ಪ್ರತ್ಯಂಗಿರಿ ದೇವಿ ಇತಿಹಾಸ
ಪ್ರತ್ಯಂಗಿರಿ ದೇವಿ ಇತಿಹಾಸ
ದೇವಿಯ ಉತ್ಸವ ಮಹಾವಿಷ್ಣುವಿನ ಅವತಾರಕ್ಕೆ ಸಂಬಂದ ಪಟ್ಟಿದ್ದು, ಈ ಅವತಾರದಲ್ಲಿ ಭಗವಾನ್ ಹಿರಣ್ಯಕಶ್ಯಪುವಿನ ಸಂಹಾರದ ನಂತರ ಅಸುರನ ಕರುಳು ಬಳ್ಳಿಯನ್ನೆ ಮಾಲೆಯಾಗಿ ಧರಿಸಿ ತಾಂಡವ ನೃತ್ಯ ಮಾಡುತ್ತ ಉಗ್ರ ರೂಪವನ್ನು ಧರಿಸಿ ಕೂಗುತ್ತಾರೆ. ಈ ಸಂದರ್ಭದಲ್ಲಿ ಇದೇಭೂಮಿ ಕಂಪನ, ಸಮುದ್ರದ ಅಲೆಗಳು ವಿಕೋಪಗೊಂಡು ಬಿರುಗಾಳಿ ಬೀಸಿದ್ದು ನರಸಿಂಹ ಅವತಾರದಲ್ಲಿ ಭಗವಂತನ ಉಗ್ರರೂಪ ಕಂಡದೇವಗಣಗಳು ಭಯಭೀತರಾಗಿ ಮಹಾದೇವನ ಆಶ್ರಯವನ್ನು ಪಡೆಯುತ್ತಾರೆ. ಪ್ರಪಂಚದಲ್ಲಿ ಜೀವರಾಶಿಗಳ ಉಳಿವಿಗೆ ಕಂಪನವಾಗಬಹುದೆಂಬ ಕಾರಣದಿಂದ ಮಹಾದೇವನು ಸಹಾಯ ಹಸ್ತವನ್ನು ನೀಡುತ್ತಾರೆ. ತಕ್ಷಣ ಮಹಾದೇವನು ಶರಭ ಎಂಬ ಪಕ್ಷಿಯ ರೂಪದಲ್ಲಿ ಅವತರಿಸುತ್ತಾರೆ. ಎಲ್ಲರಲ್ಲಿಯೂ ಭಯವನ್ನು ಹುಟ್ಟಿಸುವಂತಹ ಭೀಭತ್ಸ ರೂಪವಾಗಿದ್ದು ಶರಭಾವತಾರ. ಅರ್ಧ ಪಕ್ಷಿಯ ರೂಪ ಹಾಗೂ ಅರ್ಧಸಿಂಹದ ರೂಪವನ್ನು ಹೊಂದಿರುವ ಶರಭಾವತಾರವು ಇಡೀ ದೇವಗಣಗಳಾಧಿಯಾಗಿ ಎಲ್ಲರಲ್ಲಿ ನಡುಕ ಹುಟ್ಟಿಸಿತ್ತು. ಆದರೆ ಈ ರೂಪವನ್ನು ಕಂಡ ನರಸಿಂಹ ಮೂರ್ತಿಯ ಕೋಪವು ಮತ್ತೆ ಹೆಚ್ಚಾಗಲು ಪ್ರಾರಂಭಿಸಿತು ಹಾಗೆ ಕೋಪಿಷ್ಟನಾದ ನರಸಿಂಹದೇವನ ಕಂಠದಿಂದ ಒಂದು ಉಗ್ರ ಮೂರ್ತಿಯು ಉದ್ಭವಗೊಳ್ಳುತ್ತದೆ. ಗಂಡ ಬೇರುಂಡ” ಎಂಬ ಹೆಸರಿನ ಈ ಉಗ್ರ ಮೂರ್ತಿಯು ಮಹಾದೇವನ ಅವತಾರವಾದ ಶರಭದೊಂದಿಗೆ ಅತ್ಯುಗ್ರ ಹೋರಾಟವನ್ನು ನಡೆಸುತ್ತದೆ. ಈ ಸಂದರ್ಭದಲ್ಲಿ ಮಹಾದೇವನ ತ್ರಿನೇತ್ರದಿಂದ (ಮೂರನೆಯ ಕಣ್ಣಿನಿಂದ) ಪ್ರತ್ಯಂಗಿರಿ ರೂಪದಲ್ಲಿರುವ ಅಷ್ಟಕಾಳಿಗಳಲ್ಲಿ ಒಬ್ಬಳಾದ ಅಥರ್ವಣ ಕಾಳಿಯು ಅವತರಿಸುತ್ತಾಳೆ. ಉಗ್ರ ರೂಪಳಾದ ದೇವಿಯ ಅವತಾರವನ್ನು ಕಂಡ ದೇವಗಣಗಳು ಭಯಭೀತರಾದರು. ಈ ಮಹಾಶಕ್ತಿಯನ್ನು ಎದುರಿಸುವ ಶಕ್ತಿ ಸಾಕ್ಷಾತ್ ನರಸಿಂಹ ಮೂರ್ತಿಗೂ ಸಹ ಇರಲಿಲ್ಲ. ಕ್ಷಣಮಾತ್ರದಲ್ಲಿ ಅಥರ್ವಣ ಕಾಳಿಯ ರೂಪದಲ್ಲಿದ್ದ ಪ್ರತ್ಯಂಗಿರಿದೇವಿ ನರಸಿಂಹ ಮೂರ್ತಿಯಿಂದ ಅವತಾರವಾದ 'ಗಂಡ ಭೇರುಂಡವನ್ನು ನುಂಗಿ ಹಾಕುತ್ತಾಳೆ. ಇದನ್ನು ಕಂಡ ನರಸಿಂಹ ಮೂರ್ತಿಯ ಕೋಪವು ಇಳಿಮುಖವಾಗುತ್ತದೆ. ಹೀಗೆ ನರಸಿಂಹ ಮೂರ್ತಿಯ ಕೋಪದ ಶಮನಕ್ಕಾಗಿ ಅವತರಿಸಿದ ಈ ದೇವಿಯು ಶತ್ರು ಸಂಹಾರ ದೇವತೆಯಾಗಿ ಪೂಜಿಸಲ್ಪಡುತ್ತಾಳೆ. ಅವತಾರ ಕಾಲದಲ್ಲಿ ದೇವಿಯನ್ನು ಯಾವ ಹೆಸರಿನಿಂದ ಕರೆಯಬೇಕೆಂದು ದೇವಗಣಗಳಿಗೆ ಸಾಧ್ಯವಾಗಲಿಲ್ಲ. ಅದೇ ರೀತಿ ದೇವಿಯನ್ನು ಯಾವ ಮಂತ್ರ ಶ್ಲೋಕಗಳಿಂದ ಪ್ರೀತಿ ಪಾತ್ರಳಾಗಿಸಬೇಕೆಂಬುದು ಸಹ ಯಾರಿಗೂ ತಿಳಿಯಲಿಲ್ಲ. ಆದಕಾರಣ ದೇವಿಯು ಕೆಲವು ಕಾಲಗಳ ಸಮಯ ಪೂಜೆ ಪುನಸ್ಕಾರ ಇಲ್ಲದೆ ಇರಬೇಕಾಗಿ ಬಂದು ಈ ಸಂದರ್ಭದಲ್ಲಿ ಅಂತಿರಷ್ಟು ಹಾಗೂ ಪ್ರತ್ಯಂಹಾರಸು ಎಂಬ ಹೆಸರಿನ ಇಬ್ಬರು ಋಷಿ ಮುನಿಗಳು ಕೆಲವು ಮಂತ್ರಗಳು ಹಾಗೂ ಶ್ಲೋಕಗಳನ್ನು ದೇವಿಯ ಹತ್ತಿರ ಸಮರ್ಪಣೆ ಮಾಡಿದರು. ಈ ಮಂತ್ರಗಳನ್ನು ಬ್ರಹ್ಮಋಷಿ, ಪ್ರತ್ಯಂಗಿರಿದೇವತೆ ಅನುಷ್ಟಪ ಛಂದಸ್ಸು ಮುನಿಗಳು ಸೇರಿ ರಚಿಸುತ್ತಾರೆ. ಇವರ ರಚನೆಯಲ್ಲಿ ಪ್ರಸಾದಿಗಳಾದ ದೇವಿ ಅವರಿಗೆ ಸಕಲಾಭೀಷ್ಟಗಳನ್ನು