ತೆಲಂಣಗಾಣದಲ್ಲಿ ಹೆಲಿಕಾಪ್ಟರ್‌ ಪತನ : ಟ್ರೈನಿ ಪೈಲಟ್‌ ಮಹಿಮಾ ದಾರುಣ ಸಾವು

ಆಕೆ ನೂರಾರು ಕನಸು ಕಂಡು ದೇಶದ ವಾಯುಸೇನೆ ಸೇರಿಕೊಂಡಿದ್ದಳು. ಹೆಲಿಕಾಪ್ಟರ್ ಹಾರಿಸುತ್ತ ತರಬೇತಿ ಪಡೆಯುತ್ತಿದ್ದಳು ಆದರೆ ದುರಾದೃಷ್ಟವಶಾತ್ ಆಕೆ ಹಾರಿಸುತ್ತಿದ್ದ ಹೆಲಿಕಾಪ್ಟರ್‌ ಪತನಗೊಂಡು ಜೀವ ಬಿಟ್ಟಿದ್ದಾಳೆ. ಏನಿದು ಘಟನೆ? ಯಾರಿಕೆ ? ಇಲ್ಲಿದೆ ಈ ಬಗ್ಗೆ ಮಾಹಿತಿ.

ತೆಲಂಣಗಾಣದಲ್ಲಿ ಹೆಲಿಕಾಪ್ಟರ್‌ ಪತನ : ಟ್ರೈನಿ ಪೈಲಟ್‌ ಮಹಿಮಾ ದಾರುಣ ಸಾವು
Linkup
ಹೈದರಾಬಾದ್‌: ಖಾಸಗಿ ವಿಮಾನಯಾನ ಅಕಾಡೆಮಿಯ ಹೆಲಿಕಾಪ್ಟರ್‌ ಪತನವಾಗಿ ಮೃತಪಟ್ಟಿರುವ ಘಟನೆ ತೆಲಂಣಗಾಣದ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ. ಆಂಧ್ರಪ್ರದೇಶ ಕಡೆಯಿಂದ ಬಂದ ನತದೃಷ್ಟ ಹೆಲಿಕಾಪ್ಟರ್‌, ನಲಗೊಂಡ ಜಿಲ್ಲೆಯ ಹಳ್ಳಿ ತುಂಗತುರ್ತಿಯ ಹೊರಭಾಗದಲ್ಲಿ ಬೆಳಗ್ಗೆ 10.25ರ ಸುಮಾರಿಗೆ ಪತನಗೊಂಡಿತು. ಹೆಲಿಕಾಪ್ಟರ್‌ನಲ್ಲಿದ್ದ ಟ್ರೈನಿ ಪೈಲಟ್‌ ಮಹಿಮಾ (28) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಾಪ್ಟರ್‌ನಲ್ಲಿ ಅವರೊಬ್ಬರೇ ಇದ್ದರು. ತಮಿಳುನಾಡು ಮೂಲದ ಅವರು ನಾಲ್ಕು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದರು. ಘಟನೆಗೆ ಆಘಾತ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಗದ್ದೆಯಲ್ಲಿ ಪತನಗೊಂಡ ವಿಮಾನ! ನಾಗರಾಜು ಸಾಗರ್ ಕಡೆಯಿಂದ ಹಾರಿ ಬರುತ್ತಿದ್ದ ವಿಮಾನ,ಪೆದ್ದವೂರ ಮಂಡಲದ ತುಂಗತುರ್ಥಿ ಗ್ರಾಮದ ಗದ್ದೆಯಲ್ಲಿ ಪತನಗೊಂಡು ಸ್ಫೋಟಗೊಂಡಿತು. "ನಾವು ಸ್ಥಳಕ್ಕೆ ಧಾವಿಸಿದಾಗ, ಅವುಗಳಲ್ಲಿ ಮೃತದೇಹಗಳನ್ನು ನೋಡಿದ್ದೇವೆ," ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ರೈತರು ಕೆಲಸ ಮಾಡುತ್ತಿದ್ದ ವೇಳೆಯಲ್ಲೇ ಘಟನೆ ನಡೆದಿದ್ದು, ಸ್ಥಳಕ್ಕೆ ರೈತರು ಧಾವಿಸಿದ್ದರು. ರೈತರೇ ತಕ್ಷಣ ಬೆಂಕಿ ನಂದಿಸಲು ಮತ್ತು ವಿಮಾನದಲ್ಲಿದ್ದ ಪೈಲಟ್‌ಗಳನ್ನು ರಕ್ಷಿಸಲು ಪ್ರಯತ್ನಿಸಿದರು.