ಪತ್ನಿಯನ್ನೇ ವೇಶ್ಯೆ ಎಂದು ಬಿಂಬಿಸಲು ಯತ್ನಿಸಿದ ಗಂಡನ ವಿರುದ್ಧ ಕೇಸು ದಾಖಲು..!

ಪತ್ನಿಯ ಹೆಸರಿನಲ್ಲಿ ಪತಿ ಸುಳ್ಳು ಖಾತೆ ಸೃಷ್ಟಿಸಿ ಆಕೆಯ ಮೊಬೈಲ್‌ ನಂಬರ್‌ ಅನ್ನು ನಮೂದಿಸಿ ಎಸ್ಕಾರ್ಟ್‌ ಸರ್ವೀಸ್ ದೊರೆಯುವುದು ಎಂಬುದಾಗಿ ಲೇಬಲ್‌ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ.

ಪತ್ನಿಯನ್ನೇ ವೇಶ್ಯೆ ಎಂದು ಬಿಂಬಿಸಲು ಯತ್ನಿಸಿದ ಗಂಡನ ವಿರುದ್ಧ ಕೇಸು ದಾಖಲು..!
Linkup
: ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿಯನ್ನೇ ಎಂದು ಬಿಂಬಿಸಿ ವಿಕೃತಿ ಮೆರೆದಿರುವ ಪತಿ ವಿರುದ್ಧ ಪತ್ನಿ ಪುಲಿಕೇಶಿ ನಗರದಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇಂದಿರಾನಗರದ ನಿವಾಸಿ 25 ವರ್ಷದ ಮಹಿಳೆ ಕೊಟ್ಟ ದೂರಿನ ಆಧಾರದ ಮೇಲೆ ಪತಿ ಜಯಶಂಕರ್‌ ಕುಮಾರ್‌ ಸಿಂಗ್‌ (29) ವಿರುದ್ಧ ಪ್ರಕರಣ ದಾಖಲಾಗಿದೆ. ಟೆಕ್ಕಿ ಪತ್ನಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಎಸ್ಕಾರ್ಟ್‌ ಸರ್ವೀಸ್ ದೊರೆಯಲಿದೆ ಎಂದು ಹೆಂಡತಿಯ ಮೊಬೈಲ್‌ ನಂಬರ್‌ ಹಾಕಿ ವಿಕೃತಿ ಮೆರೆದ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪುಲಕೇಶಿ ನಗರದ ಮಹಿಳಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜಯಶಂಕರ್‌ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದೂರುದಾರ ಮಹಿಳೆಯನ್ನು 2019 ರಲ್ಲಿ ವಿವಾಹವಾಗಿದ್ದ. ಮನೆಯ ಖರ್ಚು ವೆಚ್ಚಗಳನ್ನೆಲ್ಲಾ ಆಕೆಯೇ ಭರಿಸುತ್ತಿದ್ದಳಂತೆ. ಈ ಮಧ್ಯೆ ನೀನು ಯಾರೊಂದಿಗೂ ಮಾತನಾಡಬಾರದು, ಅದರಲ್ಲೂ ತವರು ಮನೆಯವರೊಂದಿಗೆ ಮಾತನಾಡಬಾರದು ಎಂದು ತಾಕೀತು ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಬಗ್ಗೆ ಮಹಿಳೆ ಪ್ರಶ್ನಿಸಿದಾಗ ಕೊಲೆ ಮಾಡುವುದಾಗಿ ಜಯಶಂಕರ್‌ ಕುಮಾರ್‌ ಸಿಂಗ್‌ ಬೆದರಿಕೆ ಹಾಕಿದ್ದ. ಕಿರುಕುಳ ತಾಳದೇ 2020ರ ನವೆಂಬರ್‌ನಲ್ಲಿ ಪತಿಯ ಮನೆ ತೊರೆದ ಟೆಕ್ಕಿ, ಪಿಜಿಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಮನೆ ಬಿಟ್ಟು ಬಂದರೂ ಸುಮ್ಮನಾಗದ ಪತಿ, ವಿವಿಧ ನಂಬರ್‌ಗಳಿಂದ ಅಶ್ಲೀಲ ಸಂದೇಶ ಕಳುಹಿಸಿ ತೊಂದರೆ ಕೊಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಪತ್ನಿಯ ಹೆಸರಿನಲ್ಲಿ ಸುಳ್ಳು ಖಾತೆ ಸೃಷ್ಟಿಸಿ ಆಕೆಯ ಮೊಬೈಲ್‌ ನಂಬರ್‌ ಅನ್ನು ನಮೂದಿಸಿ ಎಸ್ಕಾರ್ಟ್‌ ಸರ್ವೀಸ್ ದೊರೆಯುವುದು ಎಂಬುದಾಗಿ ಲೇಬಲ್‌ ಹಾಕಿದ್ದ ಎಂದು ಮಹಿಳೆ ಆರೋಪಿಸಿದ್ದಾಳೆ. ಇತ್ತೀಚೆಗೆ ದೂರುದಾರ ಮಹಿಳೆಯ ಮೊಬೈಲ್‌ ನಂಬರ್‌ಗೆ ಹಲವು ಜನರಿಂದ ಕೆಟ್ಟ ಸಂದೇಶ ಹಾಗೂ ಕರೆಗಳು ಬರಲು ಪ್ರಾರಂಭವಾಗಿವೆ. ಏಕಾಏಕಿ ಕೆಟ್ಟ ಸಂಭಾಷಣೆಯ ಕರೆಗಳು ಬರುತ್ತಿರುವುದನ್ನು ಕಂಡು ಆತಂಕಗೊಂಡ ಟೆಕ್ಕಿ ಈ ಬಗ್ಗೆ ಕೂಲಂಕಷವಾಗಿ ವಿಚಾರಿಸಿದಾಗ ಪತಿಯ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಹಳೆ ಚಾಳಿ ಮುಂದುವರಿಸಿದ ಪತಿ: ಕಳೆದ ಜನವರಿಯಲ್ಲಿ ಪತಿಯ ವಿರುದ್ಧ ಹಲಸೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿತ್ತು. ಪೊಲೀಸರು ತಿಳಿವಳಿಕೆ ಹೇಳಿದ ಹಿನ್ನೆಲೆಯಲ್ಲಿ ಮುಂದೆ ತೊಂದರೆ ಕೊಡುವುದಿಲ್ಲ ಎಂದು ಹೇಳಿದ್ದ. ಇದೀಗ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾನೆ ಎನ್ನಲಾಗುತ್ತಿದೆ. ಈ ಕೃತ್ಯಗಳಿಗೆ ಆತನ ಕುಟುಂಬಸ್ಥರೂ ಸಹಕಾರ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.