ಪ್ರೇಯಸಿ ಜೊತೆಗಿನ ಖಾಸಗಿ ದೃಶ್ಯ ಸೆರೆಮಾಡಿ ಬ್ಲ್ಯಾಕ್‌ಮೇಲ್; ಲಾಡ್ಜ್‌ನಲ್ಲಿ ಚೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ

ಸುಪ್ರೀತ್‌ ಕೆಲ ವರ್ಷಗಳಿಂದ ತಮ್ಮದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. 3 ತಿಂಗಳ ಹಿಂದೆ ಆಕೆಯನ್ನು ಅರಸೀಕೆರೆಯ ಬೆಟ್ಟವೊಂದಕ್ಕೆ ಕರೆದೊಯ್ದು ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ನಾಲ್ವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ನಂತರ ಸುಪ್ರೀತ್‌ಗೆ ಈ ದೃಶ್ಯ ತೋರಿಸಿ ಆತನಿಂದ 3 ಸಾವಿರ ರೂ. ಹಾಗೂ ಮೊಬೈಲ್‌ ನಂಬರ್‌ ಪಡೆದಿದ್ದರು. ಕೆಲ ದಿನಗಳ ಬಳಿಕ ಸುಪ್ರೀತ್‌ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸಿ, ಹಣ ಪೀಕಿದ್ದರು.

ಪ್ರೇಯಸಿ ಜೊತೆಗಿನ ಖಾಸಗಿ ದೃಶ್ಯ ಸೆರೆಮಾಡಿ ಬ್ಲ್ಯಾಕ್‌ಮೇಲ್; ಲಾಡ್ಜ್‌ನಲ್ಲಿ ಚೆಸ್ಕಾಂ ಸಿಬ್ಬಂದಿ ಆತ್ಮಹತ್ಯೆ
Linkup
ಬೆಂಗಳೂರು: ಯುವತಿಯೊಂದಿಗಿನ ಖಾಸಗಿ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ನಾಲ್ವರು ಬಾಲಕರಿಂದ ಬ್ಲ್ಯಾಕ್‌ಮೇಲ್‌ಗೊಳಗಾದ ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ಕಂಪನಿ(ಚೆಸ್ಕಾಂ) ಕ್ಲರ್ಕ್ ಡೆತ್‌ನೋಟ್‌ ಬರೆದು ಉಪ್ಪಾರಪೇಟೆಯ ಲಾಡ್ಜ್‌ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹಾಸನ ಜಿಲ್ಲೆ ಅರಸೀಕೆರೆಯ ಸುಪ್ರೀತ್‌(32). ಸುಪ್ರೀತ್‌ ಕೆಲ ವರ್ಷಗಳಿಂದ ತಮ್ಮದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. 3 ತಿಂಗಳ ಹಿಂದೆ ಆಕೆಯನ್ನು ಅರಸೀಕೆರೆಯ ಬೆಟ್ಟವೊಂದಕ್ಕೆ ಕರೆದೊಯ್ದು ಸರಸ ಸಲ್ಲಾಪದಲ್ಲಿ ತೊಡಗಿದ್ದನ್ನು ನಾಲ್ವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ನಂತರ ಸುಪ್ರೀತ್‌ಗೆ ಈ ದೃಶ್ಯ ತೋರಿಸಿ ಆತನಿಂದ 3 ಸಾವಿರ ರೂ. ಹಾಗೂ ಮೊಬೈಲ್‌ ನಂಬರ್‌ ಪಡೆದಿದ್ದರು. ಕೆಲ ದಿನಗಳ ಬಳಿಕ ಸುಪ್ರೀತ್‌ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸಿ, ಹಣ ಪೀಕಿದ್ದರು. ಆತಂಕಗೊಂಡ ಸುಪ್ರೀತ್‌ ಆರೋಪಿಗಳಿಗೆ ಆಗಾಗ್ಗೆ 3ರಿಂದ 5 ಸಾವಿರ ರೂ.ವರೆಗೆ ಹಣ ಕೊಡುತ್ತಿದ್ದ. ಇತ್ತೀಚೆಗೆ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟ ಬಾಲಕರು, ಪ್ರಿಯತಮೆಯ ನಂಬರ್‌ ಕೊಡುವಂತೆ ಪೀಡಿಸುತ್ತಿದ್ದರು. ವಿಷ ಸೇವಿಸಿ ಆತ್ಮಹತ್ಯೆನೊಂದ ಸುಪ್ರೀತ್‌ ಅರಸೀಕೆರೆಯಿಂದ ಬೆಂಗಳೂರಿಗೆ ಬಂದು ಉಪ್ಪಾರಪೇಟೆಯ ಲಾಡ್ಜ್‌ವೊಂದರಲ್ಲಿ ಮಧ್ಯಾಹ್ನ ಊಟ ಮಾಡಿ ಡೆತ್‌ನೋಟ್‌ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ವಿಷ ಸೇವಿಸಿದ ಬಳಿಕ ರೂಂನ ಸ್ನಾನದ ಕೋಣೆಗೆ ಹೋಗಿ ನಲ್ಲಿ ನೀರು ಆನ್‌ ಮಾಡಿದ್ದ. ರೂಂನಿಂದ ನೀರು ಲಾಡ್ಜ್‌ನ ಹೊರಗೆ ಹರಿದು ಬರುತ್ತಿರುವುದನ್ನು ಸಿಬ್ಬಂದಿ ಗಮನಿಸಿದ್ದರು. ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ಮೃತದೇಹ ಕಂಡು ಬಂದಿತ್ತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಉಪ್ಪಾರಪೇಟೆ ಪೊಲೀಸರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.