಕೆಲವು ಜನರು ನಮ್ಮ ವಿರುದ್ಧ ಆಕ್ರೋಶ ಪ್ರದರ್ಶಿಸಿದ್ದೂ ನಡೆದಿದೆ. ಆದರೆ ಕಾನೂನು ಅದರ ವಿರುದ್ಧ ಇದೆ' ಎಂದು ಸುಂಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಷ್ಟು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂಬುದಕ್ಕೆ ಸರಿಯಾದ ದಾಖಲೆಗಳಿಲ್ಲ. ಆದರೆ ಕೋವಿಡ್ ನಂತರದ ಅವಧಿಯಲ್ಲಿ ಇದರ ಸಂಖ್ಯೆ ಬಹಳ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಗೋದಾಮಿನ ಬಹುತೇಕ ಜಾಗವನ್ನು ಸೆಕ್ಸ್ ಆಟಿಕೆಗಳು ಆಕ್ರಮಿಸಿವೆ. ಶಿಷ್ಟಾಚಾರದ ಭಾಗವಾಗಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದು, ಅವುಗಳನ್ನು ನಾಶಪಡಿಸಲು ಆದೇಶ ನೀಡುವಂತೆ ಕೋರಿದ್ದಾರೆ.