ಆರ್ಡರ್ ಕೊಡುವಲ್ಲಿ ವಿಳಂಬ ಮಾಡಿದ್ದಕ್ಕೆ ಜಗಳ: ರೆಸ್ಟೋರೆಂಟ್ ಮಾಲೀಕನ ಹತ್ಯೆ

ಆಹಾರದ ಆರ್ಡರ್ ಪೂರೈಕೆ ಮಾಡುವಲ್ಲಿ ತಡ ಮಾಡುತ್ತಿದ್ದ ರೆಸ್ಟೋರೆಂಟ್ ಸಿಬ್ಬಂದಿ ಜತೆ ಸ್ವಿಗ್ಗಿ ಏಜೆಂಟ್ ಜಗಳ ಮಾಡುವಾಗ ಬಂದ ಮೂವರು ದುಷ್ಕರ್ಮಿಗಳು, ರೆಸ್ಟೋರೆಂಟ್ ಮಾಲೀಕನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಆರ್ಡರ್ ಕೊಡುವಲ್ಲಿ ವಿಳಂಬ ಮಾಡಿದ್ದಕ್ಕೆ ಜಗಳ: ರೆಸ್ಟೋರೆಂಟ್ ಮಾಲೀಕನ ಹತ್ಯೆ
Linkup
ಹೊಸದಿಲ್ಲಿ: ಪೂರೈಕೆ ಮಾಡುವಲ್ಲಿ ತಡ ಮಾಡಿದ ಕಾರಣಕ್ಕೆ ಮಾಲೀಕನನ್ನು ಗುಂಡಿಕ್ಕಿ ಮಾಡಿದ ಘಟನೆ ಮಂಗಳವಾರ ರಾತ್ರಿ ನೋಯ್ಡಾದಲ್ಲಿ ನಡೆದಿದೆ. ಪೊಲೀಸರು ಬುಧವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾನು ನೀಡಿದ್ದ ಚಿಕನ್ ಬಿರಿಯಾನಿ ಮತ್ತು ಪೂರಿ ಸಬ್ಜಿ ಆರ್ಡರ್ ಸಿದ್ಧಮಾಡಿ ಕೊಡಲು ತಡ ಮಾಡಿದ ವಿಚಾರವಾಗಿ ಏಜೆಂಟ್ ಹಾಗೂ ರೆಸ್ಟೋರೆಂಟ್ ಸಿಬ್ಬಂದಿ ನಡುವೆ ಮಂಗಳವಾರ ರಾತ್ರಿ ವಾಗ್ವಾದ ನಡೆದಿತ್ತು. ಡೆಲಿವರಿ ಏಜೆಂಟ್ ಮತ್ತು ಸಿಬ್ಬಂದಿ ನಡುವಿನ ಜಗಳ ತಡೆಯಲು ರೆಸ್ಟೋರೆಂಟ್ ಮಾಲೀಕ ಸುನಿಲ್ ಅಗರವಾಲ್ ಮುಂದಾಗಿದ್ದರು. ಬೈಕ್‌ನಲ್ಲಿದ್ದ ಮೂವರು ವ್ಯಕ್ತಿಗಳು ಅದೇ ವೇಳೆ ರೆಸ್ಟೋರೆಂಟ್‌ಗೆ ಬಂದಿದ್ದರು. ತಮ್ಮ ಆರ್ಡರ್‌ಗಳ ಕುರಿತು ವಿಚಾರಿಸಲು ಸಮೀಪದಲ್ಲಿ ಸರದಿಯಲ್ಲಿ ನಿಂತಿದ್ದ ಡೆಲಿವರಿ ಏಜೆಂಟ್‌ಗಳನ್ನು ಏನು ನಡೆಯುತ್ತಿದೆ ಎಂದು ವಿಚಾರಿಸಿದ್ದರು. ಬಳಿಕ ಸ್ವಿಗ್ಗಿ ಡೆಲಿವರಿ ಏಜೆಂಟ್ ಹಾಗೂ ಮಾಲೀಕನ ನಡುವೆ ನಡೆಯುತ್ತಿದ್ದ ಜಗಳ ಕಂಡ ಮೂವರು ದುಷ್ಕರ್ಮಿಗಳು, ತಾವೂ ಜಗಳಕ್ಕೆ ಇಳಿದಿದ್ದರು. ಸುನಿಲ್ ಅವರ ತಲೆಗೆ ಗುಂಡು ಹಾರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಿಗ್ಗಿ ಈ ಗುಂಡು ಹಾರಿಸಿದ್ದಾನೆ ಎಂದು ವರದಿಯಾಗಿತ್ತು. ಆದರೆ ಬಂಧಿತ ಮೂವರು ಆರೋಪಿಗಳು ತಮ್ಮ ಅಪರಾಧ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಜಗಳಕ್ಕೂ ತಮಗೂ ಸಂಬಂಧವೇ ಇಲ್ಲದಿದ್ದರೂ, ಕಂಠಪೂರ್ತಿ ಕುಡಿದಿದ್ದ ದುಷ್ಕರ್ಮಿಗಳು ವಿನಾಕಾರಣ ಒಂದು ಜೀವ ಬಲಿ ತೆಗೆದಿದ್ದಾರೆ. ದಾದ್ರಿ ನಿವಾಸಿ 38 ವರ್ಷದ ಸುನಿಲ್ ಅವರು ಜಾಮ್ ಜಾಮ್ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು. ರಾತ್ರಿ 12.15ರ ಸುಮಾರಿಗೆ 10 ಡೆಲಿವರಿ ಏಜೆಂಟ್‌ಗಳು ಆಹಾರ ಆರ್ಡರ್ ಪಡೆದುಕೊಳ್ಳಲು ರೆಸ್ಟೋರೆಂಟ್‌ನಲ್ಲಿ ಕಾಯುತ್ತಿದ್ದರು. ತನ್ನ ಆರ್ಡರ್ ವಿಳಂಬವಾಗಿದ್ದರಿಂದ ಸ್ವಿಗ್ಗಿ ಡೆಲಿವರಿ ಬಾಯ್, ಅಲ್ಲಿನ ಕೆಲಸಗಾರ ನಾರಾಯಣ ಎಂಬುವವರ ಜತೆ ವಾಗ್ವಾದಕ್ಕೆ ಇಳಿದಿದ್ದರು. ಈ ವೇಳೆ ನುಗ್ಗಿದ್ದ ಆರೋಪಿಗಳು ಏಕಾಏಕಿ ತಲೆಗೆ ಗುಂಡು ಹಾರಿಸಿದ್ದಾರೆ. ಸುನಿಲ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಆಗಲೇ ಮೃತಪಟ್ಟಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು, ಯಮುನಾ ಎಕ್ಸ್‌ಪ್ರೆಸ್‌ನ ಝೀರೋ ಪಾಯಿಂಟ್ ಬಳಿ ಬುಧವಾರ ಮಧ್ಯಾಹ್ನ ಆರೋಪಿಗಳಾದ ವಿಕಾಸ್ ಚೌಧುರಿ, ದೇವೇಂದ್ರ ಮತ್ತು ಸುನಿಲ್ ಎಂಬುವವರನ್ನು ಬಂಧಿಸಿದ್ದಾರೆ. ಮೂವರೂ ಬುಲಂದ್‌ಷಹರ್‌ನ ಅನೂಪ್‌ಷಹರ್ ನಿವಾಸಿಗಳಾಗಿದ್ದಾರೆ. ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ವಿಕಾಸ್ ಚೌಧುರಿ ಗುಂಡು ಹಾರಿಸಿ ಸುನಿಲ್ ಅಗರವಾಲ್ ಅವರನ್ನು ಕೊಲೆ ಮಾಡಿದ್ದ. ಈ ಮೂವರೂ ಆರೋಪಿಗಳು ಸುನಿಲ್ ಅಗರವಾಲ್ ಅವರಿಗಾಗಲೀ ಅಥವಾ ಡೆಲಿವರಿ ಏಜೆಂಟ್‌ಗಾಗಲೀ ಸಂಬಂಧಿಸಿದವರಲ್ಲ. ಆದರೆ ಆರೋಪಿಗಳಲ್ಲಿ ಒಬ್ಬನಾಗಿರುವ ಸುನಿಲ್, ಈ ಹಿಂದೆ ಡೆಲಿವರಿ ಏಜೆಂಟ್ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಸ್ವಿಗ್ಗಿ ಸ್ಪಷ್ಟನೆ'ನಮ್ಮ ರೆಸ್ಟೋರೆಂಟ್ ಪಾಲುದಾರನ ಸಾವಿನಿಂದ ನಮಗೆ ತೀವ್ರ ದುಃಖವಾಗಿದೆ. ಅವರ ಕುಟುಂಬದ ಸದಸ್ಯರಿಗೆ ನಮ್ಮ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಪೊಲೀಸರಿಂದ ನಮಗೆ ಬಂದ ಮಾಹಿತಿಗಳ ಪ್ರಕಾರ, ಬಂಧಿತರಾದ ಮೂವರು ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಮತ್ತು ಇದು ಯಾವ ರೀತಿಯಲ್ಲಿಯೂ ಸ್ವಿಗ್ಗಿಗೆ ಸಂಬಂಧಿಸಿದ್ದಲ್ಲ. ಈ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಪೊಲೀಸರಿಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ' ಎಂದು ಸ್ವಿಗ್ಗಿ ಹೇಳಿಕೆ ನೀಡಿದೆ.