ಪ್ರಧಾನಮಾಡುತ್ತಾರೆ. ಹೀಗೆ ಸಕಲಾಭೀಷ್ಟಗಳನ್ನು ಪ್ರಧಾನ ಮಾಡಿದ ದೇವತೆಗೆ ಪ್ರತ್ಯಂಗಿರ ಎಂಬ ಹೆಸರು ಬಂದಿತು. ಹಾಗೆಯೇ ಭಗವತಿ ಉಗ್ರ ಮೂರ್ತಿಯಾದ ಕಾರಣ ಈ ಹೆಸರಿನೊಂದಿಗೆ 'ಉಗ್ರ' ಎಂಬ ದ್ವಯಾಷರವನ್ನು ಸೇರಿಸಿ ಉಗ್ರ ಪ್ರತ್ಯಂಗಿರಿ ದೇವಿ ಎಂದು ಕರೆಯಲು ಪ್ರಾರಂಭಿಸಿದ್ದು. ಶ್ರೀ ಮಹಾದೇವನ ತ್ರಿನೇತ್ರದಿಂದ ಅವತಾರವಾದ ದೇವಿ ಉಗ್ರ ಮೂರ್ತಿಯಾಗಿದ್ದಾಳೆ. ಉಗ್ರ ಪ್ರತ್ಯಂಗಿರಿ ದೇವಿ ಶತ್ರು ಸಂಹಾರ ಮೂರ್ತಿಯಾದ ದೇವಿ ರೋಗದಿಂದ ಬಳಲುವ ಭಕ್ತರಿಗೆ ರಕ್ಷಾ ಮೂರ್ತಿಯಾಗಿ ಅಭಯವನ್ನು ನೀಡುತ್ತಾಳೆ. ಮಹಾಕಾಲನನ್ನೇ ಭಯಗೊಳಿಸುವ ಸಂಹಾರ ಶಕ್ತಿಯನ್ನು ಹೊಂದಿರುವವಳೆ ದೇವಿ, ಉಗ್ರ ವಾಮಾಚಾರಗಳಿಂದ ಉಗ್ರರೋಗಗಳಿಂದ ಶತ್ರುಗಳಿಂದ ಬಳಲುತ್ತಿರುವವರು ಈ ದೇವಿಯ ಉಪಾಸನೆ ಮಾಡುವುದರಿಂದ ಸರ್ವದೋಷಗಳನ್ನು ಕಳೆದು ನಂಬಿದ ಭಕ್ತರಿಗೆ ಸರ್ವಸುಖವನ್ನು ಕರುಣಿಸುವ ದೇವಿಯು ಚತುರ್ಭುಜಳಾಗಿ ತನ್ನ ಹಸ್ತಗಳಲ್ಲಿ ಶೂಲ, ಪಾಲ, ಕಪಾಲಂ, ಕೊಡಲಿ ಮುಂತಾದ ಶಸ್ತ್ರಗಳನ್ನು ಹಿಡಿದು ನೀಲಿವಸ್ತ್ರಗಳನ್ನು ಧರಿಸಿ ವಜ್ರತೀಕ್ಷ್ಮವಾದ ಕರಗಳಿಂದ ಕಂಗೊಳಿಸುತ್ತಾಳೆ. ಹೀಗೆ ಉಗ್ರಮೂರ್ತಿಯಾಗಿ ಕಂಗೊಳಿಸುವ ಮಹಾದೇವಿಯು ಶೀಘ್ರ ಕೋಪಿಷ್ಟೆಯಾದ್ದರಿಂದ ಅತೀವ ನಿಷ್ಠೆಯುಳ್ಳ ಉಪಾಸಕರಿಗೆ (ಮಾಂತ್ರಿಕರಿಗೆ) ದೇವಿಯನ್ನು ಉಪಾಸನೆ ಮಾಡಲು ಸಾಧ್ಯ ಉಪಾಸನೆ ರೀತಿಯಲ್ಲಿ ಈ ಮಂತ್ರ, ತಂತ್ರಾಧಿಗಳಲ್ಲಿ ಯಾವುದಾದರೂ ಒಂದು ಏರು-ಪೇರಾದರೂ ದೇವಿ ಸಹಿಸುವುದಿಲ್ಲ. ನಿಶ್ಚಿತವಾದ ಮಂತ್ರ ತಂತ್ರಗಳನ್ನು ತಿಳಿದು