ಎಲ್‌ಐಸಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ಮುಂದಾದ ಸರಕಾರ

ಭಾರತೀಯ ಜೀವ ವಿಮಾ ನಿಗಮದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲು ಸರಕಾರ ಪರಿಶೀಲಿಸುತ್ತಿದ್ದು, ಇದರಿಂದ ಎಲ್‌ಐಸಿಯ ಐಪಿಒದಲ್ಲಿ ಭಾರತೀಯ ಜೀವ ವಿಮಾ ನಿಗಮದ ಷೇರು ಖರೀದಿಸಲು ವಿದೇಶಿ ಮೂಲದ ಹೂಡಿಕೆದಾರ ಕಂಪನಿಗೆ ಅವಕಾಶ ಸಿಗಲಿದೆ.

ಎಲ್‌ಐಸಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡಲು ಮುಂದಾದ ಸರಕಾರ
Linkup
ಹೊಸದಿಲ್ಲಿ: ಭಾರತೀಯ ಜೀವ ವಿಮಾ ನಿಗಮದಲ್ಲಿ () ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲು ಸರಕಾರ ಪರಿಶೀಲಿಸಿದೆ. ಇದರಿಂದ ಎಲ್‌ಐಸಿಯ ಐಪಿಒ (ಆರಂಭಿಕ ಷೇರು ಕೊಡುಗೆ)ದಲ್ಲಿ ವಿದೇಶಿ ಮೂಲದ ಹೂಡಿಕೆದಾರ ಕಂಪನಿಗೆ ಭಾರತೀಯ ಜೀವ ವಿಮಾ ನಿಗಮದ ಷೇರು ಖರೀದಿಸಲು ಅವಕಾಶ ಸಿಗಲಿದೆ. ನಿರ್ದಿಷ್ಟ ಮಿತಿಯಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಬಹುತೇಕ ವಿಮೆ ಕಂಪನಿಗಳಲ್ಲಿ ಈಗ ಎಫ್‌ಡಿಐ (ವಿದೇಶಿ ನೇರ ಹೂಡಿಕೆ)ಗೆ ಶೇ.74ರ ಮಿತಿ ಇದೆ. ಆದರೆ ಈ ನಿಯಮ ಎಲ್‌ಐಸಿಗೆ ಅನ್ವಯವಾಗದು. ಏಕೆಂದರೆ ಸಂಸತ್ತಿನ ವಿಶೇಷ ಕಾಯಿದೆಯ ಅಡಿಯಲ್ಲಿ ಭಾರತೀಯ ರಚನೆಯಾಗಿದೆ. ಎಲ್‌ಐಸಿಯ ಐಪಿಒದಲ್ಲಿ ರಿಟೇಲ್‌ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಲು ಸರಕಾರ ಯೋಜಿಸಿದೆ. ಎಲ್‌ಐಸಿ ಪಾಲಿಸಿದಾರರಿಗೆ ಡಿಮ್ಯಾಟ್‌ ಖಾತೆ ತೆರೆಯಲು ಅವಕಾಶ ಕಲ್ಪಿಸಲಿದೆ. ಎಲ್‌ಐಸಿ ಏಜೆಂಟರುಗಳು ಈ ಸಂಬಂಧ ಪಾಲಿಸಿದಾರರಿಗೆ ಜಾಗೃತಿ ಮೂಡಿಸುವ ನಿರೀಕ್ಷೆ ಇದೆ.