ಹೊಸದಿಲ್ಲಿ: ಸಾರ್ವಜನಿಕ ವಲಯದ ಹಲವಾರು ಬ್ಯಾಂಕ್‌ಗಳು ಮತ್ತು ಅಂಚೆ ಇಲಾಖೆಯು ಪಿಂಚಣಿದಾರರಿಗೆ ಮನೆಯಿಂದಲೇ ಅಕ್ಟೋಬರ್ 1 ರಿಂದ ಅವರ ವಾರ್ಷಿಕ (ಡಿಜಿಟಲ್ ಲೈಫ್ ಸರ್ಟಿಫಿಕೇಟ್ -ಡಿಎಲ್‌ಸಿ)ವನ್ನು ಸಲ್ಲಿಸಲು ಅವಕಾಶ ನೀಡಿವೆ. ಈ ಸೇವೆ ಹೇಗಿರುತ್ತದೆ ಎಂಬುದನ್ನು ನೋಡೋಣ.
ಇದುವರೆಗೆ ಪಿಂಚಣಿದಾರರು ಜೀವನ್ ಪ್ರಮಾಣ್ ಪತ್ರ ಸಲ್ಲಿಸಲು ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ತೆರಳಬೇಕಾಗುತ್ತಿತ್ತು. ಆದರೆ ಈಗ ಮನೆಯಿಂದಲೇ ಸಲ್ಲಿಸಬಹುದು. ಇಲಾಖೆ 2021ರ ಸೆಪ್ಟೆಂಬರ್ 20ಕ್ಕೆ ಹೊರಡಿಸಿದ ಸುತ್ತೋಲೆಯ ಪ್ರಕಾರ ಪಿಂಚಣಿದಾರರು 12 ಸಾರ್ವಜನಿಕ ಬ್ಯಾಂಕ್‌ಗಳನ್ನು ಒಳಗೊಂಡಿರುವ 'ಡೋರ್‌ಸ್ಟೆಪ್ ಬ್ಯಾಂಕಿಂಗ್ ಅಲೈಯನ್ಸ್ ಸೇವೆ'ಯನ್ನು ಬಳಸಿ ಮನೆಯಿಂದಲೇ ಸಲ್ಲಿಸಬಹುದು. ಅಂಚೆ ಇಲಾಖೆ ಕೂಡ ಇದೇ ರೀತಿಯ ಸೇವೆ ನೀಡುತ್ತದೆ.
ಡೋರ್‌ಸ್ಟೆಪ್ ಬ್ಯಾಂಕಿಂಗ್ ಅಲೈಯನ್ಸ್
ಈ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಯುಕೊ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೀಡುತ್ತವೆ.
ಸೇವೆ ಪಡೆಯುವುದು ಹೇಗೆ?
ಪಿಂಚಣಿದಾರರು ಮೊಬೈಲ್ ಆ್ಯಪ್, ವೆಬ್‌ಸೈಟ್ ಅಥವಾ ಟೋಲ್-ಫ್ರೀ ಸಂಖ್ಯೆಯ ಮೂಲಕ ಪಿಎಸ್‌ಬಿ ಅಲೈಯನ್ಸ್‌ನ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆಯನ್ನು ಬುಕ್ ಮಾಡಬಹುದು. ಬ್ಯಾಂಕ್‌ನ ಏಜೆಂಟರು ಪಿಂಚಣಿದಾರರ ಮನೆಗೆ ನಿಗದಿತ ದಿನಾಂಕ ಮತ್ತು ಸಮಯಕ್ಕೆ ಬರುತ್ತಾರೆ. ಮನೆಬಾಗಿಲಿನಲ್ಲೇ ಏಜೆಂಟರು ಜೀವನ್ ಪ್ರಮಾಣ್ ಆ್ಯಪ್ ಬಳಸಿ ಸಲ್ಲಿಸಬಹುದು.
ಈ ಸೇವೆಯನ್ನು ಕಾಯ್ದಿರಿಸಲು ಗೂಗಲ್ ಪ್ಲೇಸ್ಟೋರ್‌ನಿಂದ 'ಡೋರ್‌ಸ್ಟೆಪ್ ಬ್ಯಾಂಕಿಂಗ್' ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ವೆಬ್‌ಸೈಟ್
ಅಥವಾ
ಅನ್ನೂ ಬಳಸಬಹುದು. ಟೋಲ್‌ಫ್ರೀ ಸಂಖ್ಯೆ 18001213721 ಅಥವಾ 18001037188 ಅನ್ನು ಬಳಸಬಹುದು. ಅಲೈಯನ್ಸ್ ವೆಬ್ ಸೈಟ್‌ನಲ್ಲಿ ಇದಕ್ಕೆ ಸೇವಾ ಶುಲ್ಕ ನಿಗದಿಪಡಿಸಿಲ್ಲವಾದರೂ, ಎಸ್‌ಬಿಐ ವೆಬ್‌ಸೈಟ್ ಪ್ರಕಾರ 75 ರೂ. ಹಾಗೂ ಜಿಎಸ್‌ಟಿ ಅನ್ವಯವಾಗುತ್ತದೆ.
