ಎಸ್‌ಸಿ, ಎಸ್‌ಟಿಯವರಷ್ಟೇ ಪಾಯಖಾನೆ ತೊಳೆಯಬೇಕಾ? ಪ್ರಸನ್ನಾನಂದಪುರಿ ಶ್ರೀ ಪ್ರಶ್ನೆ

ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಪಂಗಡಗಳ ಜನರು ಮಾತ್ರವೇ ಪಾಯಖಾನೆ ತೊಳೆಯಬೇಕೇ? ಅದರಿಂದ ಮೇಲ್ವರ್ಗದವರು ಹೊರತಾಗಿದ್ದಾರೆಯೇ? ಅದನ್ನು ಕೆಲಸವೆಂದು ಪರಿಗಣಿಸಬೇಕು, ಮೇಲ್ವರ್ಗದವರೂ ಪಾಯಖಾನೆ ತೊಳೆಯಬೇಕು ಎಂದು ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.

ಎಸ್‌ಸಿ, ಎಸ್‌ಟಿಯವರಷ್ಟೇ ಪಾಯಖಾನೆ ತೊಳೆಯಬೇಕಾ? ಪ್ರಸನ್ನಾನಂದಪುರಿ ಶ್ರೀ ಪ್ರಶ್ನೆ
Linkup
ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಷ್ಟೇ ಪಾಯಖಾನೆ ತೊಳೆಯಬೇಕಾ? ಹೀಗೆಂದು ವಾಲ್ಮೀಕಿ ಪೀಠದ ಪ್ರಶ್ನೆ ಮಾಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಸ್‌ಸಿ ಎಸ್‌ಟಿಯವರಷ್ಟೇ ಪಾಯಖಾನೆ ತೊಳೆಯಬೇಕಾ? ಮೇಲ್ವರ್ಗ ಸಮುದಾಯ ಇದರಿಂದ ಹೊರತಾ? ಪಾಯಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು. ಜಾತಿಯಿರುವವರೆಗೂ ನೀಡಬೇಕು ಎಂದು ಆಗ್ರಹಿಸಿದರು. ‌ ಮೇಲ್ವರ್ಗದವರು ಕೂಡ ಪಾಯಖಾನೆ ತೊಳೆಯುವುದನ್ನು ಕೆಲಸವೆಂದು ಪರಿಗಣಿಸಬೇಕು. ಹಾಗಾದಾಗ ಮಾತ್ರ ಶೋಷಣೆ ನಿಲ್ಲುತ್ತದೆ ಎಂದು ಹೇಳಿದರು. 30 ವರ್ಷದಿಂದಲೂ ಮಕ್ಕಳು ಶಿಕ್ಷಣದಿಂದ ಹೊರಗುಳಿಯುತ್ತಿದ್ದಾರೆ. ಮುಖ್ಯವಾಗಿ ಪರಿಶಿಷ್ಟರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಹಿಂದಿನ ಸರ್ಕಾರ ಎಸ್ಸಿಪಿ, ಟಿಎಸ್ಪಿ ಜಾರಿಗೆ ತಂದಿತ್ತು. ಈಗ ನಮಗೆ ಮೀಸಲಾತಿ‌ ಹೆಚ್ಚಳವಾಗಬೇಕು. ನಮ್ಮ ಮಕ್ಕಳಿಗೆ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿ ಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳಬೇಕು ಎಂದು ಆಗ್ರಹಿಸಿದರು. ಮೀಸಲಾತಿ ಹೆಚ್ಚಳದ ಬಗ್ಗೆ ಸರ್ಕಾರ ಆಯೋಗ ರಚಿಸಿದೆ. ಆ ವಿಚಾರ ಉಪ ಸಮಿತಿಗೆ ಬಂದಾಗ ನಮಗೆ ನೋವಾಯ್ತು. ಈಗ ಉನ್ನತ ಮಟ್ಟದ ಸಮಿತಿಗೆ ಹೋಗಿದೆ. ಸಿಎಂ ಅವರ ಮೇಲೆ ನಮಗೆ ನಂಬಿಕೆಯಿದೆ ಎಂದರು. ಆರ್ಥಿಕವಾಗಿ ಸಬಲರಾದವರು ಕೂಡ ಮೀಸಲಾತಿಗೆ ಪ್ರಯತ್ನಿಸುತ್ತಿದ್ದಾರೆ. ಆದರೆ ನಾವು ನ್ಯಾಯಯುತವಾಗಿ ಕೇಳುತ್ತಿದ್ದೇವೆ. ನಮ್ಮ‌ ಬೇಡಿಕೆಯನ್ನು ನೀವು ಈಡೇರಿಸಬೇಕು ಎಂದು ಮುಖ್ಯಮಂತ್ರಿ ಅವರಿಗೆ ಪ್ರಸನ್ನಾನಂದಪುರಿ ಶ್ರೀ ಒತ್ತಾಯಿಸಿದರು. ಎಸ್.ಟಿ ಮೀಸಲಾತಿ ಬೇಡಿಕೆ ವಿಚಾರವಾಗಿ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ ನಿಟ್ಟಿನಲ್ಲಿ ಸಲಹೆ ಪಡೆಯಲು ಕಾನೂನು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಎಲ್ಲ ಸಮುದಾಯದ ಆಶೋತ್ತರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಮೀಸಲಾತಿ ಮಿತಿ ಶೇಕಡ 50 ಇದ್ದು ಎಲ್ಲ ಸಮುದಾಯದಿಂದ ಬೇಡಿಕೆ ಹೆಚ್ಚಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಶೇ 10 ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದಾರೆ. ಮೀಸಲಾತಿ ಹೆಚ್ಚಳ ವಿಚಾರವಾಗಿ ಪುನರ್ ಚರ್ಚೆ ಹಾಗೂ ತೀರ್ಮಾನ ಆಗಬೇಕಿದೆ. ಮೀಸಲಾತಿ ಬೇಡಿಕೆ ಹಿನ್ನೆಲೆಯಲ್ಲಿ ಕಾನೂನು ಚೌಕಟ್ಟಿನಲ್ಲಿ ಬಗೆಹರಿಸುವ ಬಗ್ಗೆ ಕಾನೂನು ತಜ್ಞರ ಸಮಿತಿ ರಚನೆ ಮಾಡಲಾಗಿದೆ. ಎಲ್ಲ ಸಮುದಾಯದ ಆಶೋತ್ತರಕ್ಕೆ ನ್ಯಾಯ ಒದಗಿಸುವ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಪ್ರಸನ್ನಾನಂದಪುರಿ ಶ್ರೀಗಳ ಸಹಕಾರ ಬೇಕಿದೆ ಎಂದು ಬೊಮ್ಮಾಯಿ ಮನವಿ ಮಾಡಿದರು. ಎಸ್ ಟಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯದ ಬೇಡಿಕೆ ಇಟ್ಟಿದ್ದರು. ಈ ನಿಟ್ಟಿನಲ್ಲಿ ಪ್ರತ್ಯೇಕ ಸಚಿವಾಲಯ ಘೋಷಣೆಯನ್ನು ನಾನು ಸಿಎಂ ಆದ ಬಳಿಕ ಮಾಡಿದೆ. ಎಸ್ ಟಿ ಎಸ್ ಸಿ ಸಮುದಾಯಕ್ಕೆ‌ ಅತೀ ಹೆಚ್ಚು ಜಮೀನು ನೀಡಲು‌ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಎಸ್ ಟಿ, ಎಸ್ ಸಿ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.‌