ಪಿಪಿಎಫ್‌ v/s ಎಸ್‌ಎಸ್‌ವೈ: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಯಾವುದು ಸೂಕ್ತ? ಇಲ್ಲಿದೆ ಮಾಹಿತಿ!

ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉಳಿತಾಯದ ನಿಟ್ಟಿನಲ್ಲಿ ಪೋಷಕರ ಮುಂದೆ ಎರಡು ಆಯ್ಕೆಗಳು ಇವೆ. ಸಾರ್ವಜನಿಕ ಭವಿಷ್ಯನಿಧಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ. ಇವೆರಡರಲ್ಲಿ ಯಾವುದು ಸೂಕ್ತ ಆಯ್ಕೆ? ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ.

ಪಿಪಿಎಫ್‌ v/s ಎಸ್‌ಎಸ್‌ವೈ: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಯಾವುದು ಸೂಕ್ತ? ಇಲ್ಲಿದೆ ಮಾಹಿತಿ!
Linkup
ಹೊಸದಿಲ್ಲಿ: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉಳಿತಾಯದ ನಿಟ್ಟಿನಲ್ಲಿ ಪೋಷಕರ ಮುಂದೆ ಎರಡು ಆಯ್ಕೆಗಳು ಇವೆ. ಸಾರ್ವಜನಿಕ ಭವಿಷ್ಯನಿಧಿ ಮತ್ತು . ಮಗಳ ವಿದ್ಯಾಭ್ಯಾಸ ಮತ್ತು ವಿವಾಹಕ್ಕೆ ಪೋಷಕರು ಉಳಿತಾಯ ಮಾಡುವುದು ಸಾಮಾನ್ಯ. ಇದಕ್ಕಾಗಿ ಸೂಕ್ತ ಆಯ್ಕೆಯೂ ಮುಖ್ಯ. ಈ ಕುರಿತ ಉಪಯುಕ್ತ ಮಾಹಿತಿ ಇಲ್ಲಿದೆ. ಪಿಪಿಎಫ್‌: ದೀರ್ಘಕಾಲೀನ ಹೂಡಿಕೆಗೆ ಪಿಪಿಎಫ್‌ ಉತ್ತಮ ಆಯ್ಕೆ. ತೆರಿಗೆ ಉಳಿತಾಯಕ್ಕೂ ಇದು ಸಹಕಾರಿ. ಇದರ ಜತೆಗೆ ಉತ್ತಮ ಬಡ್ಡಿ ಆದಾಯವೂ ಸೇರುತ್ತದೆ. ಇದೇ ಅವಧಿಯ ಇತರ ನಿಶ್ಚಿತ ಠೇವಣಿಗಳಿಗೆ ಹೋಲಿಸಿದರೆ ಪಿಪಿಎಫ್‌ ಬಡ್ಡಿ ದರ ಹೆಚ್ಚು. ಇದರಲ್ಲಿ ಸಿಗುವ ಬಡ್ಡಿಗೂ ತೆರಿಗೆ ಇಲ್ಲ. ಪಿಪಿಎಫ್‌ ಅಡಿಯಲ್ಲಿ ವರ್ಷಕ್ಕೆ ಗರಿಷ್ಠ 12 ಕಂತುಗಳಲ್ಲಿಹಣ ಪಾವತಿಸಬಹುದು. ಕನಿಷ್ಠ 500 ರೂ.ಗಳಿಂದ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಪಿಪಿಎಫ್‌ ಖಾತೆಯ ಅವಧಿ 15 ವರ್ಷ. ಸದ್ಯಕ್ಕೆ ವಾರ್ಷಿಕ ಬಡ್ಡಿ ಶೇ.7.1 ಸುಕನ್ಯಾ ಸಮೃದ್ಧಿ ಯೋಜನೆ (ಎಸ್‌ಎಸ್‌ವೈ): ಹೆಣ್ಣು ಮಕ್ಕಳ ಭವಿಷ್ಯಕ್ಕೆ ಉತ್ತಮ ಉಳಿತಾಯ ಯೋಜನೆಗಳಲ್ಲಿ ಜನಪ್ರಿಯ ಸುಕನ್ಯಾ ಸಮೃದ್ಧಿ ಯೋಜನೆ. ಹಣ್ಣು ಮಗುವಿಗೆ ಜನ್ಮ ದಿನದಿಂದ 10 ವರ್ಷ ಆಗುವ ತನಕ ಎಸ್‌ಎಸ್‌ವೈ ಖಾತೆ ತೆರೆಯಬಹುದು. ಮಗು ಭಾರತದಲ್ಲಿಯೇ ವಾಸಿಸುತ್ತಿರಬೇಕು. ಮಗುವಿಗೆ 18 ವರ್ಷ ತುಂಬಿದಾಗ ಖಾತೆದಾರಳಾಗುತ್ತಾಳೆ. ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ಕನಿಷ್ಠ ಹೂಡಿಕೆ ವಾರ್ಷಿಕ 250 ರೂ. ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ಇರುವುದಿಲ್ಲ. ಈಗ ಬಡ್ಡಿ ದರ ಶೇ.7.6 ಯಾವುದು ಸೂಕ್ತ? ಬಡ್ಡಿ ದರದ ದೃಷ್ಟಿಯಿಂದ ಪಿಪಿಎಫ್‌ಗಿಂತ ಸುಕನ್ಯಾ ಸಮೃದ್ಧಿ ಹೆಚ್ಚು ನೀಡುತ್ತದೆ. ಹೀಗಿದ್ದರೂ ಪ್ರತಿ ಮೂರು ತಿಂಗಳಿಗೊಮ್ಮೆ ಎರಡರ ಬಡ್ಡಿ ದರ ಪರಿಷ್ಕರಣೆಯಾಗುತ್ತಿರುತ್ತದೆ. ಹೀಗಿದ್ದರೂ ಹೆಣ್ಣು ಮಕ್ಕಳಿಗೆ 21 ವರ್ಷದ ನಂತರವೂ ಆದಾಯ ಒದಗಿಸುವ ಉದ್ದೇಶ ಇದ್ದರೆ ಪಿಪಿಎಫ್‌ ಆಯ್ಕೆ ಸೂಕ್ತ. 21 ವರ್ಷದ ತನಕ ಎಸ್‌ಎಸ್‌ವೈ ಉತ್ತಮ. ತಜ್ಞರ ಪ್ರಕಾರ ಹೆಣ್ಣು ಮಗುವಿನ ಹೆಸರಿನಲ್ಲಿ ಪಿಪಿಎಫ್‌ ಮತ್ತು ಎಸ್‌ಎಸ್‌ವೈ ಎರಡೂ ಖಾತೆಗಳನ್ನು ಹೊಂದುವುದು ಉತ್ತಮ.