ದಂಡದ ಹೆಸರಲ್ಲಿ ಪೊಲೀಸರಿಂದ ವಸೂಲಿ ಭರ್ಜರಿ? ಜಪ್ತಿ ವಾಹನ ಬಿಡಿಸಲು ಹೋದ ಸವಾರರ ಜೇಬಿಗೆ ಕತ್ತರಿ

ಕೆಲವರು ಅನವಶ್ಯಕವಾಗಿ ರಸ್ತೆಗಿಳಿದಿರಬಹುದು. ಆದರೆ ತುರ್ತು ಅನಿವಾರ್ಯತೆಯಿಂದ ರಸ್ತೆಗಿಳಿದವರ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಹಲವರಿಗೆ ಆ ಬಗ್ಗೆ ದಾಖಲೆ ಹಾಜರುಪಡಿಸಲು ಸಾಧ್ಯವಾಗಿಲ್ಲ.

ದಂಡದ ಹೆಸರಲ್ಲಿ ಪೊಲೀಸರಿಂದ ವಸೂಲಿ ಭರ್ಜರಿ? ಜಪ್ತಿ ವಾಹನ ಬಿಡಿಸಲು ಹೋದ ಸವಾರರ ಜೇಬಿಗೆ ಕತ್ತರಿ
Linkup
: ಲಾಕ್‌ಡೌನ್‌ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಬಿಡಿಸಲು ಹೋದ ಸವಾರರಿಂದ ದಂಡ ಕಟ್ಟಿಸಿಕೊಳ್ಳುವ ಜತೆಗೆ ಪೊಲೀಸರು ದುಬಾರಿ ಲಂಚಕ್ಕೆ ಬೇಡಿಕೆ ಇಡುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿವೆ. ಲಾಕ್‌ಡೌನ್‌ ಅವಧಿಯಲ್ಲಿ ಮುಟ್ಟುಗೋಲು ಹಾಕಿಕೊಂಡ ವಾಹನಗಳ ಸವಾರರ ವಿರುದ್ಧ ಎನ್‌ಡಿಎಂಎ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ) ಅಡಿ ಕೇಸು ದಾಖಲಿಸಲಾಗುತ್ತಿದೆ. ನ್ಯಾಯಾಲಯದ ನಿರ್ದೇಶನದ ಅನ್ವಯ, ದಂಡ ಕಟ್ಟಿಸಿಕೊಂಡು, ಮುಚ್ಚಳಿಕೆ ಬರೆಸಿಕೊಂಡು ಬಿಡುಗಡೆ ಮಾಡಲಾಗುತ್ತಿದೆ. ದ್ವಿಚಕ್ರ ವಾಹನಕ್ಕೆ 500 ರೂ, ನಾಲ್ಕು ಚಕ್ರ ವಾಹನಕ್ಕೆ 1,000 ರೂ. ದಂಡ ನಿಗದಿಪಡಿಸಲಾಗಿದೆ. ಜತೆಗೆ 50 ರೂ. ಹಾಗೂ 100 ರೂ.ಗಳ ಬಾಂಡ್‌ ಪೇಪರ್‌ ಕೂಡ ತೆಗೆದುಕೊಂಡು ಹೋಗಬೇಕಿದೆ. ಹೆಚ್ಚಿನ ಠಾಣೆಗಳಲ್ಲಿ ಬಿಡುಗಡೆಗೆ ಪೊಲೀಸರು 'ಎಕ್ಸ್‌ಟ್ರಾ' ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಕನಿಷ್ಠ 100 ರೂ.ನಿಂದ ಹಿಡಿದು 2000 ರೂ.ವರೆಗೂ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ವಾಹನ ಬಿಡಿಸಿಕೊಳ್ಳಲು ಪರದಾಟ: ಮುಟ್ಟುಗೋಲು ಹಾಕಿದ ವಾಹನ ಬಿಡಿಸಿಕೊಳ್ಳಲು ನಿತ್ಯವೂ ಠಾಣೆಗಳ ಮುಂದೆ ಸರತಿಯ ಸಾಲು ಕಂಡು ಬರುತ್ತಿದೆ. ದಂಡ ಕಟ್ಟಲು ರೆಡಿ ಇದ್ದರೂ ದಿನವಿಡೀ ಅಲೆದಾಡಿಸುತ್ತಿರುವ ದೂರುಗಳಿವೆ. ಹೆಚ್ಚು ಹಣ ಕೊಟ್ಟರೆ ಬಿಡುಗಡೆ ಸುಲಭವಾಗುತ್ತಿದೆ. ಎಲ್ಲರೂ ಅನವಶ್ಯಕವಾಗಿ ರಸ್ತೆಗಿಳಿದಿಲ್ಲ: ಕೆಲವರು ಅನವಶ್ಯಕವಾಗಿ ರಸ್ತೆಗಿಳಿದಿರಬಹುದು. ಆದರೆ ತುರ್ತು ಅನಿವಾರ್ಯತೆಯಿಂದ ರಸ್ತೆಗಿಳಿದವರ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಹಲವರಿಗೆ ಆ ಬಗ್ಗೆ ದಾಖಲೆ ಹಾಜರುಪಡಿಸಲು ಸಾಧ್ಯವಾಗಿಲ್ಲ. ಅಂತಹವರು ಕೂಡ ಇದೀಗ ವಾಹನ ಬಿಡಿಸಿಕೊಳ್ಳಲು ಪರದಾಡುವಂತಾಗಿದೆ. ತಂದೆಯನ್ನು ಕೆಲಸಕ್ಕೆ ಬಿಡಲು ತೆರಳಿದ್ದಾಗ ವಾಹನ : 'ತಂದೆಯನ್ನು ಕೆಲಸಕ್ಕೆ ಬಿಡಲು ಬೈಕ್‌ನಲ್ಲಿ ತೆರಳಿದ್ದೆ. ಆಗ ಅಡ್ಡಗಟ್ಟಿದ ಪೊಲೀಸರು ನನ್ನ ಬೈಕ್‌ ವಶಪಡಿಸಿಕೊಂಡರು. ತಂದೆಯನ್ನು ಬಿಡಲು ಹೋಗಿದ್ದೆ ಎಂಬುದಕ್ಕೆ ನನ್ನಲ್ಲಿ ದಾಖಲೆ ಇರಲಿಲ್ಲ' ಎಂದು ಬೇಗೂರು ಠಾಣೆಗೆ ಬೈಕ್‌ ಬಿಡಿಸಿಕೊಳ್ಳಲು ಬಂದಿದ್ದ ಕಾಳೇನ ಅಗ್ರಹಾರದ ನಿವಾಸಿ ತಿಳಿಸಿದರು. ಹಳೆ ಪ್ರಕರಣದ ದಂಡವೂ ಕಟ್ಟಬೇಕು: ಲಾಕ್‌ಡೌನ್‌ ಅವಧಿಯಲ್ಲಿನಿಯಮ ಮೀರಿದ್ದಕ್ಕೆ ದಂಡ ಕಟ್ಟುವ ಜತೆಗೆ ಹಳೆಯ ಉಲ್ಲಂಘನೆ ಪ್ರಕರಣಗಳಿಗೂ ದಂಡ ಕಟ್ಟುವುದು ಕಡ್ಡಾಯವಾಗಿದೆ.