ಬೆಂಗಳೂರಿನ ಹಲವೆಡೆ ಮಂಗಳವಾರ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ..

ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ನಗರದ ಕೆಲವು ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನ ಹಲವೆಡೆ ಮಂಗಳವಾರ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ..
Linkup
: ತುರ್ತು ಹಿನ್ನಲೆಯಲ್ಲಿ ಆಗಸ್ಟ್ 31 ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ನಗರದ ಕೆಲವು ಭಾಗದಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವ್ಯತ್ಯಯವಾಗುವ ಪ್ರದೇಶಗಳು: ಶಾಂತಲಾ ನಗರ, ಶಾಂತಿನಗರ, ವಿನಾಯಕ ನಗರ, ಆನೆಪಾಳ್ಯ, ಎಲ್‌. ಆರ್‌. ನಗರ, ಅಂಬೇಡ್ಕರ್‌ ನಗರ, ನೀಲಸಂದ್ರ, ಆಸ್ಟಿನ್‌ ಟೌನ್‌, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್‌ಮಂಡ್‌ ಟೌನ್‌, ಎಂ.ಜಿ.ರಸ್ತೆ, ಜೆ. ಕೆ. ಪುರ, ಎಂ. ಬಿ. ಗಾರ್ಡನ್‌, ವಿಕ್ಟೋರಿಯ ಲೇಔಟ್‌, ಜೀವನ್‌ ಬಿಮಾ ನಗರ, ಎಚ್‌ಎಎಲ್‌ 2 ಮತ್ತು 3ನೇ ಹಂತದಲ್ಲಿ ನೀರು ಇರೋದಿಲ್ಲ. ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಕೋಡಿಹಳ್ಳಿ, ಹನುಮಂತಪ್ಪ ಲೇಔಟ್‌, ಹಲಸೂರು, ಜೋಗುಪಾಳ್ಯ, ಕೇಂಬ್ರಿಡ್ಜ್‌ ಲೇಔಟ್‌, ಗೌತಮ್‌ಪುರ, ದೀನಬಂಧು ನಗರ, ರಾಜೇಂದ್ರ ನಗರ, ನಂಜಪ್ಪ ರೆಡ್ಡಿ ಲೇಔಟ್‌, ಕೆ. ಆರ್‌. ನಂಜಪ್ಪ ಲೇಔಟ್‌, ಆಡುಗೋಡಿ, ಕೋರಮಂಗಲ, ಕೆಎಚ್‌ಬಿ ಬ್ಲಾಕ್‌, ಕತ್ತಳಿ ಪಾಳ್ಯ, ಕೆಎಚ್‌ಬಿ ಕಾಲೊನಿ, ಜಾನ್‌ ನಗರ, ಎನ್‌ಜವಿ, ಜಯನಗರ 3 ಮತ್ತು 4ನೇ ಬ್ಲಾಕ್‌ ಹಾಗೂ 4ನೇ ಟಿ ಬ್ಲಾಕ್‌ನಲ್ಲೂ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗಲಿದೆ. ಇನ್ನು, ತಿಲಕ ನಗರ, ಎಸ್‌ಆರ್‌ ನಗರ, ಚಂದ್ರಪ್ಪ ನಗರ, ಈರಮ್ಮ ಲೇಔಟ್‌, ವೆಂಕಟೇಶ್ವರ ಲೇಔಟ್‌, ಭುವನಪ್ಪ ಲೇಔಟ್‌, ಜೋಗಿ ಕಾಲೊನಿ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಮಾರುತಿ ನಗರ, ನೇತಾಜಿ ನಗರ, ನಾಗಮ್ಮ ನಗರ, ಕೇಶವನಗರ, ಕೆ.ಪಿ.ಅಗ್ರಹಾರ, ನ್ಯೂ ಬಿನ್ನಿಲೇಔಟ್‌, ಶ್ರೀನಗರ, ಚಾಮರಾಜಪೇಟೆ, ಪಾದರಾಯನಪುರ, ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್‌ ಕಾಲೊನಿ, ಐಟಿಐ ಲೇಔಟ್‌, ಗುರುರಾಜ ಲೇಔಟ್‌, ಕತ್ರಿಗುಪ್ಪೆ, ಬಸವನಗುಡಿ, ಎನ್‌.ಆರ್‌.ಕಾಲೊನಿಯಲ್ಲೂ ನೀರು ಪೂರೈಕೆ ಇರೋದಿಲ್ಲ. ಇನ್ನುಳಿದಂತೆ ಮೌಂಟ್‌ ಜಾಯ್‌ ಎಕ್ಸ್‌ಟೆನ್ಷನ್‌, ಕುಮಾರ ಸ್ವಾಮಿ ಲೇಔಟ್‌ 1 ಮತ್ತು 2 ನೇ ಹಂತ, ವಿಠ್ಠಲ ನಗರ, ಬನಶಂಕರಿ 1ನೇ ಹಂತ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ನೀರು ಪೂರೈಕೆ ಸ್ಥಗಿತ ಆಗಲಿದ್ದು, ಬಳಿಕ ಯಥಾಸ್ಥಿತಿಗೆ ಬರಲಿದೆ.