ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ 12,273 ಕೋಟಿ ರೂ. ಲಾಭ, ಕಳೆದ ವರ್ಷಕ್ಕಿಂತ ಶೇ. 7ರಷ್ಟು ಇಳಿಕೆ

2021-22ರ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿ. 12,273 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ಲಾಭದಲ್ಲಿ ಶೇ. 7.2ರಷ್ಟು ಕುಸಿತ ದಾಖಲಾಗಿದೆ.

ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್‌ಗೆ 12,273 ಕೋಟಿ ರೂ. ಲಾಭ, ಕಳೆದ ವರ್ಷಕ್ಕಿಂತ ಶೇ. 7ರಷ್ಟು ಇಳಿಕೆ
Linkup
ಮುಂಬಯಿ: 2021-22ರ ಮೊದಲ ತ್ರೈಮಾಸಿಕದಲ್ಲಿ ನೇತೃತ್ವದ ಲಿ. 12,273 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ಲಾಭ ಶೇ. 7.2ರಷ್ಟು ಕುಸಿದಿದೆ. ಹಿಂದಿನ ವರ್ಷ ಕಂಪನಿ 13,233 ಕೋಟಿ ರೂ. ಲಾಭ ಗಳಿಸಿತ್ತು. ಆದರೆ ಈ ಅವಧಿಯಲ್ಲಿ ಕಂಪನಿಯ ಆದಾಯ ಭಾರಿ ಏರಿಕೆಯಾಗಿದ್ದು 1.44 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ಕಂಪನಿಯ ಆದಾಯ ಕೇವಲ 91,238 ಕೋಟಿ ರೂ. ಆಗಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಂಪನಿ ಬರೋಬ್ಬರಿ ಶೇ. 58ರಷ್ಟು ಹೆಚ್ಚು ಲಾಭ ಗಳಿಸಿದೆ. ತೆರಿಗೆ, ಇತರ ಹೊಣೆಗಾರಿಕೆಗಳ ಮೊದಲು ಕಂಪನಿ 27,550 ಕೋಟಿ ರೂ. ಲಾಭ ಗಳಿಸಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಲಾಭ ಸಾಂಪ್ರಾದಾಯಿಕ ತೈಲ ಸಂಸ್ಕರಣೆ, ಪೆಟ್ರೋಕೆಮಿಕಲ್ಸ್‌ ಮತ್ತು ಗ್ಯಾಸ್‌ ಉದ್ಯಮದಿಂದ ಬಂದಿದೆ. "ಕೊರೊನಾ ಎರಡನೇ ಅಲೆಯ ಸವಾಲಿನ ನಡುವೆಯೂ ನಮ್ಮ ಕಂಪನಿ ದೃಢವಾದ ಬೆಳವಣಿಗೆಯನ್ನು ನೀಡಿರುವುದು ನನಗೆ ಸಂತೋಷವಾಗಿದೆ," ಎಂದು ಕಂಪನಿ ಅಧ್ಯಕ್ಷ ಮುಕೇಶ್‌ ಅಂಬಾನಿ ಪ್ರತಿಕ್ರಿಯಿಸಿದ್ದಾರೆ. ಇನ್ನು ರಿಲಯನ್ಸ್‌ನ ಅಂಗ ಸಂಸ್ಥೆ ಜಿಯೋ ಇದೇ ಅವಧಿಯಲ್ಲಿ 3,651 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಶೇ. 45 ರಷ್ಟು ಹೆಚ್ಚಾಗಿದೆ. ಈ ಹಿಂದಿನ ವರ್ಷ ಜಿಯೋ 2,519 ಕೋಟಿ ರೂ. ಲಾಭ ಗಳಿಸಿತ್ತು. ಪ್ರತಿ ಗ್ರಾಹಕನಿಂದ ಕಂಪನಿ ಗಳಿಸುವ ಆದಾಯ 138.4 ರೂ. ಆಗಿದೆ. ಇದೇ ಅವಧಿಯಲ್ಲಿ ರಿಲಯನ್ಸ್‌ ರಿಟೇಲ್‌ ಭರ್ಜರಿ 38,547 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಚಿಲ್ಲರೆ ವ್ಯಾಪಾರ ವಹಿವಾಟಿನ ಆದಾಯ ಶೇ. 21.9ರಷ್ಟು ಹೆಚ್ಚಾಗಿದೆ.