ಬೆಂಗಳೂರಿನಲ್ಲಿ ಸಂಜೆ ಮಳೆ ಆರ್ಭಟ: ತಗ್ಗು ಪ್ರದೇಶಗಳು ಜಲಾವೃತ

ಮಾನ್ಸೂನ್ ಈಗಾಗಲೇ ಕೇರಳಕ್ಕೆ ಕಾಲಿಟ್ಟಿದ್ದು, ರಾಜ್ಯದಲ್ಲಿ ಮುಂಗಾರು ಮಳೆ ಆರಂಭಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ, ರೋಹಿಣಿ ಮಳೆಯ ಅಬ್ಬರ ರಾಜ್ಯಾದ್ಯಂತ ಶುರುವಾಗಿದೆ.

ಬೆಂಗಳೂರಿನಲ್ಲಿ ಸಂಜೆ ಮಳೆ ಆರ್ಭಟ: ತಗ್ಗು ಪ್ರದೇಶಗಳು ಜಲಾವೃತ
Linkup
: ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಬೆಂಗಳೂರಿನಲ್ಲಿ ಆರಂಭವಾದ ಸಂಜೆ ಮಳೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ವೇಳೆ ಗುಡುಗಿನ ಆರ್ಭಟ ಶುರುವಾಯ್ತು. ಸಂಜೆ 4 ಗಂಟೆ ವೇಳೆಗೆ ಮಳೆಯಾಟ ಶುರುವಾಯ್ತು. ಮಾನ್ಸೂನ್ ಈಗಾಗಲೇ ಕೇರಳಕ್ಕೆ ಕಾಲಿಟ್ಟಿದ್ದು, ರಾಜ್ಯದಲ್ಲಿ ಮುಂಗಾರು ಮಳೆ ಆರಂಭಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಇದರ ಬೆನ್ನಲ್ಲೇ, ರೋಹಿಣಿ ಮಳೆಯ ಅಬ್ಬರ ರಾಜ್ಯಾದ್ಯಂತ ಶುರುವಾಗಿದೆ. ರಾಜಧಾನಿ ನಗರವಂತೂ ಒದ್ದೆ ಮುದ್ದೆಯಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಇಲ್ಲ. ತೀರಾ ಅಗತ್ಯ ಚಟುವಟಿಕೆಗೆ ಮಾತ್ರ ವಾಹನಗಳ ಬಳಕೆಗೆ ಅನುಮತಿ ಇರುವ ಹಿನ್ನೆಲೆಯಲ್ಲಿ, ಮಳೆಯ ನಡುವೆ ಟ್ರಾಫಿಕ್ ಭರಾಟೆ ಇಲ್ಲವಾಗಿದೆ. ಆದ್ರೆ, ಅಗತ್ಯ ವಸ್ತು ಸರಬರಾಜು ವಾಹನಗಳಿಗೆ ಮಳೆ ಅಡ್ಡಿಯಾಗಿ ಪರಿಣಮಿಸಿದೆ. ಎಂದಿನಂತೆ ಬೆಂಗಳೂರಿನ ಹಲವೆಡೆ ರಸ್ತೆಗಳಲ್ಲಿ ನಿಂತು ಸಂಚಾರಕ್ಕೆ ಅಡಚಣೆಯಾಗಿದೆ. ಬಿಟಿಎಂ ಲೇಔಟ್ ಸೇರಿದಂತೆ ಹಲವೆಡೆ ಮನೆಗಳ ಮುಂದೆ ನೀರು ನಿಂತಿರುವ ಕಾರಣ, ವಾಹನಗಳು ಮುಳುಗಡೆಯಾಗುವ ಆತಂಕದಲ್ಲಿವೆ. ನಗರದಲ್ಲಿ ಮಳೆ ಆರಂಭಕ್ಕೂ ಮುನ್ನ ಕೆಲಕಾಲ ಗುಡುಗು, ಮಿಂಚು ಹಾಗೂ ಬಿರುಗಾಳಿ ಆರ್ಭಟವಿತ್ತು. ಹೀಗಾಗಿ, ಅಲ್ಲಲ್ಲಿ ಮರ ಬಿದ್ದ ಘಟನೆಗಳೂ ನಡೆದಿವೆ. ಬೆಂಗಳೂರು ನಗರದಲ್ಲಿ ಇನ್ನೆರಡು ದಿನ ಇದೇ ರೀತಿ ವಾತಾವರಣ ಇರಲಿದೆ.