ನಟಿಯರಾದ ಪ್ರಿಯಾಮಣಿ, ವಿದ್ಯಾ ಬಾಲನ್ ಸಂಬಂಧಿಕರು ಎನ್ನುವ ವಿಚಾರ ಅನೇಕರಿಗೆ ಗೊತ್ತೇ ಇಲ್ಲ!

ಪಂಚಭಾಷಾ ತಾರೆ ಪ್ರಿಯಾಮಣಿ ಹಾಗೂ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ಸಂಬಂಧಿಕರು ಎನ್ನುವ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ. ದಶಕಗಳ ಹಿಂದೆಯೇ ಪ್ರಿಯಾಮಣಿ ಈ ವಿಚಾರ ಹೇಳಿದ್ದರು. ಯಾವ ರೀತಿಯಲ್ಲಿ ಸಂಬಂಧಿಕರು?

ನಟಿಯರಾದ ಪ್ರಿಯಾಮಣಿ, ವಿದ್ಯಾ ಬಾಲನ್ ಸಂಬಂಧಿಕರು ಎನ್ನುವ ವಿಚಾರ ಅನೇಕರಿಗೆ ಗೊತ್ತೇ ಇಲ್ಲ!
Linkup
ಪಂಚಭಾಷಾ ತಾರೆ ನಟಿ ಅವರು ಸದ್ಯ 'ದಿ ಪ್ಯಾಮಿಲಿ ಮ್ಯಾನ್ 2'ರ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ದಶಕದ ಹಿಂದೆ ನಟಿ ಕುರಿತು ಪ್ರಿಯಾಮಣಿ ಮಾತನಾಡಿದ್ದರು. 'ದಿ ಪ್ಯಾಮಿಲಿ ಮ್ಯಾನ್ 2' ಕಲಾವಿದರ ಕುರಿತಾದ ಸ್ಟೋರಿಗಳು ಈಗ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಹೀಗಾಗಿ ಪ್ರಿಯಾಮಣಿ, ವಿದ್ಯಾ ವಿಚಾರಗಳು ಈಗ ವೈರಲ್ ಆಗುತ್ತಿವೆ. ಇನ್ನು ವಿದ್ಯಾ ಬಾಲನ್ ಹಾಗೂ ಪ್ರಿಯಾಮಣಿ ಸಂಬಂಧಿಕರು ಎನ್ನುವ ವಿಚಾರ ಅನೇಕರಿಗೆ ಗೊತ್ತಿಲ್ಲ. ಪ್ರಿಯಾಮಣಿ, ವಿದ್ಯಾ ಬಾಲನ್ ಸಂಬಂಧಿಕರು ವಿದ್ಯಾ ಬಾಲನ್ ಅವರು ತಮಿಳು ಕುಟುಂಬಕ್ಕೆ ಸೇರಿದವರು. ವಿದ್ಯಾ ಬಾಲನ್ ತಂದೆ ಪಿ ಆರ್ ಬಾಲನ್ ಅವರು ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ವಿದ್ಯಾರಿಗೆ ಪ್ರಿಯಾ ಎಂಬ ಅಕ್ಕ ಇದ್ದಾರೆ. ಪ್ರಿಯಾಮಣಿಗೆ ವಿದ್ಯಾ ಅವರು ಸಹೋದರ ಸಂಬಂಧಿ ಆಗುತ್ತಾರಂತೆ. ಈ ಕುರಿತು ಹಿಂದೊಮ್ಮೆ ಪ್ರಿಯಾಮಣಿ ಮಾತನಾಡಿದ್ದರು. ವಿದ್ಯಾ ಬಾಲನ್ ಕುರಿತು ಪ್ರಿಯಾಮಣಿ ಹೇಳಿದ್ದೇನು? ವಿದ್ಯಾ ಬಾಲನ್ ಕುರಿತು 2010ರಲ್ಲಿ ಮಾತನಾಡಿದ್ದ ಪ್ರಿಯಾಮಣಿ ಅವರು "ವಿದ್ಯಾ ಅವರು ನಮ್ಮ ಕುಟುಂಬದವರು ಎಂದು ಹೇಳಲು ಹೆಮ್ಮೆಪಡುವೆ. ಅವರಿಗೆ ಉಜ್ವಲ ಭವಿಷ್ಯ ಸಿಗಲಿ ಎಂದು ಹಾರೈಸುವೆ. ನಾನು ಹಾಗೂ ವಿದ್ಯಾ ಸಹೋದರ ಸಂಬಂಧಿಗಳು, ಆದರೆ ವೈಯಕ್ತಿಕವಾಗಿ ನಮ್ಮಿಬ್ಬರ ಮಧ್ಯೆ ಸಂಪರ್ಕ ಇಲ್ಲ. ಆದರೆ ವಿದ್ಯಾ ತಂದೆ ಜೊತೆಗೆ ಆಗಾಗ ಮಾತನಾಡುತ್ತಿರುತ್ತೇನೆ. ಮುಂಬೈಗೆ ಬಂದಾಗ ಸಾಧ್ಯವಾದಾಗಲೆಲ್ಲ ಅವರ ತಂದೆಗೆ ಫೋನ್ ಮಾಡಿ ಮಾತನಾಡುತ್ತೇನೆ" ಎಂದು ಹೇಳಿಕೆ ನೀಡಿದ್ದರು. ಸಿನಿಮಾ ಕುರಿತಂತೆ ವಿದ್ಯಾ ಬಾಲನ್ ಸಲಹೆಯನ್ನು ಪ್ರಿಯಾಮಣಿ ಪಡೆದುಕೊಳ್ತಾರಾ? "ಸಾಧ್ಯವಾದರೆ ಇನ್ನೊಂದು ದಿನ ವಿದ್ಯಾ ಅವರನ್ನು ಭೇಟಿ ಮಾಡುವೆ. ಸಹೋದರ ಸಂಬಂಧಿ ಅನ್ನೋದು ಬಿಡಿ, ಆದರೆ ಕಲಾವಿದೆಯಾಗಿ ನಾನು ಅವರ ಬಗ್ಗೆ ತುಂಬ ಹೆಮ್ಮೆ ಪಡುವೆ. ಉತ್ತಮ ಕಲಾವಿದೆ ಅವರು. ಯಾವ ಸಿನಿಮಾಕ್ಕೆ ಸಹಿ ಹಾಕಬೇಕು, ಬೇಡ ಅಂತ ನಾನು ವಿದ್ಯಾರ ಬಳಿ ಸಲಹೆ ಕೇಳಬೇಕಿಲ್ಲ. ನಾನು ಸ್ವತಂತ್ರಳು. ವಿದ್ಯಾ ಅವರ ಹೆಸರು ಬಳಸಿಕೊಂಡರೆ ಮುಂಬೈನಲ್ಲಿ ನನಗೆ ಇನ್ನಷ್ಟು ಮೈಲಿಗಲ್ಲು ಸಿಗಬಹುದು. ಆದರೆ ಅದು ನನಗೆ ಬೇಕಿಲ್ಲ. ಪ್ರತಿಭೆಯನ್ನು ಯಾವುದಕ್ಕೂ ಬದಲಿಸಲು ಸಾಧ್ಯವಿಲ್ಲ" ಎಂದು ಪ್ರಿಯಾಮಣಿ ಹೇಳಿಕೆ ನೀಡಿದ್ದರು. ಮಾಡೆಲ್ ಆಗಿ ಕೆಲಸ ಆರಂಭಿಸಿದ ಪ್ರಿಯಾಮಣಿ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದರು. ಸದ್ಯ ಅವರ ಕೈತುಂಬ ಸಿನಿಮಾಗಳಿವೆ. ಕೊರೊನಾ ವೈರಸ್ ಕಾರಣಕ್ಕೆ ಸಿನಿಮಾ ರಿಲೀಸ್ ಆಗೋದು ತಡವಾಗುತ್ತಿದೆ.