ಧ್ರುವ ಸರ್ಜಾ-ಎ.ಪಿ.ಅರ್ಜುನ್ ಕಾಂಬಿನೇಶನ್‌ನ ಚಿತ್ರಕ್ಕೆ ಟೈಟಲ್ ಫಿಕ್ಸ್: 'ಮಾರ್ಟಿನ್' ಆದ ಆಕ್ಷನ್ ಪ್ರಿನ್ಸ್!

ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾದ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿದೆ. ಧ್ರುವ ಸರ್ಜಾ ಹಾಗೂ ಎ.ಪಿ.ಅರ್ಜುನ್ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಮಾರ್ಟಿನ್' ಎಂಬ ಶೀರ್ಷಿಕೆ ಇಡಲಾಗಿದೆ.

ಧ್ರುವ ಸರ್ಜಾ-ಎ.ಪಿ.ಅರ್ಜುನ್ ಕಾಂಬಿನೇಶನ್‌ನ ಚಿತ್ರಕ್ಕೆ ಟೈಟಲ್ ಫಿಕ್ಸ್: 'ಮಾರ್ಟಿನ್' ಆದ ಆಕ್ಷನ್ ಪ್ರಿನ್ಸ್!
Linkup
'ಅದ್ಧೂರಿ', 'ಬಹದ್ದೂರ್', 'ಭರ್ಜರಿ', 'ಪೊಗರು' ಚಿತ್ರಗಳ ಬಳಿಕ ಆಕ್ಷನ್ ಪ್ರಿನ್ಸ್ ಯಾವ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾರೆ ಎಂಬ ಕುತೂಹಲ ಕನ್ನಡ ಸಿನಿ ಪ್ರಿಯರಿಗೆ ಕಾಡುತ್ತಿತ್ತು. ಆ ಕುತೂಹಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ ಅಭಿನಯದ ಐದನೇ ಸಿನಿಮಾದ ಟೈಟಲ್ ಟೀಸರ್ ಇಂದು ಬಿಡುಗಡೆಯಾಗಿದೆ. '' ಆದ ಧ್ರುವ ಸರ್ಜಾ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ರುವ ಸರ್ಜಾ ಅಭಿನಯದ ಐದನೇ ಚಿತ್ರದ ಟೈಟಲ್ ಟೀಸರ್ ರಿಲೀಸ್ ಆಗಿದೆ. ಧ್ರುವ ಸರ್ಜಾ ಹಾಗೂ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ಚಿತ್ರಕ್ಕೆ 'ಮಾರ್ಟಿನ್' ಎಂಬ ಶೀರ್ಷಿಕೆ ಇಡಲಾಗಿದೆ. ಆ ಮೂಲಕ ಧ್ರುವ ಸರ್ಜಾ ಅವರ ಐದನೇ ಚಿತ್ರವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಧ್ರುವ ಸರ್ಜಾ ನಟನೆಯ 'ಮಾರ್ಟಿನ್' ಚಿತ್ರಕ್ಕೆ ಎ.ಪಿ.ಅರ್ಜುನ್ ಆಕ್ಷನ್ ಕಟ್ ಹೇಳಲಿದ್ದಾರೆ. ಉದಯ್.ಕೆ.ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಭಾರತದ ಜನಪ್ರಿಯ ಫೈಟ್ ಮಾಸ್ಟರ್‌ಗಳಾದ ರಾಮ್-ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡಲಿದ್ದಾರೆ. ಈ ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆ ಆಗಿಲ್ಲ. ಎರಡನೇ ಬಾರಿಗೆ ಒಂದಾದ ಧ್ರುವ ಸರ್ಜಾ-ಎ.ಪಿ.ಅರ್ಜುನ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಚೊಚ್ಚಲ ಚಿತ್ರ 'ಅದ್ಧೂರಿ'ಗೆ ಆಕ್ಷನ್ ಕಟ್ ಹೇಳಿದ್ದವರು ಎ.ಪಿ.ಅರ್ಜುನ್. 'ಅದ್ಧೂರಿ' ಮೂಲಕ ಧ್ರುವ ಸರ್ಜಾಗೆ ಬಿಗ್ ಬ್ರೇಕ್ ಕೊಟ್ಟಿದ್ದು ಎ.ಪಿ.ಅರ್ಜುನ್. 'ಅದ್ಧೂರಿ' ಅಂತಹ ಹಿಟ್ ಸಿನಿಮಾ ಕೊಟ್ಟಿದ್ದ ಇವರಿಬ್ಬರು ಈಗ 'ಮಾರ್ಟಿನ್' ಚಿತ್ರಕ್ಕಾಗಿ ಒಂದಾಗಿದ್ದಾರೆ. ಹೀಗಾಗಿ, 'ಮಾರ್ಟಿನ್' ಬಗ್ಗೆ ಸಿನಿ ಪ್ರಿಯರಿಗೆ ಕುತೂಹಲ ಡಬಲ್ ಆಗಿದೆ.