'ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದು ನಿಜ': ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆಗೆ ರಾಹುಲ್ ಗಾಂಧಿ ಆಗ್ರಹ

ತಮ್ಮ ಫೋನ್ ಕದ್ದಾಲಿಕೆ ಆಗಿರುವುದು ನಿಜ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪೆಗಾಸಸ್ ಸ್ಪೈವೇರ್ ಕುರಿತು ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆಗೆ ಒತ್ತಾಯಿಸಿದ್ದಾರೆ. ಇದನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ.

'ನನ್ನ ಫೋನ್ ಟ್ಯಾಪ್ ಮಾಡುತ್ತಿರುವುದು ನಿಜ': ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆಗೆ ರಾಹುಲ್ ಗಾಂಧಿ ಆಗ್ರಹ
Linkup
ಹೊಸದಿಲ್ಲಿ: ವಿರೋಧಿಗಳ ವಿರುದ್ಧ ಅಸ್ತ್ರವನ್ನಾಗಿ ಅನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಸರಕಾರದ ವಿರುದ್ಧ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ , ತಮ್ಮ ಫೋನ್ ಅನ್ನು ಕೂಡ ಮಾಡಲಾಗುತ್ತಿದೆ ಎಂದಿದ್ದಾರೆ. ಈ ಕುರಿತು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಸುವಂತೆ ಅವರು ಆಗ್ರಹಿಸಿದ್ದಾರೆ. ಆದರೆ ಅವರ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿದೆ. "ನಾನು 'ಸಂಭಾವ್ಯ ಗುರಿ' ಅಲ್ಲ. ನನ್ನ ಫೋನ್ ಟ್ಯಾಪ್ ಮಾಡಲಾಗಿದೆ. ಅದನ್ನು ಕದ್ದಾಲಿಕೆ ಮಾಡಿರುವುದು ಖಚಿತ. ಇದೊಂದೇ ಫೋನ್ ಅಲ್ಲ. ನನ್ನ ಎಲ್ಲಾ ಫೋನ್‌ಗಳನ್ನೂ ಟ್ಯಾಪ್ ಮಾಡಲಾಗಿದೆ" ಎಂದು ಸಂಸತ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ರಾಹುಲ್ ಗಾಂಧಿ ಆರೋಪಿಸಿದರು. 'ನನ್ನ ಫೋನ್ ಟ್ಯಾಪ್ ಮಾಡುವ ಐಬಿಯ ಅಧಿಕಾರಿಗಳಿಂದ ನನಗೆ ಫೋನ್ ಕರೆಗಳು ಬಂದಿದ್ದವು. ನಿಮ್ಮ ಫೋನ್ ಅನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು. ನನ್ನ ಮಾತುಗಳನ್ನೆಲ್ಲವನ್ನೂ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ನನ್ನ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ನನ್ನನ್ನು ಟ್ಯಾಪ್ ಮಾಡುವ ಸಂಭವನೀಯತೆ ಇಲ್ಲ, ಈಗಾಗಲೇ ಟ್ಯಾಪ್ ಮಾಡಲಾಗುತ್ತಿದೆ' ಎಂದು ಕಿಡಿಕಾರಿದರು. 'ಪೆಗಾಸಸ್ ಅನ್ನು ಇಸ್ರೇಲ್ ಸರಕಾರ ಆಯುಧ ಎಂದು ಪರಿಗಣಿಸಿದ್ದು, ಇದನ್ನು ಉಗ್ರರ ವಿರುದ್ಧ ಬಳಸಬೇಕು. ಪ್ರಧಾನಿ ಮತ್ತು ಗೃಹ ಸಚಿವರು ಇದನ್ನು ಭಾರತ ಮತ್ತು ಅದರ ಸಂಸ್ಥೆಗಳ ಮೇಲೆ ಈ ಆಯುಧ ಬಳಸಿದ್ದಾರೆ. ಅದನ್ನು ರಾಜಕೀಯವಾಗಿ ಬಳಸಿದ್ದಾರೆ. ಅವರು ಅದನ್ನು ಕರ್ನಾಟಕದಲ್ಲಿ ಕೂಡ ಬಳಸಿದ್ದಾರೆ' ಎಂದು ವಾಗ್ದಾಳಿ ನಡೆಸಿದರು. 'ಸ್ಪೈವೇರ್ ಪ್ರಕರಣದ ಬಗ್ಗೆ ಎಲ್ಲವನ್ನೂ ನಾವು ಸ್ಪಷ್ಟಪಡಿಸಿದ್ದೇವೆ. ಯಾವುದೇ ತನಿಖೆಗೆ ವಿಷಯವೇ ಇಲ್ಲ. ಆರೋಪಗಳನ್ನು ಮಾಡುತ್ತಿರುವವರು ರಾಜಕೀಯ ವಿಫಲರು ಮತ್ತು ಅವರಿಗೆ ಬೇರೆ ಯಾವುದೇ ವಿಚಾರವಿಲ್ಲ' ಎಂದು ಗೃಹ ವ್ಯವಹಾರಗಳ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಟೀಕಿಸಿದರು. ಪ್ರಧಾನಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭಾರತ ಹಾಗೂ ಅದರ ಸಂಸ್ಥೆಗಳ ವಿರುದ್ಧ ಪೆಗಾಸಸ್ ಸ್ಪೈವೇರ್ ಬಳಸುತ್ತಿದ್ದಾರೆ. ಇದಕ್ಕೆ ಇರುವ ಒಂದೇ ಒಂದು ಪದವೆಂದರೆ ವಿಶ್ವಾಸಘಾತುಕತೆ ಎಂದಿರುವ ರಾಹುಲ್ ಗಾಂಧಿ, ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆ ನಡೆಯಬೇಕು ಮತ್ತು ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.