ಇನ್ಮುಂದೆ ಖಾಸಗಿ ವಾಹನದಲ್ಲಿ ಸಂಚರಿಸುವವರು ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ; ದಿಲ್ಲಿ ಸರ್ಕಾರ

ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿ­ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರ­ವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ, ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯವಾ­ಗಿತ್ತು. ರಸ್ತೆ ಸಹ ಸಾರ್ವಜನಿಕ ಪ್ರದೇಶ ಎಂದು ವ್ಯಾಖ್ಯಾನಿಸಿ ಈ ನಿಯಮ ಜಾರಿಗೆ ತರಲಾ­ಗಿತ್ತು. ಈಗ ಈ ನಿಯಮ ಕೈ ಬಿಟ್ಟರೂ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕೆಂಬ ನಿಯಮ ಮುಂದುವರಿಯಲಿದೆ. ಸಾರ್ವ­ಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ.

ಇನ್ಮುಂದೆ ಖಾಸಗಿ ವಾಹನದಲ್ಲಿ ಸಂಚರಿಸುವವರು ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ; ದಿಲ್ಲಿ ಸರ್ಕಾರ
Linkup
ಹೊಸದಿಲ್ಲಿ: ಖಾಸಗಿ ವಾಹ­ನದಲ್ಲಿ ಪ್ರಯಾಣ ಮಾಡುವಾಗ ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬ ನಿಯ­ಮವನ್ನು ದಿಲ್ಲಿ ಸರಕಾರ ರದ್ದುಪಡಿಸಿದೆ. ಸೋಮವಾರದಿಂದ ಈ ನಿಯಮ ಜಾರಿಗೆ ಬರಲಿದ್ದು, ಅದೇ ದಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧಾರಣೆ ಹೊರತು­ಪಡಿಸಿ ಉಳಿದೆಲ್ಲಾ ನಿರ್ಬಂಧಗಳನ್ನೂ ಸರಕಾರ ತೆಗೆದು ಹಾಕಲಿದೆ. ಕೊರೊನಾ ಸೋಂಕಿನ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿ­ರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅರ­ವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಹಿಂದೆ, ಖಾಸಗಿ ಕಾರಿನಲ್ಲಿ ಏಕಾಂಗಿಯಾಗಿ ಪ್ರಯಾಣಿಸುವಾಗಲೂ ಮಾಸ್ಕ್‌ ಧರಿಸುವುದು ಕಡ್ಡಾಯವಾ­ಗಿತ್ತು. ರಸ್ತೆ ಸಹ ಸಾರ್ವಜನಿಕ ಪ್ರದೇಶ ಎಂದು ವ್ಯಾಖ್ಯಾನಿಸಿ ಈ ನಿಯಮ ಜಾರಿಗೆ ತರಲಾ­ಗಿತ್ತು. ಈಗ ಈ ನಿಯಮ ಕೈ ಬಿಟ್ಟರೂ, ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕೆಂಬ ನಿಯಮ ಮುಂದುವರಿಯಲಿದೆ. ಸಾರ್ವ­ಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿದ್ದರೆ 500 ರೂ. ದಂಡ ವಿಧಿಸಲಾಗುತ್ತದೆ. ಮತ್ತಷ್ಟು ಇಳಿಕೆ: ಶನಿವಾರ ದೇಶದಲ್ಲಿ ಕೊರೊನಾ ಸೋಂಕಿನ 11,499 ಹೊಸ ಪ್ರಕರಣಗಳು ವರದಿಯಾಗಿದ್ದು, 255 ಸೋಂಕಿತರು ಮೃತಪಟ್ಟಿದ್ದಾರೆ. ಕ್ಯಾಮೆರಾ ಕಣ್ತಪ್ಪಿಸಲು ನಂಬರ್‌ಪ್ಲೇಟ್‌ಗೆ ಮಾಸ್ಕ್‌ಕುಂದಾಣ: ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವ ಬದಲಿಗೆ ಮೊಬೈಲ್‌ ಕ್ಯಾಮೆರಾದಲ್ಲಿ ವಾಹನದ ನಂಬರ್‌ ಸೆರೆ ಹಿಡಿದು, ದಂಡ ಶುಲ್ಕ ವಿಧಿಸುತ್ತಿದ್ದು, ಕೆಲ ವಾಹನ ಸವಾರರು ಮುಖಕ್ಕೆ ಹಾಕುವ ಮಾಸ್ಕ್‌ನ್ನು ನಂಬರ್‌ ಪ್ಲೇಟ್‌ಗೆ ಹಾಕಿಕೊಂಡು ಓಡಾಡುತ್ತಿರುವ ದೃಶ್ಯ ಕಂಡುಬಂದಿದೆ. ನಂಬರ್‌ ಪ್ಲೇಟ್‌ಗೆ ಮಾಸ್ಕ್‌: ವಾಹನದ ಹಿಂಬದಿ ನಂಬರ್‌ ಪ್ಲೇಟ್‌ಗೆ ಮಾಸ್ಕ್‌, ಮುಂದೇಕಿಲ್ಲ ಎಂದು ಪ್ರಶ್ನಿಸಿದರೆ, ‘ರಸ್ತೆಯಲ್ಲಿ ವಾಹನದಲ್ಲಿ ಸಂಚರಿಸುವ ವೇಳೆ ನಮಗೆ ತಿಳಿಯದೆಯೇ ಹಿಂಬದಿಯಿಂದ ಪೊಲೀಸರು ತಮ್ಮ ವಾಹನದ ನಂಬರ್‌ ಪ್ಲೇಟ್‌ನ್ನು ಮೊಬೈಲ್‌ ಮೂಲಕ ಸೆರೆ ಹಿಡಿದು ಯದ್ವತದ್ವ ದಂಡ ಹಾಕುತ್ತಿದ್ದಾರೆ. ವಾಹನದ ಡೀಟೈಲ್ಸ್‌ ಚೆಕ್‌ ಮಾಡಿದರೆ ಹೆಲ್ಮೆಟ್‌ ಧರಿಸಿಲ್ಲ, ನಂಬರ್‌ ಸರಿಯಾಗಿ ಗೋಚರಿಸಿಲ್ಲ, ಸಿಗ್ನಲ್‌ ಜಂಪ್‌, ತ್ರಿಬಲ್‌ ರೈಡ್‌ ಹೀಗೆ ಹಲವಾರು ರೀತಿಯಲ್ಲಿ ದಂಡ ಕಟ್ಟಿದ್ದೇವೆ. ಒಂದೇ ಬಾರಿಗೆ ಮೂರ್ನಾಲ್ಕು ಸಾವಿರ ದಂಡ ಕಟ್ಟುವುದಾದರೂ ಹೇಗೆ? ಅದಕ್ಕಾಗಿಯೇ ಈ ಮಾರ್ಗ ಅನುಸರಿಸುತ್ತಿದ್ದೇವೆ’ ಎಂಬುದು ವಾಹನ ಸವಾರರ ಮಾತು. ‘ವಾಹನಗಳಿಗೆ ಶುಲ್ಕ ವಿಧಿಸುವ ಮುನ್ನ ಗಮನಕ್ಕೆ ತರುವ ಕೆಲಸ ಇಲಾಖೆಯಿಂದ ಆಗಬೇಕಿದ್ದು, ವಾಹನ ಮಾಲೀಕರ ಗಮನಕ್ಕೆ ತಂದು, ಎಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಮನವರಿಕೆ ಮಾಡಿದ ನಂತರ ದಂಡ ಹಾಕಲಿ’ ಎಂಬುದು ಕೆಲ ವಾಹನ ಸವಾರರ ಮನವಿಯಾಗಿದೆ.