ಬೆಂಗಳೂರಿನ ಬಾಡಿಗೆ ಮನೆಯಲ್ಲೇ ಸಿಂಥೆಟಿಕ್‌ ಡ್ರಗ್ಸ್‌ ತಯಾರಿ: ದೇಶದ ವಿವಿಧೆಡೆ ಇಲ್ಲಿಂದಲೆ ರವಾನೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಬೆಂಗಳೂರಿನ ಬಾಡಿಗೆ ಮನೆಯಲ್ಲೇ ಸಿಂಥೆಟಿಕ್‌ ಡ್ರಗ್ಸ್‌ ತಯಾರಿ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. - ತಲೆಮರೆಸಿಕೊಂಡ ಸಹೋದರನಿಗಾಗಿ ಶೋಧವಿಕ ಸುದ್ದಿಲೋಕ

ಬೆಂಗಳೂರಿನ ಬಾಡಿಗೆ ಮನೆಯಲ್ಲೇ ಸಿಂಥೆಟಿಕ್‌ ಡ್ರಗ್ಸ್‌ ತಯಾರಿ: ದೇಶದ ವಿವಿಧೆಡೆ ಇಲ್ಲಿಂದಲೆ ರವಾನೆ
Linkup
: ನಗರದ ಹೊರ ವಲಯದಲ್ಲಿ ಸಿಂಥೆಟಿಕ್‌ ಡ್ರಗ್ಸ್‌ ತಯಾರು ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನೈಜೀರಿಯಾ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ. ಆಫ್ರಿಕಾ ಮೂಲದಿಂದ ಬಂದು ಹೆಸರಘಟ್ಟ ಮುಖ್ಯ ರಸ್ತೆಯ ತರಬನಹಳ್ಳಿಯಲ್ಲಿ ವಾಸವಿದ್ದ ರಿಚರ್ಡ್‌ ಬಂಧಿತ. ಬಂಧಿತನ ಸಹೋದರ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಆರೋಪಿಯಿಂದ 50 ಲಕ್ಷ ರೂ. ಮೌಲ್ಯದ 900 ಗ್ರಾಂ ಕೊಕೇನ್‌, 50 ಗ್ರಾಂ ಎಂಡಿಎಂಎ ಕ್ರಿಸ್ಟಲ್‌, ಮಾದಕ ವಸ್ತು ತಯಾರಿಸಲು ಬಳಸುತ್ತಿದ್ದ 10 ಲೀಟರ್‌ ಕುಕ್ಕರ್‌, ಎರಡು ಮೊಬೈಲ್‌ ಫೋನ್‌, ಒಂದು ತೂಕದ ಯಂತ್ರ, ಹೋಂಡಾ ಡಿಯೊ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಆರೋಪಿ ರಿಚರ್ಡ್‌ ಹಾಗೂ ಆತನ ಸಹೋದರ 2019ರಲ್ಲಿ ನೈಜೀರಿಯಾದಿಂದ ವಾಣಿಜ್ಯ ವೀಸಾದಡಿ ದೆಹಲಿಗೆ ಬಂದಿದ್ದರು. ಆರು ತಿಂಗಳ ಹಿಂದೆ ನಗರಕ್ಕೆ ಬಂದು ರಾಮಮೂರ್ತಿ ನಗರದಲ್ಲಿ ನೆಲೆಸಿದ್ದರು. ನಂತರ ಎರಡು ತಿಂಗಳಿಂದ ತರಬನಹಳ್ಳಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇದೇ ಮನೆಯಲ್ಲಿ ಮಾದಕ ವಸ್ತು ತಯಾರಿಸಿ, ಮಾರಾಟ ಮಾಡುವ ಮೂಲಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಮನೆಯನ್ನೇ ಫ್ಯಾಕ್ಟರಿ ಮಾಡಿಕೊಂಡಿದ್ದ ಆರೋಪಿಗಳು: ರಿಚರ್ಡ್‌ ಹಾಗೂ ಆತನ ಸಹೋದರ ತರಬನಹಳ್ಳಿಯ ಬಾಡಿಗೆ ಮನೆಯಲ್ಲೇ ಮಾದಕ ವಸ್ತು ತಯಾರಿಸುವ ಕಾರ್ಖಾನೆ ತೆರೆದಿದ್ದರು. ವಿದೇಶಗಳಿಂದ ಮಾದಕ ವಸ್ತು ತಯಾರಿಸುವ ಕಚ್ಚಾವಸ್ತುವನ್ನು ಡಾರ್ಕ್ವೆಬ್‌ ಹಾಗೂ ಕೊರಿಯರ್‌ ಮೂಲಕ ತರಿಸಿಕೊಳ್ಳುತ್ತಿದ್ದರು. ರಾಸಾಯನಿಕಗಳನ್ನು ಕುಕ್ಕರ್‌ನಲ್ಲಿ ಕುದಿಸಿ ಡ್ರಗ್‌ ತಯಾರು ಮಾಡುತ್ತಿದ್ದರು. ಪ್ರೆಶರ್‌ ಕುಕ್ಕರ್‌ನಲ್ಲಿ ರಾಸಾಯನಿಕ ಬಳಸಿ ಅದನ್ನು ಕುದಿಸಿ ಅದರಿಂದ ಬರುವ ಹೊಗೆಯಿಂದ ಎಂಡಿಎಂಎ ಕ್ರಿಸ್ಟಲ್‌ ಉತ್ಪಾದಿಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ. ವಿದೇಶಕ್ಕೂ ಸರಬರಾಜು! ಎಂಡಿಎಂಎ ಕ್ರಿಸ್ಟಲ್‌ ತಯಾರಿಸುತ್ತಿದ್ದ ಆರೋಪಿಗಳು ಕೊರಿಯರ್‌ ಮೂಲಕ ವಿದೇಶಕ್ಕೆ ಸರಬರಾಜು ಮಾಡಿ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದರು. ಅಲ್ಲದೆ, ರಾಜ್ಯ, ಹೊರ ರಾಜ್ಯಗಳ ವಿದ್ಯಾರ್ಥಿಗಳು, ಟೆಕ್ಕಿಗಳು, ನಗರ ಮತ್ತು ಹೊರ ಹೊಲಯದಲ್ಲಿ ಆಯೋಜಿಸುತ್ತಿದ್ದ ದೊಡ್ಡ ದೊಡ್ಡ ಪಾರ್ಟಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.