ನಗರದಲ್ಲಿ ಬತ್ತಿವೆ 644 ಕೊಳವೆ ಬಾವಿಗಳು; ಬೇಸಿಗೆಗೆ ಕಾಡಲಿದೆ ನೀರಿನ ಭೀತಿ

ಬೆಂಗಳೂರಿನ ಜಲಮಂಡಳಿಯು 10,500 ಬೋರ್ ವೆಲ್ ಗಳನ್ನು ನಿರ್ವಹಣೆ ಮಾಡುತ್ತಿದೆ. ಅವುಗಳಲ್ಲಿ 644 ಬೋರ್ ವೆಲ್ ಗಳು ಬತ್ತಿ ಹೋಗಿವೆ. ಬೇಸಿಗೆ ಸಮೀಪಿಸುವ ಹೊತ್ತಿಗೆ ಮತ್ತಷ್ಟು ಬೋರ್ ವೆಲ್ ಗಳು ಬತ್ತಿ ಹೋಗಬಹುದಾಗಿದ್ದು, ಬೇಸಿಗೆಯಲ್ಲಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಬಹುದು. ಅಂಥ ಪರಿಸ್ಥಿತಿ ಬಂದರೆ, ಕುಡಿಯಲು ನೀರಿಲ್ಲದ ಪ್ರಾಂತ್ಯಗಳಿಗೆ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಬೇಕಾಗುತ್ತದೆ. ಅಂಥ ಪರಿಸ್ಥಿತಿಯಲ್ಲಿ 200 ಟ್ಯಾಂಕರ್ ಗಳಾದರೂ ಬೇಕಾಗುತ್ತದೆ. ಆದರೆ, ಜಲಮಂಡಳಿ ಬಳಿ ಇರುವುದು ಕೇವಲ 65 ಟ್ಯಾಂಕರ್ ಮಾತ್ರ.