ದಿಲ್ಲಿಯಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 15 ಸಾವಿರ ಕೇಸು. 42% ಕೇಸು ಹೆಚ್ಚಳ. 8 ತಿಂಗಳ ಗರಿಷ್ಠ

2021ರ ಮೇ 8 ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು. ಕಳೆದ 24 ಗಂಟೆಯಲ್ಲಿ ಶೇ. 15 ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವುದರ ಸಂಕೇತ ಇದು.

ದಿಲ್ಲಿಯಲ್ಲಿ ಕೊರೊನಾ ಸ್ಫೋಟ: ಒಂದೇ ದಿನ 15 ಸಾವಿರ ಕೇಸು. 42% ಕೇಸು ಹೆಚ್ಚಳ. 8 ತಿಂಗಳ ಗರಿಷ್ಠ
Linkup
ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ವೈರಸ್‌ ಅಕ್ಷರಶಃ ಸ್ಫೋಟಗೊಂಡಿದೆ. ಒಂದೇ ದಿನ ಕೋವಿಡ್‌ ಸೋಂಕಿತರ ಸಂಖ್ಯೆ 41.5% ಹೆಚ್ಚಳವಾಗಿದ್ದು, ಒಟ್ಟು 15,097 ಮಂದಿಗೆ ಸೋಂಕು ತಟ್ಟಿದೆ. ಆ ಮೂಲಕ ದೇಶದಲ್ಲಿ ಕೋವಿಡ್‌ನ ಮೂರನೇ ಅಲೆ ಅಪ್ಪಳಿಸಿರುವುದು ಖಚಿತಗೊಂಡಿದೆ. 2021ರ ಮೇ 8 ರ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು ಇದೇ ಮೊದಲು. ಕಳೆದ 24 ಗಂಟೆಯಲ್ಲಿ ಶೇ. 15 ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎನ್ನುವುದರ ಸಂಕೇತ ಇದು. ಇದೇ ವೇಳೆ ಆರು ಮಂದಿಯನ್ನು ಕೋವಿಡ್‌ ಬಲಿ ಪಡೆದುಕೊಂಡಿದೆ. ಇದೇ ವೇಳೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಜನವರಿ 1 ರಂದು 247 ಮಂದಿ ಆಸ್ಪತ್ರೆಗೆ ದಾಖಲಾದರೇ, ಜನವರಿ 4 ರಂದಯ 531 ಮಂದಿ ಸೋಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಜತೆಗೆ ದೈನಂದಿನ ಆಮ್ಲಜನಕ ಬಳಕೆಸುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದ್ದು, ಜನವರಿ 1 ರಂದು 94 ರಷ್ಠಿದ್ದ ಆಕ್ಸಿಜನ್‌ ಬಳಕೆ ಮಾಡುವ ರೋಗಿಗಳ ಸಂಖ್ಯೆ 94 ಇದ್ದರೆ, ಇದೀಗ ಆ ಸಂಖ್ಯೆ 168ಕ್ಕೆ ಏರಿದೆ. ಇನ್ನು 14 ಮಂದಿ ಸೋಂಕಿತರು ವೆಂಟಿಲೇಟರ್‌ ವ್ಯವಸ್ಥೆಯಲ್ಲಿದ್ದಾರೆ. ಕೋವಿಡ್‌ ರೋಗಿಗಳಿಗಾಗಿ ಮೀಸಲಾಗಿರುವ 12,104 ಆಕ್ಸಿಜನ್‌ ಬೆಡ್‌ಗಳ ಪೈಕಿ ಈಗಾಗಲೇ 1,116 ಬೆಡ್‌ಗಳು ಭರ್ತಿಯಾಗಿವೆ. ಅಲ್ಲದೇ 72 ಐಸಿಯು ವೆಂಟಿಲೇಟರ್‌ ಬೆಡ್‌ಗಳು ಈಗಾಗಲೇ ಭರ್ತಿಯಾಗಿವೆ. ದೆಹಲಿಯಲ್ಲಿ ಭಾರೀ ಪ್ರಮಾಣದಲ್ಲ ಕೋವಿಡ್‌ ಸೋಂಕು ಹೆಚ್ಚಳವಾಗಲಿದೆ ಎಂದು ಎರಡ್ಮೂರು ದಿನಗಳ ಹಿಂದೆ ತಜ್ಞರು ಎಚ್ಚರಿಕೆ ನೀಡಿದ್ದರು. ಆದರೆ ಇದೀಗ ಊಹಿಸಿದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, ರಾಷ್ಟ್ರ ರಾಜಧಾನಿ ಅಕ್ಷರಶಃ ಬೆಚ್ಚಿ ಬಿದ್ದಿದೆ. ಗುರುವಾರ ಸುಮಾರು 14,000 ಕೇಸುಗಳು ಪತ್ತೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಅದಕ್ಕೂ ಹೆಚ್ಚು ಕೇಸು ಪತ್ತೆಯಾಗಿದ್ದು, ದೆಹಲಿಯಲ್ಲಿ ಲಾಕ್‌ಡೌನ್‌ ಹೇರುವ ಅಗತ್ಯ ಎದುರಾಗಿದೆ. ಇನ್ನು ಸಂಭಾವ್ಯ ಅಪಾಯ ಎದುರಿಸಲು ದೆಹಲಿ ಕೂಡ ಸಜ್ಜಾಗಿದ್ದು, ಎಲ್ಲಾ ತಯಾರಿಗಳನ್ನು ಮಾಡಿಕೊಂಡಿದೆ. ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್‌ ಬೆಡ್‌ಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿದೆ. 'ಸದ್ಯ 1000 ದಲ್ಲಿ ಓರ್ವ ಸಾವಿಗೀಡಾಗುತ್ತಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ, ಈ ಬಾರಿ ಪರಿಸ್ಥಿತಿ ಚೆನ್ನಾಗಿದೆ. ಹಾಸಿಗೆಗಳ ಲಭ್ಯತೆ, ಇನ್ನಿತರ ಸೌಲಭ್ಯಗಳು ಸಜ್ಜಾಗಿದ್ದು, ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಬುಧವಾರ 9000 ಬೆಡ್‌ ಇದ್ದು, ಇಂದು 12,000 ಬೆಡ್‌ಗಳು ಸಜ್ಜಾಗಿವೆ. ದೈನಂದಿನ 90,000 ಪರೀಕ್ಷೆಗಳು ನಡೆಯುತ್ತಿವೆ' ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್‌ ಹೇಳಿದ್ದಾರೆ. ಈಗಾಗಲೇ ಸೋಂಕು ನಿಯಂತ್ರಣಕ್ಕೆ ವೀಕೆಂಡ್‌ ಕರ್ಫ್ಯೂ, ನೈಟ್‌ ಕರ್ಫ್ಯೂ, ಶಾಲೆ ಕಾಲೇಜು ಬಂದ್‌ ಮುಂತಾದ ನಿಯಂತ್ರಣ ಹೇರಲಾಗಿದೆ.