ನಿವೃತ್ತರು ಗೃಹ ಸಾಲ ಪಡೆಯುವ ಮುನ್ನ ಗಮನಿಸಲೇಬೇಕಾದ 5 ಅಂಶಗಳಿವು!

ನಿವೃತ್ತರಾದ ಬಳಿಕ ಅನುಕೂಲಕರ ಜೀವನ ನಡೆಸುವುದು ಅನೇಕರ ಕನಸು. 60 ವರ್ಷ ವಯಸ್ಸಿನ ಹಿರಿಯರಿಗೆ 10 ವರ್ಷ ಅವಧಿಯ ಗೃಹ ಸಾಲ ಸಿಗಬಹುದು. ಸಾಲ ಪಡೆಯುವಾಗ ಗಮನಿಸಬೇಕಾದ 5 ಪ್ರಮುಖ ಅಂಶಗಳು ಇಲ್ಲಿವೆ.

ನಿವೃತ್ತರು ಗೃಹ ಸಾಲ ಪಡೆಯುವ ಮುನ್ನ ಗಮನಿಸಲೇಬೇಕಾದ 5 ಅಂಶಗಳಿವು!
Linkup
ಹೊಸದಿಲ್ಲಿ: ವಯಸ್ಸಾದಂತೆ ಪಡೆಯುವುದು ದುಸ್ತರವಾಗುತ್ತದೆ. ನಿವೃತ್ತರಾದ ಬಳಿಕ ಅನುಕೂಲಕರ ಜೀವನ ನಡೆಸುವುದು ಅನೇಕರ ಕನಸು. ಸ್ವಂತ ಮನೆ ಹೊಂದುವುದೂ ಅಂಥ ಕನಸುಗೊಳಲ್ಲೊಂದು. ವಯಸ್ಸಾದಂತೆ ಹೋಮ್‌ಲೋನ್‌ ಪಡೆಯುವುದು ಕಷ್ಟವಾದರೂ, ಕೆಲ ಬ್ಯಾಂಕ್‌ಗಳು ಹಿರಿಯರಿಗೆ ಒದಗಿಸುತ್ತವೆ. ಅಲ್ಪಾವಧಿಯ ಗೃಹ ಸಾಲ: 60 ವರ್ಷ ವಯಸ್ಸಾದವರಿಗೆ ಕೆಲವು ಬ್ಯಾಂಕ್‌ಗಳು ಅಲ್ಪಾವಧಿಗೆ ಗೃಹ ಸಾಲ ಸೌಲಭ್ಯ ನೀಡುತ್ತವೆ. ಆದರೆ ಸಾಮಾನ್ಯವಾಗಿ 70 ವರ್ಷ ದಾಟಿದವರಿಗೆ ಗೃಹ ಸಾಲ ಸಿಗುವುದಿಲ್ಲ. ಇದರ ಅರ್ಥ ಏನೆಂದರೆ, 60 ವರ್ಷ ವಯಸ್ಸಿನ ಹಿರಿಯರಿಗೆ 10 ವರ್ಷ ಅವಧಿಯ ಗೃಹ ಸಾಲ ಸಿಗಬಹುದು. ಅಲ್ಪ ಮೊತ್ತದ ಸಾಲ ಸೂಕ್ತ: ಹಿರಿಯ ನಾಗರಿಕರು ಅಲ್ಪ ಮೊತ್ತದ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಸ್ವೀಕಾರವಾಗುವ ಸಾಧ್ಯತೆ ಇರುತ್ತದೆ. ದೊಡ್ಡ ಮೊತ್ತದ ಸಾಲದ ಅರ್ಜಿ ಸ್ವೀಕೃತಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಕಡಿಮೆ ಮೊತ್ತದ ಗೃಹ ಸಾಲವಾದರೆ ಇಎಂಐ ಕೂಡ ಕಡಿಮೆ ಸಾಕಾಗುತ್ತದೆ. ಬ್ಯಾಂಕ್‌ಗಳಿಗೂ ರಿಸ್ಕ್‌ ಕಡಿಮೆಯಾಗುತ್ತದೆ. ಸಹ ಅರ್ಜಿದಾರರ ಸಹಕಾರ: ನಿವೃತ್ತರು ಹೆಚ್ಚಿನ ಮೊತ್ತದ ಗೃಹ ಸಾಲವೇ ಬಯಸುತ್ತಿದ್ದರೆ, ಮತ್ತೊಂದು ದಾರಿ ಇದೆ. ಅದೇನೆಂದರೆ ಹೆಚ್ಚಿನ ಕ್ರೆಡಿಟ್‌ ಸ್ಕೋರ್‌ ಇರುವ ಸಹ ಅರ್ಜಿದಾರರೊಡನೆ ಜಂಟಿಯಾಗಿ ಅರ್ಜಿ ಸಲ್ಲಿಸುವುದು. ಯಾರಾದರೂ ಕಿರಿ ವಯಸ್ಸಿನ ಮತ್ತು ಉತ್ತಮ ಕ್ರೆಡಿಟ್‌ ಸ್ಕೋರ್‌ ಇರುವವರ ಜತೆ ಅರ್ಜಿ ಸಲ್ಲಿಸುವುದು ಉತ್ತಮ. ನಿಮ್ಮ ಪತ್ನಿ, ಮಗಳಾದರೂ ಜಂಟಿ ಅರ್ಜಿದಾರರಾಗಬಹುದು. ವಿಮೆಯನ್ನು ಖಾತರಿಗೆ ನೀಡಿ: ಬ್ಯಾಂಕ್‌ಗಳು ಗೃಹ ಸಾಲ ವಿಮೆಯನ್ನು ಸಾಲದ ಜತೆಗೆ ಖರೀದಿಸಲು ಸೂಚಿಸಬಹುದು. ಇದು ಸಾಲವು ಅನುತ್ಪಾದಕ ಸಾಲ (ಎನ್‌ಪಿಎ) ಆಗದಂತೆ ನೋಡಿಕೊಳ್ಳಲು ಸಹಕಾರಿ. ಹಿರಿಯ ನಾಗರಿಕರು ಸೆಕ್ಯೂರ್ಡ್‌ ಸಾಲ ಪಡೆಯುವುದು ಸೂಕ್ತ. ಸೆಕ್ಯೂರ್ಡ್‌ ಸಾಲ ಎಂದರೆ ಯಾವುದಾದರೂ ಆಸ್ತಿಯನ್ನು ಅಡಮಾನವಾಗಿಟ್ಟು ಪಡೆಯುವ ಸಾಲ. ಸಾಲಗಾರರು ಆನ್‌ಲೈನ್‌ ಕ್ಯಾಲ್ಕುಲೇಟರ್‌ ಗಳ ಮೂಲಕ ತಮ್ಮ ಸಾಲದ ಅರ್ಹತೆಯನ್ನು ಪರಿಶೀಲಿಸಬಹುದು. ಎಲ್‌ಟಿವಿ ಕಡಿಮೆ ಇರಲಿ: ಬ್ಯಾಂಕ್‌ಗಳ ಸಾಲ ವಿತರಣೆ ಪ್ರಕ್ರಿಯೆಯಲ್ಲಿ ಲೋನ್‌ ಟು ವಾಲ್ಯೂ (ಎಲ್‌ಟಿವಿ) ಎಂಬ ಮಾನದಂಡವಿದೆ. ಅಂದರೆ ಪ್ರಾಪರ್ಟಿಯ ಮೌಲ್ಯ ಮತ್ತು ಸಾಲದ ಮೊತ್ತದ ಅನುಪಾತ. ಇದು ಕಡಿಮೆ ಇದ್ದಷ್ಟೂ ಸಾಲ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.