ಮತ್ತೊಮ್ಮೆ ಅತ್ಯಂತ ಶ್ರೀಮಂತ ಪಕ್ಷವಾದ ಬಿಜೆಪಿ! ಭಾಜಪದ ಸ್ವತ್ತಿನ ಮೌಲ್ಯ ಬರೋಬ್ಬರಿ ₹4,847 ಕೋಟಿ!

2019-20ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು ಘೋಷಿಸಿರುವ ಆಸ್ತಿಗಳ ವಿವರಗಳನ್ನು ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಿದ್ಧಪಡಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ. ಅತ್ಯಂತ ಶ್ರೀಮಂತ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನವನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಡೆದುಕೊಂಡಿದ್ದು, 698.33 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಹೊಂದಿದೆ. ಸುಮಾರು 588 ಕೋಟಿ ರೂ. ಮೌಲ್ಯದ ಆಸ್ತಿಗಳ ಒಡೆತನದ ಮೂಲಕ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ.

ಮತ್ತೊಮ್ಮೆ ಅತ್ಯಂತ ಶ್ರೀಮಂತ ಪಕ್ಷವಾದ ಬಿಜೆಪಿ! ಭಾಜಪದ ಸ್ವತ್ತಿನ ಮೌಲ್ಯ ಬರೋಬ್ಬರಿ ₹4,847 ಕೋಟಿ!
Linkup
ಹೊಸದಿಲ್ಲಿ: ದೇಶದ ರಾಜಕೀಯ ಪಕ್ಷಗಳ ಪೈಕಿ 4,847.78 ಕೋಟಿ ರೂ. ಮೌಲ್ಯದ ಆಸ್ತಿಗಳನ್ನು ಹೊಂದುವ ಮೂಲಕ ಬಿಜೆಪಿಯು ಅತ್ಯಂತ ಶ್ರೀಮಂತ ಪಕ್ಷವಾಗಿದೆ. 2019-20ನೇ ಸಾಲಿನಲ್ಲಿ ರಾಜಕೀಯ ಪಕ್ಷಗಳು ಘೋಷಿಸಿರುವ ಆಸ್ತಿಗಳ ವಿವರಗಳನ್ನು ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರೆಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಿದ್ಧಪಡಿಸಿರುವ ವರದಿಯಲ್ಲಿ ಇದು ಬಹಿರಂಗವಾಗಿದೆ. ಅತ್ಯಂತ ಶ್ರೀಮಂತ ರಾಜಕೀಯ ಪಕ್ಷಗಳ ಪೈಕಿ ಎರಡನೇ ಸ್ಥಾನವನ್ನು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಪಡೆದುಕೊಂಡಿದ್ದು, 698.33 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ಹೊಂದಿದೆ. ಸುಮಾರು 588 ಕೋಟಿ ರೂ. ಮೌಲ್ಯದ ಆಸ್ತಿಗಳ ಒಡೆತನದ ಮೂಲಕ ಕಾಂಗ್ರೆಸ್‌ ಮೂರನೇ ಸ್ಥಾನದಲ್ಲಿದೆ. ಒಟ್ಟಾರೆಯಾಗಿ ಏಳು ರಾಷ್ಟ್ರೀಯ ಪಕ್ಷಗಳು ಮತ್ತು 44 ಪ್ರಾದೇಶಿಕ ಪಕ್ಷಗಳು 2019-20ನೇ ಸಾಲಿನಲ್ಲಿ ಘೋಷಿಸಿಕೊಂಡ ಒಟ್ಟಾರೆ ಸ್ವತ್ತಿನ ಮೌಲ್ಯ 9117.95 ಕೋಟಿ ರೂ. ಆಗಿದೆ. ಆ ಪೈಕಿ 6,988.57 ಕೋಟಿ ರೂ. ರಾಷ್ಟ್ರೀಯ ಪಕ್ಷಗಳ ಬಳಿ ಇದ್ದರೆ, ಪ್ರಾದೇಶಿಕ ಪಕ್ಷಗಳ ಬಳಿ 2,129.-38 ಕೋಟಿ ರೂ. ಮೌಲ್ಯದ ಸ್ವತ್ತು ಇದೆ. ಎಸ್‌ಪಿಯೇ ಕುಬೇರ ಪಕ್ಷ: ದೇಶದಲ್ಲಿ ಸಕ್ರಿಯವಾಗಿರುವ 44 ಪ್ರಾದೇಶಿಕ ಪಕ್ಷಗಳ ಪೈಕಿ ಅತಿಹೆಚ್ಚು ಮೌಲ್ಯದ ಆಸ್ತಿಗಳ ಒಡೆತನವನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಹೊಂದಿದೆ. ಸದ್ಯ ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿರುವ ಎಸ್‌ಪಿ ತೆಕ್ಕೆಯಲ್ಲಿರುವುದು 563.47 ಕೋಟಿ ರೂ. ಮೊತ್ತದ ಸ್ವತ್ತುಗಳು, ತೆಲಂಗಾಣದಲ್ಲಿ ಆಡಳಿತದಲ್ಲಿರುವ ಟಿಆರ್‌ಎಸ್‌ ಹೊಂದಿರುವ ಸ್ವತ್ತುಗಳ ಮೌಲ್ಯ 301.47 ಕೋಟಿ ರೂ. ಮತ್ತು ದಿ. ಜಯಲಲಿತಾ ಮುನ್ನಡೆಸುತ್ತಿದ್ದ ಎಐಎಡಿಎಂಕೆ ಪಕ್ಷದ ಸ್ವತ್ತು 267.61 ಕೋಟಿ ರೂ. ನಷ್ಟಿದೆ. ಪ್ರಾದೇಶಿಕ ಪಕ್ಷಗಳ ಸ್ವತ್ತುಗಳಲ್ಲಿ ಬಹುಪಾಲು ನಿಶ್ಚಿತ ಠೇವಣಿ ರೂಪದಲ್ಲಿರುವುದು ಗಮನಾರ್ಹ. ಒಟ್ಟಾರೆ 1,639.51 ಕೋಟಿ ರೂ. ನಿಶ್ಚಿತ ಠೇವಣಿಯನ್ನು ಪಕ್ಷಗಳು ಹೊಂದಿವೆ. ಆ ಪೈಕಿ ಎಸ್‌ಪಿ ಬಳಿ ಅತಿಹೆಚ್ಚು , ಅಂದರೆ 434.19 ಕೋಟಿ ರೂ. ಎಫ್‌ಡಿ ಇದೆ. ಪಕ್ಷಗಳ ಒಟ್ಟಾರೆ ಆಸ್ತಿಯು ಪಕ್ಷಗಳು ಹೊಂದಿರುವ ನಗದು, ನಿಶ್ಚಿತ ಠೇವಣಿ, ಸ್ಥಿರ ಆಸ್ತಿಗಳನ್ನು ಒಳಗೊಂಡಿದೆ.