ಬೆಂಗಳೂರು: ಪ್ರತಿಷ್ಠಿತ ವಿವಿ ಹೆಸರಿನ ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ದಂಪತಿ ಬಂಧನ

ಇವರನ್ನು ಸಂಪರ್ಕ ಮಾಡಿದ್ರೆ ನಿಮಗೆ ಯಾವುದೇ ವಿಶ್ವವಿದ್ಯಾನಿಲಯದ ಅಂಕಪಟ್ಟಿಯು ಸಿಗುತ್ತಿತ್ತು. ಈ ದಂಪತಿ ನಕಲಿ ಅಂಕಪಟ್ಟಿ ನೀಡುವುದರಲ್ಲಿ ನಿಪುಣರಾಗಿದ್ದರು. ಆದರೆ ಇದೀಗ ಇವರ ನಿಪುಣತೆ ಹೆಚ್ಚು ವರ್ಕೌಟ್‌ ಆಗಿಲ್ಲ. ಯಾಕೆಂದ್ರೆ ಈ ದಂಪತಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಈ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು: ಪ್ರತಿಷ್ಠಿತ ವಿವಿ ಹೆಸರಿನ ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ದಂಪತಿ ಬಂಧನ
Linkup
ಬೆಂಗಳೂರು: ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಪಿಯುಸಿ ಪಾಸ್‌ ಅಥವಾ ಫೇಲ್‌ ಆದ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ದಂಪತಿಯನ್ನು ಶುಕ್ರವಾರ ಬಂಧಿಸಿದ್ದಾರೆ. ಪಂಜಾಬ್‌ ಮೂಲದಿಂದ ಬಂದು ಪೀಣ್ಯದಲ್ಲಿ ನೆಲೆಸಿದ್ದ ಮುಖೇಶ್‌ ಹಾಗೂ ರೋಹಿ ಬಂಧಿತರು. ಆರೋಪಿಗಳಿಂದ ನೂರಾರು ನಕಲಿ ಅಂಕಪಟ್ಟಿ, ಸೀಲ್‌ಗಳು ಮತ್ತು ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಸಿಬಿ ಪೊಲೀಸರು ತಿಳಿಸಿದರು. ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ದಂಪತಿ, ಪೀಣ್ಯ ಬಳಿ ಶೈಕ್ಷಣಿಕ ಸಂಸ್ಥೆಯೊಂದನ್ನು ತೆರೆದಿದ್ದರು. ಐಟಿಐ ಹಾಗೂ ಇತರೆ ಕೋರ್ಸ್‌ಗಳಿಗೆ ತರಬೇತಿ ನೀಡುವುದಾಗಿ ಹೇಳುತ್ತಿದ್ದರು. ಆದರೆ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತಿದ್ದ ಆರೋಪಿಗಳು, ಪರೀಕ್ಷೆ ಬರೆಯದೇ ಅಂಕಪಟ್ಟಿ ನೀಡುವುದಾಗಿ ಹೇಳುತ್ತಿದ್ದರು. ಕೇವಲ ನಾಲ್ಕು ತಿಂಗಳ ಅವಧಿಯಲ್ಲೇ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಬಿ.ಟೆಕ್‌, ಎಂ.ಟೆಕ್‌, ಎಂಬಿಎ, ಬಿ.ಕಾಂ ಹಾಗೂ ಇತರೆ ಕೋರ್ಸ್‌ಗಳ ನಕಲಿ ಅಂಕಪಟ್ಟಿಗಳನ್ನು ನೀಡುತ್ತಿದ್ದರು. ರಾಜ್ಯ ಹಾಗೂ ಹೊರ ರಾಜ್ಯಗಳ 500ಕ್ಕೂ ಹೆಚ್ಚು ಮಂದಿ ಅಂಕಪಟ್ಟಿ ಖರೀದಿಸಿದ್ದಾರೆ. ಅದೇ ಅಂಕಪಟ್ಟಿ ಬಳಸಿ ಹಲವರು ಖಾಸಗಿ ಹಾಗೂ ಸರಕಾರಿ ಕೆಲಸ ಗಿಟ್ಟಿಸಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ ಎಂದೂ ಪೊಲೀಸರು ಹೇಳಿದರು. ಮನೆ, ಕಚೇರಿ ಮೇಲೆ ದಾಳಿವಿಶ್ವವಿದ್ಯಾಲಯದ ನಕಲಿ ಪ್ರಮಾಣಪತ್ರ, ನಕಲಿ ಅಂಕಪಟ್ಟಿ ತಯಾರಿಸುತ್ತಿರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಆರೋಪಿಗಳಿಗೆ ಸೇರಿದ ಮನೆ, ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಸಿ.ವಿ. ರಾಮನ್‌ ವಿಶ್ವವಿದ್ಯಾಲಯ, ರವೀಂದ್ರನಾಥ್‌ ಠಾಗೋರ್‌ ವಿಶ್ವವಿದ್ಯಾಲಯ, ಅಸೆಟ್‌ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಈ ಬಗ್ಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೂ ಮಾಹಿತಿ ನೀಡಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಕಲಿ ಅಂಕಪಟ್ಟಿ ತಯಾರಿಕೆ ಪ್ರಕರಣದಲ್ಲಿ ಆರೋಪಿಗಳ ಜತೆ ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿ ಇದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ ಎಂದೂ ಪೊಲೀಸರು ತಿಳಿಸಿದರು.