Be Alert :ಭಾರತಕ್ಕೆ ಆಗಸ್ಟ್‌ನಲ್ಲಿ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ, ​​ಸೆಪ್ಟೆಂಬರ್‌ನಲ್ಲಿ ಉತ್ತುಂಗಕ್ಕೆ ಸೋಂಕು: ಎಸ್‌ಬಿಐ

. ಆಗಸ್ಟ್‌ನಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣಲು ಶುರುವಾಗಲಿವೆ. ​​ಸೆಪ್ಟೆಂಬರ್‌ನಲ್ಲಿ ದೇಶವು ಮತ್ತೆ ಕೊರೊನಾ ಆರ್ಭಟದಿಂದ ತತ್ತರಿಸುವ ಸಾಧ್ಯತೆಯಿದೆ. ಸದ್ಯ ದೇಶಾದ್ಯಂತ ನಿತ್ಯ ದಾಖಲಾಗುತ್ತಿರುವ ಕೊರೊನಾ ಹೊಸ ಪ್ರಕರಣಗಳು, ಗುಣಮುಖರಾಗುತ್ತಿರುವವರ ಪ್ರಮಾಣ ಹಾಗೂ ಸಾವಿನ ಸಂಖ್ಯೆಗಳನ್ನು ಆಧರಿಸಿದ ಮಾದರಿಯೊಂದನ್ನು ಎಸ್‌ಬಿಐ ಸಂಶೋಧನೆಗಾಗಿ ಬಳಸಲಾಗಿದೆ.

Be Alert :ಭಾರತಕ್ಕೆ ಆಗಸ್ಟ್‌ನಲ್ಲಿ ಅಪ್ಪಳಿಸಲಿದೆ ಕೊರೊನಾ 3ನೇ ಅಲೆ, ​​ಸೆಪ್ಟೆಂಬರ್‌ನಲ್ಲಿ ಉತ್ತುಂಗಕ್ಕೆ ಸೋಂಕು: ಎಸ್‌ಬಿಐ
Linkup
ಹೊಸದಿಲ್ಲಿ: ಕೊರೊನಾ ಮೂರನೇ ಅಲೆಯು ಮುಂದಿನ ತಿಂಗಳು ಭಾರತಕ್ಕೆ ಅಪ್ಪಳಿಸಲಿದ್ದು, ಒಂದೇ ತಿಂಗಳಲ್ಲಿ ಗರಿಷ್ಠ ಸೋಂಕಿನ ಪ್ರಕರಣಗಳು ವರದಿಯಾಗಿ ಉತ್ತುಂಗಕ್ಕೆ ತಲುಪಲಿದೆ ಎಂದು ಎಸ್‌ಬಿಐ ಸಂಶೋಧನಾ ವರದಿ ಹೇಳಿದೆ. ಆಗಸ್ಟ್‌ನಲ್ಲಿ ಕೊರೊನಾ ಪ್ರಕರಣಗಳು ನಿಧಾನವಾಗಿ ಏರಿಕೆ ಕಾಣಲು ಶುರುವಾಗಲಿವೆ. ಸೆಪ್ಟೆಂಬರ್‌ನಲ್ಲಿ ದೇಶವು ಮತ್ತೆ ಕೊರೊನಾ ಆರ್ಭಟದಿಂದ ತತ್ತರಿಸುವ ಸಾಧ್ಯತೆಯಿದೆ. ಸದ್ಯ ದೇಶಾದ್ಯಂತ ನಿತ್ಯ ದಾಖಲಾಗುತ್ತಿರುವ ಕೊರೊನಾ ಹೊಸ ಪ್ರಕರಣಗಳು, ಗುಣಮುಖರಾಗುತ್ತಿರುವವರ ಪ್ರಮಾಣ ಹಾಗೂ ಸಾವಿನ ಸಂಖ್ಯೆಗಳನ್ನು ಆಧರಿಸಿದ ಮಾದರಿಯೊಂದನ್ನು ಎಸ್‌ಬಿಐ ಸಂಶೋಧನೆಗಾಗಿ ಬಳಸಲಾಗಿದೆ. ಅದರಂತೆ, ಜುಲೈ ಎರಡನೇ ವಾರದಲ್ಲಿ ದೇಶಾದ್ಯಂತ ನಿತ್ಯ 10 ಸಾವಿರ ಸೋಂಕಿತರು ವರದಿಯಾಗುವ ಸಾಧ್ಯತೆಯಿದೆ. ಆಗಸ್ಟ್‌ 15ರ ಬಳಿಕ ಸೋಂಕು ಪ್ರಸರಣ ಪುನಃ ತೀವ್ರತೆ ಪಡೆದುಕೊಳ್ಳಲಿದೆ ಎಂದು ವರದಿ ತಿಳಿಸಿದೆ. ದೇಶಾದ್ಯಂತ ಇದುವರೆUಗೂ 4.02 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದು, ಸದ್ಯ ಸಕ್ರಿಯ ಸೋಂಕಿನ 4.79 ಲಕ್ಷ ಸಕ್ರಿಯ ಪ್ರಕರಣಗಳಿವೆ. ಲಸಿಕಾ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿಇದುವರೆಗೂ 35.28 ಕೋಟಿ ಡೋಸ್‌ಗಳನ್ನು ನೀಡಲಾಗಿದೆ.