ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ - 2023
ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14, 15 ರಂದು ಮಕರ ಸಂಕ್ರಮಣದ ಅಂಗವಾಗಿ ಜಾತ್ರಾ ಮಹೋತ್ಸವ ನಡೆಯಲಿದೆ.
ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ - 2023
ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಜನವರಿ 14, 15ರಂದು ಮಕರ ಸಂಕ್ರಮಣದ ಅಂಗವಾಗಿ ಜಾತ್ರಾ ಮಹೋತ್ಸವ ನಡೆಯಲಿದೆ.
ಜ.14ರಂದು ಬೆಳಿಗ್ಗೆ 7ಕ್ಕೆ ಚೌಡೇಶ್ವರಿ ದೇವಿಯ ಮೂಲ ಸ್ಥಳವಾದ ಸೀಗೆ ಕಣಿವೆಯಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಜಾತ್ರೋತ್ಸವ ಉದ್ಘಾಟಿಸುವರು. ಸೀಗೆ ಕಣಿವೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರಥಮ ಪೂಜೆ ನಡೆಯಲಿದೆ.
ನಂತರ ಧರ್ಮಾಧಿಕಾರಿ ನೇತೃತ್ವದಲ್ಲಿ ಜ್ಯೋತಿ ರೂಪದ ದೇವಿಯ ಮೆರವಣಿಗೆ ನಡೆಯಲಿದ್ದು, ವಡನ್‌ಬೈಲ್ ಪದ್ಮಾವತಿ ದೇವಸ್ಥಾನದ ಧರ್ಮದರ್ಶಿ ವೀರರಾಜಯ್ಯ ಜೈನ್ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮಗಳು :
ದಿನಾಂಕ : 14.01.2023 ಶನಿವಾರ ಆದಿಶಕ್ತಿ ಧರೆಗಿಳಿದು ಶಿಲೆಯಲ್ಲಿ ನೆಲೆಯಾದ ಚೌಡೇಶ್ವರಿಯ ಮೂಲ ಸ್ಥಾನವಾದ ಸೀಗೇಕಣಿವೆಯಲ್ಲಿ ಬೆಳಿಗ್ಗೆ 7.00 ಗಂಟೆಗೆ ಪ್ರಥಮ ಪೂಜೆ ನೆರವೇರಲಿದೆ. (ವರ್ಷದಲ್ಲಿ ಒಮ್ಮೆ ಮಾತ್ರ ಭಕ್ತಾದಿಗಳಿಗೆ ಈ ಪುಣ್ಯ ಸ್ಥಳದ ದರ್ಶನ ಭಾಗ್ಯವಿರುತ್ತದೆ.)
ನಂತರ ಜ್ಯೋತಿ ರೂಪದಲ್ಲಿ ದೇವಿಯ ಮೆರವಣಿಗೆ ಈಗ ದೇವಿ ನೆಲೆಯಾಗಿರುವ ಸಿಗಂದೂರಿಗೆ ಆಗಮನ, ನಂತರ ದೇವಿಗೆ ವಿಶೇಷ ಹೂವಿನ ಹಾಗೂ ಆಭರಣ ಅಲಂಕಾರ ಪೂಜೆ, ಚಂಡಿಕಾ ಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ 2.30ಕ್ಕೆ ಧಾರ್ಮಿಕ ಸಭೆ ವಿದ್ಯಾಭ್ಯಾಸ, ಕಲೆ, ಕ್ರೀಡೆ, ಕೃಷಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನ.
ದಿವ್ಯಸಾನಿಧ್ಯ : ಡಾ. ಶ್ರೀ ಎಸ್. ರಾಮಪ್ಪನವರು ಆನುವಂಶಿಕ ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು .
ವಿಶೇಷ ಆಹ್ವಾನಿತರು : ಶ್ರೀ ರಾಘವೇಂದ್ರ ರಾಜ್‌ಕುಮಾರ್ ದಂಪತಿಗಳು.
ಮುಖ್ಯ ಅತಿಥಿಗಳು : ಶ್ರೀ ವೀರರಾಜಯ್ಯ ಜೈನ್ ಧರ್ಮದರ್ಶಿಗಳು, ಶ್ರೀಪದ್ಮಾವತಿ ದೇವಸ್ಥಾನ, ವಡನ್‌ಬೈಲ್ .
ಸಾಂಸ್ಕೃತಿಕ ಕಾರ್ಯಕ್ರಮಗಳು :
ಸಂಜೆ 5.30ರಿಂದ ಗಂಗಾರತಿ ಹಾಗೂ ಸಿಡಿಮದ್ದು ಪ್ರದರ್ಶನ.
ರಾತ್ರಿ 10-30 ರಿಂದ ಸಿಗಂದೂರು ಮೇಳದವರಿಂದ ಯಕ್ಷಗಾನ.
ದಿನಾಂಕ : 15.01.2023 ಭಾನುವಾರ ಮುಂಜಾನೆ 04-00 ಘಂಟೆಗೆ ಪಂಚಾಮೃತ ಅಭಿಷೇಕ ಪೂಜೆ, ಮಹಾಭಿಷೇಕ, ವಿಶೇಷ ಹೂವಿನ ಹಾಗೂ ಆಭರಣ ಅಲಂಕಾರ ಪೂಜೆ, ಚಂಡಿಕಾಹೋಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಮಧ್ಯಾಹ್ನ 2-30 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
ರಾತ್ರಿ 8 ಗಂಟೆಯಿಂದ ಸರಿಗಮಪ ಹಾಗೂ ಎದೆತುಂಬಿ ಹಾಡುವೆನು ಕಾರ್ಯಕ್ರಮದ ಪ್ರಸಿದ್ಧ ಗಾಯಕರಿಂದ ಗಾನವೈಭವ.
ತಾವೆಲ್ಲರೂ ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವಕ್ಕೆ ಬಂದು ದೇವಿಗೆ ಪ್ರಾರ್ಥನೆಯನ್ನು ಸಲ್ಲಿಸಿ
ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ತಮ್ಮ ಸುಖಾಗಮನವನ್ನು ಬಯಸುವವರು:
ಗುರುರಾಜ್. ಏನ್ ( ಸಿ.ಇ.ಓ )
ಈಡಿಗ ಮ್ಯಾಚ್ ಮೇಕರ್
# ೭೬೫ , ಎರಡನೇ ಮಹಡಿ, ಹದಿನಾಲ್ಕನೇ ಕ್ರಾಸ್ , ಅರವತ್ತು ಅಡಿ ರಸ್ತೆ
ಎಂ.ಇ.ಐ ಲೇಔಟ್ ಗ್ರೌಂಡ್ ಎದುರು (ಲ್ಯಾಂಡ್ಮಾರ್ಕ್),
ಎಂ.ಇ.ಐ ಲೇಔಟ್, ಬಾಗಲಗುಂಟೆ, ಬೆಂಗಳೂರು- ೫೬೦೦೭೩