ಪೋಸ್ಟ್ ಮ್ಯಾನ್ ಮೂಲಕ ಹೇಗೆ?
ಅಂಚೆ ಇಲಾಖೆಯು 2020ರ ನವೆಂಬರ್‌ನಲ್ಲಿ ಪೋಸ್ಟ್ ಮ್ಯಾನ್ ಮೂಲಕ ಡಿಜಿಟಲ್ ಜೀವನ್ ಪ್ರಮಾಣ್ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಿತು. ಇಂಡಿಯಾ ಪೋಸ್ಟ್ ಮೂಲಕ ಈ ಸೇವೆ ಪಡೆಯಲು ಪೋಸ್ಟ್‌ಇನ್ಫೋ (Postinfo) ಆಪ್ ಡೌನ್ಲೋಡ್ ಮಾಡಬೇಕು.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವೆಬ್‌ಸೈಟ್ ಪ್ರಕಾರ ಈ ಸೇವೆ ಖಾತೆದಾರರು ಅಲ್ಲದವರಿಗೂ ಇದೆ. ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್‌ಸಿ) ಸೇವೆ ಪಡೆದುಕೊಳ್ಳಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು ಅಥವಾ ಪೋಸ್ಟ್ ಮ್ಯಾನ್ ಮನೆಗೆ ಭೇಟಿ ನೀಡಲು ಪೋಸ್ಟ್‌ಇನ್ಫೋ ಆಪ್ ಮೂಲಕ ಮನವಿ ಕಳುಹಿಸಬೇಕು.
ಈ ವೆಬ್‌ಸೈಟ್ ಮೂಲಕವೂ ರಿಕ್ವೆಸ್ಟ್ ಕಳುಹಿಸಬಹುದು.
ಅದೇ ಕ್ಷಣದಲ್ಲಿ ಡಿಎಲ್‌ಸಿ ಸರ್ಟಿಫಿಕೇಟ್ ಕ್ರಿಯೇಟ್ ಆಗಲಿದೆ. ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಮಾಣ್ ಐಡಿ (Pramaan ID) ಜನರೇಟ್ ಆಗಲಿದೆ. ಇದನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ನೇರವಾಗಿ ಪಿಂಚಣಿದಾರರ ಜತೆ ಹಂಚಿಕೊಳ್ಳಲಿದೆ. ಪ್ರಮಾಣ್ ಐಡಿ ಜನರೇಟ್ ಆದ ನಂತರ ಪಿಂಚಣಿದಾರರು
ನಿಂದ ಡಿಎಲ್‌ಸಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರತೀ ಬಾರಿ ಡಿಎಲ್‌ಸಿ ಜನರೇಟ್ ಮಾಡಿದಾಗೂ 70 ರೂಪಾಯಿಗಳ ಸೇವಾ ಶುಲ್ಕ (ಜಿಎಸ್‌ಟಿ/ಸೆಸ್ ಸೇರಿ) ಪಡೆದುಕೊಳ್ಳಲಾಗುತ್ತದೆ. ಮನೆ ಬಾಗಿಲಿಗೆ ಡಿಎಲ್‌ಸಿ ನೀಡಲು ಯಾವುದೇ ಶುಲ್ಕವನ್ನು ಪಡೆದುಕೊಳ್ಳಲಾಗುವುದಿಲ್ಲ.
ಮನೆ ಬಾಗಿಲಿನಲ್ಲಿ ಈ ರೀತಿ ಡಿಎಲ್‌ಸಿ ಅಥವಾ ಜೀವನ್ ಪ್ರಮಾಣ ಪತ್ರ ಪಡೆದುಕೊಳ್ಳಲು ಬಯಸುವವರು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.
- ಆಧಾರ್ ಸಂಖ್ಯೆ
- ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆ
- ಪಿಂಚಣಿಯ ವಿಧ
- ಮಂಜೂರಾತಿ ಪ್ರಾಧಿಕಾರ
- ಪಿಪಿಒ ಸಂಖ್ಯೆ
- ಖಾತೆ ಸಂಖ್ಯೆ (ಪಿಂಚಣಿ)
ಜತೆಗೆ ಪಿಂಚಣಿದಾರರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ/ಅಂಚೆ ಕಚೇರಿಯಲ್ಲಿ ರಿಜಿಸ್ಟರ್ ಆಗಿರಬೇಕು.