ಬೆಂಗಳೂರು: ಜನರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್‌ ಮುಖ್ಯ ಪೇದೆಯ ಕೈ ಕಚ್ಚಿದ ಮಹಿಳೆಯ ಬಂಧನ!

ಪೊಲೀಸರು ತಮ್ಮ ಪಾಡಿಗೆ ತಾವು ಚಿಕ್ಕಪೇಟೆಯಲ್ಲಿ ಫುಟ್‌ಪಾತ್‌ ಮೇಲಿನ ಅಂಗಡಿಗಳನ್ನು ತೆರವು ಕಾರ್ಯಾಚರಣೆ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಗ್ರಾಹಕಿಯೊಬ್ಬರು ಪೊಲೀಸರ ಕೃತ್ಯಕ್ಕೆ ಕೋಪಗೊಂಡು ಅವರ ವಿರುದ್ಧ ಕಿಡಿಕಾರಿದ್ದಾಳೆ. ಅವರ ವಿಡಿಯೋ ಕೂಡ ಮಾಡಿದ್ದಾಳೆ. ನಂತರದ ಪೊಲೀಸ್‌ ಪೇದೆಯ ಕೈ ಕಚ್ಚಿದ್ದಾಳೆ.

ಬೆಂಗಳೂರು: ಜನರಿಗೆ ತೊಂದರೆ ಕೊಡಬೇಡಿ ಎಂದು ಪೊಲೀಸ್‌ ಮುಖ್ಯ ಪೇದೆಯ ಕೈ ಕಚ್ಚಿದ ಮಹಿಳೆಯ ಬಂಧನ!
Linkup
ಬೆಂಗಳೂರು: ಚಿಕ್ಕಪೇಟೆಯಲ್ಲಿ ಭಾನುವಾರ ಫುಟ್‌ಪಾತ್‌ ಮೇಲಿನ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದ ಪೊಲೀಸ್‌ ಮುಖ್ಯ ಪೇದೆ ಕೈಗೆ ಕಚ್ಚಿದ ಮಹಿಳೆಯನ್ನು ಕೆ.ಆರ್‌.ಮಾರುಕಟ್ಟೆ ಬಂಧಿಸಿದ್ದಾರೆ. ಕೆಂಗೇರಿ ನಿವಾಸಿ ರೆಜಿನಾ(30) ಬಂಧಿತ . ಚಿಕ್ಕಪೇಟೆ ಬಳಿ ಫುಟ್‌ಪಾತ್‌ ಮೇಲೆ ಇಟ್ಟುಕೊಂಡಿದ್ದ ಅಂಗಡಿಗಳನ್ನು ಭಾನುವಾರ ಬೆಳಗ್ಗೆ ಕೆ.ಆರ್‌.ಮಾರುಕಟ್ಟೆ ಪೊಲೀಸರು ತೆರವುಗೊಳಿಸುತ್ತಿದ್ದರು. ಚಿಕ್ಕಪೇಟೆಗೆ ಶಾಪಿಂಗ್‌ಗೆ ಬಂದಿದ್ದ ರೆಜಿನಾ ಪೊಲೀಸರ ಕಾರ್ಯವನ್ನು ಗಮನಿಸಿದ್ದಳು. ಕೂಡಲೇ ಪೊಲೀಸರ ಬಳಿ ಬಂದು 'ಜನರಿಗೇಕೆ ಸಮಸ್ಯೆ ಮಾಡುತ್ತಿದ್ದೀರಿ' ಎಂದು ವಾಗ್ವಾದ ಆರಂಭಿಸಿದ್ದಾಳೆ. ಮೊಬೈಲ್‌ನಲ್ಲಿ ಪೊಲೀಸರ ವಿಡಿಯೋ ತೆಗೆಯಲು ಮುಂದಾಗಿದ್ದಳು. ಆ ವೇಳೆ ಕೆ.ಆರ್‌.ಮಾರುಕಟ್ಟೆಯ ಪೊಲೀಸ್‌ ಸಿಬ್ಬಂದಿ ಮೊಬೈಲ್‌ನಲ್ಲಿ ವಿಡಿಯೋ ಮಾಡದಂತೆ ಮೊಬೈಲ್‌ ಕಸಿದುಕೊಂಡಿದ್ದರು. ಇದರಿಂದ ಆಕ್ರೋಶಗೊಂಡ ಮಹಿಳೆ, ಪೊಲೀಸ್‌ ಮುಖ್ಯಪೇದೆ ವಿಜಯ್‌ಕುಮಾರ್‌ ಕೈ ಕಚ್ಚಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆಯನ್ನು ಕೆ.ಆರ್‌.ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.