ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬೀದಿಯಲ್ಲಿ ಬಿದ್ದು ನರಳಾಡಿದ ವ್ಯಕ್ತಿ!

ಉಸಿರಾಟದ ತೊಂದರೆಯಿಂದ 40ವರ್ಷದ ವ್ಯಕ್ತಿಯೊಬ್ಬರು ಕಮಲನಗರ ಮಾರ್ಕೆಟ್‌ ರಸ್ತೆಯಲ್ಲಿ ನರಳುಡುತ್ತಾ ಬಿದ್ದಿದರು. ಕೊರೊನಾ ಶಂಕೆ ಹಿನ್ನೆಲೆ ಯಾರು ಕೂಡ ಅವರ ಹತ್ತಿರ ತೆರಳಲಿಲ್ಲ. ಬೆಂಗಳೂರಿನ ಆಸ್ಪತ್ರೆಯಲ್ಲಿ ಬೆಡ್‌ ಹಾಗೂ ಆಕ್ಸಿಜನ್ ಕೊರತೆ ಇದೆ ಎನ್ನುವ ಆರೋಪಗಳಿವೆ.

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದ ಬೀದಿಯಲ್ಲಿ ಬಿದ್ದು ನರಳಾಡಿದ ವ್ಯಕ್ತಿ!
Linkup
ಬೆಂಗಳೂರು: ಕೊವಿಡ್-19 ಮಹಾಮಾರಿಯಿಂದ ಕೊವಿಡ್ ಸೋಂಕಿತರು ನೋವು ಒಂದೇ ಕಡೆಯಾದರೆ , ನಾನ್ ಕೊವಿಡ್ ರೋಗಿಗಳಿಗೆ ಸಕಾಲಕ್ಕೆ ಚಿತ್ಸೆ ಸಿಗುತ್ತಿಲ್ಲ . ಇದೀಗ ಉಸಿರಾಟದ ತೊಂದರೆಯಿಂದ 40ವರ್ಷದ ವ್ಯಕ್ತಿಯೊಬ್ಬರು ಕಮಲನಗರ ಮಾರ್ಕೆಟ್‌ ರಸ್ತೆಯಲ್ಲಿ ನರಳುಡುತ್ತಾ ಬಿದ್ದಿದರು. ಕೋವಿಡ್ ವೈರಸ್ ಭಯದಿಂದ ಸಾರ್ವಜನಿಕರು ಸಹ ಮುಟ್ಟಲು ಅಥವಾ ಹತ್ತಿರ ತೆರಳಲು ಹೆದರಿದ್ದಾರೆ. ಇನ್ನು ಮಾಜಿ ಆಡಳಿತ ಪಕ್ಷದ ನಾಯಕರಾದ ಎಮ್.ಶಿವರಾಜು ರವರಿಗೆ ಸಾರ್ವಜನಿಕರು ದೂರವಾಣಿ ಕರೆ ಮಾಡಿ ತಿಳಿಸಿದರು . ಸ್ಥಳಕ್ಕೆ ಭೇಟಿ ನೀಡಿ ,ಉಸಿರಾಟದ ತೊಂದರೆಯಿಂದ ನರುಳುತ್ತಿದ್ದ ವ್ಯಕ್ತಿಯನ್ನ ಆಂಬುಲೆನ್ಯ್ ಮೂಲಕ ,ಮಲ್ಲೇಶ್ವರಂ ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಯಿತು.