ಸಿಲಿಕಾನ್‌ ಸಿಟಿ ಕೂಲ್‌ ಕೂಲ್‌; ಹಾಯಾದ ವಾತಾವರಣವನ್ನು ಎಂಜಾಯ್‌ ಮಾಡ್ತಿದ್ದಾರೆ ಬೆಂಗಳೂರಿಗರು

ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಇದೆ. ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯ ರಾಜಧಾನಿ ಬೆಂಗಳೂರಿಗೆ ತಟ್ಟುತ್ತಲೇ ಇದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ನಗರದ ವಾತಾವರಣ ಸಂಪೂರ್ಣ ತಣ್ಣಗಿದ್ದು, ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ.

ಸಿಲಿಕಾನ್‌ ಸಿಟಿ ಕೂಲ್‌ ಕೂಲ್‌; ಹಾಯಾದ ವಾತಾವರಣವನ್ನು ಎಂಜಾಯ್‌ ಮಾಡ್ತಿದ್ದಾರೆ ಬೆಂಗಳೂರಿಗರು
Linkup
ಬೆಂಗಳೂರು: ಸಿಲಿಕಾನ್ ಸಿಟಿ ಕೂಲ್ ಕೂಲಾಗಿದೆ. ಎಲ್ಲೆಡೆ ಜಿಟಿ ಜಿಟಿ ಮಳೆ, ದಟ್ಟ ಮಂಜು ಆವರಿಸಿದೆ. ಹಾಯಾದ ವಾತಾವರಣ ಇದೆ. ಮಳೆ, ಮಂಜು ಕೆಲವರಿಗೆ ಓಡಾಟಕ್ಕೆ ಸ್ವಲ್ಪ ಕಿರಿ ಕಿರಿಯಾದರೂ ಕೂಲ್ ವಾತಾವರಣವನ್ನು ಬೆಂಗಳೂರಿನ ಜನರು ಸಖತ್ ಎಂಜಾಯ್ ಮಾಡ್ತಿದ್ದಾರೆ. ಕಳೆದ ಹಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಇದೆ. ವಾಯುಭಾರ ಕುಸಿತದ ಎಫೆಕ್ಟ್ ರಾಜ್ಯ ರಾಜಧಾನಿ ಬೆಂಗಳೂರಿಗೆ ತಟ್ಟುತ್ತಲೇ ಇದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ನಗರದ ವಾತಾವರಣ ಸಂಪೂರ್ಣ ತಣ್ಣಗಿದ್ದು, ನಿರಂತರವಾಗಿ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇದೆ. ರೈನ್ ಕೋಟ್ ಜಾಕೆಟ್ ಹಾಕಿ ಹೊರ ಬರುತ್ತಿದ್ದಾರೆ ಜನಮಳೆ ಹಾಗೂ ಚಳಿಯಿಂದ ರಕ್ಷಣೆ ಪಡೆಯಲು ಜನರು ರೈನ್ ಕೋಟ್ ಹಾಗೂ ಜಾಕೆಟ್, ಮಂಕಿ ಕ್ಯಾಪ್ ಮೊರೆ ಹೋಗಿದ್ದಾರೆ. ಜೊತೆಗೆ ಹೋಟೆಲ್ ಗಳ ಮುಂದೆ ಬಿಸಿ ಬಿಸಿ ಕಾಫಿ ಹೀರುತ್ತಾ ತಣ್ಣಗಿನ ವಾತಾವರಣವನ್ನು ಎಂಜಾಯ್ ಮಾಡ್ತಿದ್ದಾರೆ. ಬೆಂಗಳೂರು ಚಳಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಬೆಂಗಳೂರು ಚಳಿ ಹಾಗೂ ಜಿಟಿ ಜಿಟಿ ಮಳೆಯ ವಾತಾವರಣ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹಲವು ಮಂದಿ ನಗರದ ಹಿತಕರ ವಾತಾವರಣದ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ಸ್ಟೇಟಸ್‌ಗಳನ್ನು ಕೂಡ ಹಾಕುತ್ತಿದ್ದಾರೆ. ಆರೋಗ್ಯ ಸಚಿವ ಡಾ.‌ಕೆ ಸುಧಾಕರ್ ಕೂಡಾ ಫೇಸ್ ಬುಕ್‌ನಲ್ಲಿ ಸ್ಟೇಟಸ್ ಹಂಚಿಕೊಂಡಿದ್ದಾರೆ. ಹಿತಕರವಾದ ವಾತಾವರಣ, ತಂಪಾದ ಗಾಳಿ ಮತ್ತು ಸುರಿಯುವ ತುಂತುರು ಮಳೆ ನಮ್ಮ ಬೆಂಗಳೂರನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುತ್ತಿದೆ. ಚಳಿಗಾಲದ ಆರಂಭವನ್ನು ಸ್ವಾಗತಿಸಲು ನಿಮ್ಮ ಬ್ಲೇಜರ್, ಸ್ಟೋಲ್ ಮತ್ತು ಬೆಚ್ಚಗಿನ ಉಣ್ಣೆಯ ಉಡುಗೆಗಳನ್ನು ನೀವು ಹೊರತೆಗೆಯುವ ಸಮಯ! ಎಂದು ಸಚಿವ ಡಾ. ಕೆ ಸುಧಾಕರ್ ಫೇಸ್ ಬುಕ್ ನಲ್ಲಿ ತಮ್ಮ ಫೋಟೋ ಹಂಚಿಕೊಂಡಿದ್ದಾರೆ.