ಜಮ್ಮು ವಾಯು ಸೇನಾ ನೆಲೆ ಮೇಲೆ ಉಗ್ರರ ಡ್ರೋನ್ ದಾಳಿ: ತನಿಖೆಗೆ ಎನ್‌ಐಎ ರಂಗ ಪ್ರವೇಶ..!

ವಾಯುನೆಲೆಯಲ್ಲಿ ಇರುವ ಹೆಲಿಕಾಪ್ಟರ್‌ಗಳಿಗೆ ಹಾನಿ ಉಂಟು ಮಾಡೋದು ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು ಹಾಳುಗೆಡವೋದೇ ಉಗ್ರರ ಗುರಿಯಾಗಿತ್ತು. ಆದ್ರೆ, ಭದ್ರತಾ ಪಡೆಗಳು ಸಂಚನ್ನು ನಿಷ್ಕ್ರಿಯಗೊಳಿಸಿವೆ.

ಜಮ್ಮು ವಾಯು ಸೇನಾ ನೆಲೆ ಮೇಲೆ ಉಗ್ರರ ಡ್ರೋನ್ ದಾಳಿ: ತನಿಖೆಗೆ ಎನ್‌ಐಎ ರಂಗ ಪ್ರವೇಶ..!
Linkup
: ಮೇಲೆ ನಡೆದ ಉಗ್ರರ ಡ್ರೋನ್ ತನಿಖೆಯ ಹೊಣೆಯನ್ನು ()ಗೆ ವಹಿಸಲಾಗಿದೆ. ಈ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಸಚಿವಾಲಯದ ಆದೇಶ ಹೊರಬಿದ್ದ ಬೆನ್ನಲ್ಲೇ, ರಾಷ್ಟ್ರೀಯ ತನಿಖಾ ದಳದ ತಂಡ ಜಮ್ಮು ಕಾಶ್ಮೀರಕ್ಕೆ ಆಗಮಿಸಿದೆ. ಜಮ್ಮು ವಾಯು ಸೇನಾ ನೆಲೆಗೆ ಆಗಮಿಸಿರುವ ಎನ್‌ಐಎ ತಂಡ, ಘಟನೆ ನಡೆದ ಸ್ಥಳದ ಪರಿಶೀಲನೆ ನಡೆಸಿತು. ವಾಯು ಸೇನೆಯ ಅಧಿಕಾರಿಗಳೊಂದಿಗೂ ಎನ್‌ಐಎ ತಂಡ ಘಟನೆ ಸಂಬಂಧ ಮಾತುಕತೆ ನಡೆಸಿ ಮಾಹಿತಿ ಕಲೆಹಾಕಲಿದೆ. ಈ ಬೆಳವಣಿಗೆಗಳ ಕುರಿತಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಜಿ. ಕೆ. ರೆಡ್ಡಿ, ಪಾಕಿಸ್ತಾನ ಈ ಹಿಂದೆ ಕೂಡಾ ಗಡಿಯಲ್ಲಿ ದಾಳಿಗಳನ್ನು ನಡೆಸಿತ್ತು ಎಂದಿದ್ದಾರೆ. ಈ ಹಿಂದೆಯೂ ಭದ್ರತಾ ಪಡೆಗು ಗಡಿಯಲ್ಲಿ ಡ್ರೋನ್‌ಗಳ ಹಾರಾಟವನ್ನು ತಡೆದಿದ್ದವು. ಗಡಿಯಾಚೆಯಿಂದ ಭಾರತದೊಳಗೆ ಬಂದ ಡ್ರೋನ್‌ಗಳನ್ನು ನಾಶಪಡಿಸಿದ್ದವು ಎಂದು ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ತನಿಖೆ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ರಕ್ಷಣಾ ಇಲಾಖೆಯ ಉನ್ನತಾಧಿಕಾರಿಗಳ ಜೊತೆ ಸಭೆ ನಡೆದಿದೆ ಎಂದೂ ಜಿ. ಕೆ. ರೆಡ್ಡಿ ಮಾಹಿತಿ ನೀಡಿದ್ದಾರೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗಿನ ಜಾವ ಡ್ರೋನ್‌ಗಳು ಜಮ್ಮು ವಾಯು ನೆಲೆ ಮೇಲೆ ಹಾರಾಡಿದ್ದವು. ಈ ವೇಳೆ ಭದ್ರತಾ ಪಡೆ ಡ್ರೋನ್‌ಗಳನ್ನು ಹಿಮ್ಮೆಟ್ಟಿಸಿದ್ದವು. ವಾಯುನೆಲೆಯಲ್ಲಿ ಇರುವ ಹೆಲಿಕಾಪ್ಟರ್‌ಗಳಿಗೆ ಹಾನಿ ಉಂಟು ಮಾಡೋದು ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆಯನ್ನು ಹಾಳುಗೆಡವೋದೇ ಉಗ್ರರ ಗುರಿಯಾಗಿತ್ತು ಎನ್ನಲಾಗಿದೆ. ಈ ದಾಳಿ ಹಿಂದೆ ಲಷ್ಕರೆ ತೋಯ್ಬಾ ಸಂಘಟನೆಯ ಕೈವಾಡವಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದೀಗ ಪ್ರಕರಣದ ತನಿಖೆಗೆ ಎನ್‌ಐಎ ರಂಗ ಪ್ರವೇಶ ಮಾಡಿದ್ದು, ಉಗ್ರರ ಸಂಚಿನ ಒಳಸುಳಿ ಶೀಘ್ರದಲ್ಲೇ ಬಟಾಬಯಲಾಗಲಿದೆ.