ಸರಿಯಾದ ಮಾರ್ಗದಲ್ಲಿ ಬಳಸಿದರೆ ಸರ್ವಾಭೀಷ್ಟಗಳನ್ನು ಪ್ರಧಾನ ಮಾಡುತ್ತಾಳೆ. ಹೀಗೆ ದೇವಿಯ ಅನುಗ್ರಹ ಪಡೆದರೆ ಸರ್ವಯಶಸ್ಸಿಗೆ ಹಾಗೂ ದುಷ್ಟ ಸಂಹಾರಕ್ಕಾಗಿ ಮತ್ತೊಬ್ಬ ದೇವರನ್ನು ಆಶ್ರಯಿಸುವ ಅವಶ್ಯಕತೆ ಇರುವುದಿಲ್ಲ. ಆದರೆ ಸರಿಯಾದ ಮಂತ್ರಗಳನ್ನು ತಿಳಿದವರು ಅಪರೂಪವಾಗಿದ್ದಾರೆ. ಶತ್ರು ಸಂಹಾರ ಮೂರ್ತಿಯಾದ ದೇವಿ ಮಹಾದೇವನ ತ್ರೀನೇತ್ರದಿಂದ ಹೊರಡಲ್ಪಟ್ಟ ಕೋಪಾಗ್ನಿಯಿಂದ ರೂಪಗೊಂಡಿದ್ದರಿಂದ ಶತ್ರು ಸಂಹಾರ ಮೂರ್ತಿಯಾಗಿ ಭಾವಿಸುತ್ತಾರೆ. ಹೀಗೆ ಇರುವ ದೇವಿಯು ಉಗ್ರಮೂರ್ತಿಯನ್ನು ದೇವಗಣಗಳಿಗೂ ಸಹ ಒಮ್ಮೆ ಮಾತ್ರ ದರ್ಶನವಾಗಿದೆ. ಇಂತಹ ಮಹಾಶಕ್ತಿಯು ಮೂಲವಾದ ದೇವಿಯು ಪ್ರಸಾದಿದಳಾದರೆ ದುಷ್ಟ ಸಂಹಾರ ಮಾತ್ರವಲ್ಲ ಕಷ್ಟದಲ್ಲಿರುವ ಭಕ್ತರನ್ನು ಯಾವುದೇ ರೀತಿಯಾದರು ಪಾರುಮಾಡಿ ಅಭಯ ಹಸ್ತವನ್ನು ಚಾಚುತ್ತಾಳೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
9480657888, 9060205999, 9740314999
ಇಂತಿ,
ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಸೇವಾ ಟ್ರಸ್ಟ್ (ರಿ.)
ಕರದಾಳ ಗ್ರಾಮ, ಚಿತ್ತಾಪುರ ತಾಲ್ಲೂಕು, ಕಲಬುರ್ಗಿ ಜಿಲ್ಲೆ, ಕರ್ನಾಟಕ.
ಸೇವಾ ಕಾಣಿಕೆಯನ್ನು ಈ ಕೆಳಕಂಡ ಬ್ಯಾಂಕ್ ಖಾತೆಗೆ ಕಳುಹಿಸುವುದು.
A/c. Name : Shree Brahmashree Narayanaguru Shakti Peeta Seva Trust (R)
BANK: AXIS BANK, Branch: Yadgir
A/c. No: 922020063194981 IFSC Code : UTIB0001201