![](https://vijaykarnataka.com/photo/82907268/photo-82907268.jpg)
ಹೊಸದಿಲ್ಲಿ: ಅಮೆರಿಕದ ದೈತ್ಯ ಔಷಧ ಉತ್ಪಾದಕ ಕಂಪನಿಗಳಾದ ಮತ್ತು ತಾವು ತಯಾರಿಸಿದ ಲಸಿಕೆಯನ್ನು ನೇರವಾಗಿ ದಿಲ್ಲಿ ಸರಕಾರಕ್ಕೆ ನೀಡುವುದಿಲ್ಲ ಎಂದಿವೆ ಎಂಬುದಾಗಿ ದಿಲ್ಲಿ ಸಿಎಂ ಹೇಳಿದ್ದಾರೆ.
ಲಸಿಕೆ ಉತ್ಪಾದಕರು, ನಾವೇನಿದ್ದರೂ ಕೇಂದ್ರ ಸರಕಾರದ ಜತೆ ವ್ಯವಹರಿಸುತ್ತೇವೆ ಎಂದು ಹೇಳಿವೆ ಎಂಬುದನ್ನೂ ಕೇಜ್ರಿವಾಲ್ ತಿಳಿಸಿದ್ದಾರೆ. ದಿಲ್ಲಿಯಲ್ಲಿ ಲಸಿಕೆ ಕೊರತೆ ತೀವ್ರವಾಗಿದ್ದು 18-44 ವರ್ಷ ವಯೋಮಾನದವರಿಗೆ ಭಾನುವಾರದಿಂದ ಲಸಿಕೆ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರ ಬೆನ್ನಿಗೆ ಈ ಸುದ್ದಿಯೂ ಹೊರಬಿದ್ದಿದೆ.
"ನಾವು ಲಸಿಕೆಗಳಿಗಾಗಿ ಫೈಜರ್ ಮತ್ತು ಮಾಡೆರ್ನಾ ಅವರೊಂದಿಗೆ ಮಾತನಾಡಿದ್ದೇವೆ. ಇಬ್ಬರೂ ತಯಾರಕರು ಲಸಿಕೆಗಳನ್ನು ನೇರವಾಗಿ ನಮಗೆ ಮಾರಾಟ ಮಾಡಲು ನಿರಾಕರಿಸಿದ್ದಾರೆ. ಅವರು ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸುವುದಾಗಿ ಹೇಳಿದ್ದಾರೆ. ಲಸಿಕೆಗಳನ್ನು ಆಮದು ಮಾಡಿಕೊಂಡು, ರಾಜ್ಯಗಳಿಗೆ ವಿತರಿಸಲು ನಾವು ಕೇಂದ್ರಕ್ಕೆ ಮನವಿ ಮಾಡುತ್ತೇವೆ," ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಭಾನುವಾರವಷ್ಟೆ, ಪಂಜಾಬ್ ಕೂಡ, ಮಾಡೆರ್ನಾ ಕಂಪನಿ ನೇರವಾಗಿ ತಮಗೆ ಲಸಿಕೆ ಮಾರಾಟ ಮಾಡಲು ನಿರಾಕರಿಸಿದೆ ಎಂದು ಹೇಳಿತ್ತು. ಅಧಿಕಾರಿಗಳ ಪ್ರಕಾರ, ಲಸಿಕೆಯನ್ನು ನೇರವಾಗಿ ಖರೀದಿಸಲು ಅಮರಿಂದರ್ ಸಿಂಗ್ ಸರಕಾರ ಎಲ್ಲಾ ಉತ್ಪಾದಕರನ್ನು ಸಂಪರ್ಕಿಸಿದೆ. ಈ ವೇಳೆ ಮಾಡೆರ್ನಾ ಈ ರೀತಿಯ ಪ್ರತಿಕ್ರಿಯೆ ನೀಡಿದೆ.
ಶನಿವಾರವಷ್ಟೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಅರವಿಂದ ಕೇಜ್ರಿವಾಲ್ ದಿಲ್ಲಿಯ ಲಸಿಕೆ ಪೂರೈಕೆಯನ್ನು ಹೆಚ್ಚಿಸುವಂತೆ ಮನವಿ ಮಾಡಿಕೊಂಡಿದ್ದರು. ಪ್ರತಿ ತಿಂಗಳು ದಿಲ್ಲಿಗೆ 80 ಲಕ್ಷ ಡೋಸ್ ಲಸಿಕೆ ಬೇಕು. ಆದರೆ ಮೇನಲ್ಲಿ ಸಿಕ್ಕಿರುವುದು 16 ಲಕ್ಷ ಡೋಸ್ ಮಾತ್ರ. ಜೂನ್‌ನಲ್ಲಿ ನಮಿಗೆ 8 ಲಕ್ಷ ಡೋಸ್ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪತ್ರದಲ್ಲಿ ಕೇಜ್ರಿವಾಲ್, ಕೇಂದ್ರ ಸರಕಾರ ಅಂತಾರಾಷ್ಟ್ರೀಯ ಲಸಿಕೆ ಉತ್ಪಾದಕರನ್ನು ಸಂಪರ್ಕಿಸಿ, ಅವರಿಂದ ಲಸಿಕೆ ಖರೀದಿಸಬೇಕು ಮತ್ತು ಅದನ್ನು ರಾಜ್ಯಗಳಿಗೆ ಹಂಚಬೇಕು ಎಂದು ಮನವಿ ಮಾಡಿಕೊಂಡಿದ್ದರು. ಜತೆಗೆ ಅಂತಾರಾಷ್ಟ್ರೀಯ ಲಸಿಕೆ ಉತ್ಪಾದಕರಿಗೆ ಭಾರತದಲ್ಲಿ ಲಸಿಕೆ ಉತ್ಪಾದನೆಗೆ ಅವಕಾಶ ನೀಡಬೇಕು. 24 ಗಂಟೆಗಳಲ್ಲಿ ಭಾರತದಲ್ಲಿರುವ ಎಲ್ಲಾ ಉತ್ಪಾದಕರಿಗೂ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಉತ್ಪಾದನೆಗೆ ಅನುಮತಿ ನೀಡಬೇಕು ಎಂದೂ ಆಗ್ರಹಿಸಿದ್ದರು.