ಕೇಂದ್ರ ಸರ್ಕಾರದ 'ಪಾಸಿಟಿವಿಟಿ' ನೀತಿ: ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ವಾಗ್ದಾಳಿ

ಕೋವಿಡ್ ಎರಡನೆಯ ಅಲೆ ನಿರ್ವಹಣೆ ವಿಚಾರವಾಗಿ ದೇಶದೊಳಗೆ ಮತ್ತು ವಿದೇಶಗಳಿಂದ ವ್ಯಕ್ತವಾಗುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರ ಸಕಾರಾತ್ಮಕ ಚಟುವಟಿಕೆಗಳ ಬಗ್ಗೆ ಪ್ರಚಾರ ಮಾಡಲು ಮುಂದಾಗಿದೆ.

ಕೇಂದ್ರ ಸರ್ಕಾರದ 'ಪಾಸಿಟಿವಿಟಿ' ನೀತಿ: ರಾಹುಲ್ ಗಾಂಧಿ, ಪ್ರಶಾಂತ್ ಕಿಶೋರ್ ವಾಗ್ದಾಳಿ
Linkup
ಹೊಸದಿಲ್ಲಿ: ಕೋವಿಡ್ ನಿರ್ವಹಣೆಯ ರೀತಿಯ ಕುರಿತು ದೇಶದೊಳಗೆ ಮತ್ತು ವಿದೇಶಗಳಿಂದ ಬರುತ್ತಿರುವ ಟೀಕೆಗಳನ್ನು ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರದ 'ಸಕಾರಾತ್ಮಕತೆ' ನಡೆಯನ್ನು 'ಮರಳಿನೊಳಗೆ ತಲೆಯನ್ನು ಹೂತುಹಾಕುವ ಪ್ರಯತ್ನ' ಮತ್ತು ನಾಗರಿಕೆ ಎಸಗುತ್ತಿರುವ ದ್ರೋಹ ಎಂದು ವಾಗ್ದಾಳಿ ನಡೆಸಿದ್ದಾರೆ. 'ಆಕ್ಸಿಜನ್, ಆಸ್ಪತ್ರೆ ಹಾಗೂ ಔಷಧಗಳ ಕೊರತೆಯಿಂದ ಸಂಕಷ್ಟಕ್ಕೆ ಒಳಗಾಗುತ್ತಿರುವ ಮತ್ತು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬದವರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ 'ಸಕಾರಾತ್ಮಕ ಆಲೋಚನೆ'ಯ ಸುಳ್ಳು ಭರವಸೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪವಾಗಿದೆ. ಒಬ್ಬರ ತಲೆಯನ್ನು ಮರಳಿನಲ್ಲಿ ಹೂತುಹಾಕುವುದು ಸಕಾರಾತ್ಮಕತೆ ಅಲ್ಲ. ಇದು ನಮ್ಮ ಜನರಿಗೆ ಎಸಗುತ್ತಿರುವ ದ್ರೋಹ' ಎಂದು ಆರೋಪಿಸಿದ್ದಾರೆ. ಚುನಾವಣಾ ಪ್ರಚಾರ ತಂತ್ರ ಕೂಡ ಕೇಂದ್ರ ಸರ್ಕಾರದ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಇದು ಸಕಾರಾತ್ಮಕತೆ ಹರಡುವ ಹೆಸರಿನಲ್ಲಿ ತಮ್ಮ ಪ್ರಚಾರವನ್ನು ಬಿತ್ತುವ ಅಸಹ್ಯಕರ ಪ್ರಕ್ರಿಯೆ ಎಂದು ಆರೋಪಿಸಿದ್ದಾರೆ. 'ದುಃಖಿಸುತ್ತಿರುವ ದೇಶದ ಹಾಗೂ ದುರಂತಗಳು ನಮ್ಮನ್ನು ಸುತ್ತಿಕೊಳ್ಳುತ್ತಿರುವ ಹಂತದಲ್ಲಿ, ಪಾಸಿಟಿವಿಟಿ ಹೆಸರಿನಲ್ಲಿ ಸುಳ್ಳು ಹಾಗೂ ಪ್ರಚಾರ ಬಿತ್ತುವ ಪ್ರಯತ್ನವನ್ನು ಮುಂದುವರಿಸಿರುವುದು ನಿಜಕ್ಕೂ ಅಸಹ್ಯಕರ! ನಾವು ಪಾಸಿಟಿವ್ ಆಗಲು ಸರ್ಕಾರದ ಕುರುಡು ಪ್ರಚಾರಕ ಆಗುವ ಅಗತ್ಯವಿಲ್ಲ' ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ. ಮೋದಿ ಸರ್ಕಾರವು ಕೋವಿಡ್ ಎರಡನೆಯ ಅಲೆಯನ್ನು ನಿಭಾಯಿಸಿದ ಬಗೆಯ ವಿರುದ್ಧ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗುತ್ತಿರುವ ಕಟುವಾದ ಟೀಕೆಗಳನ್ನು ಎದುರಿಸಲು ಬಿಜೆಪಿ ಹಾಗೂ ಆರೆಸ್ಸೆಸ್ ವಿಭಿನ್ನ ಪ್ರಯತ್ನಗಳಿಗೆ ಮುಂದಾಗಿದೆ. ಸರ್ಕಾರದ 'ಸಕಾರಾತ್ಮಕ ಕೆಲಸ'ಗಳ ಬಗ್ಗೆ ಮಾಹಿತಿ ನೀಡುವ ಹಾಗೂ ಅವುಗಳನ್ನು ಬಿಂಬಿಸುವ ಕುರಿತಾದ ಕಾರ್ಯಾಗಾರದಲ್ಲಿ ಜಂಟಿ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಗಳು ಸೇರಿದಂತೆ ಕೇಂದ್ರ ಸರ್ಕಾರದ ಅಧಿಕಾರಿಗಳು ಭಾಗವಹಿಸಿದ್ದರು. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತಾದ ಪತ್ರಿಕಾ ವರದಿಗಳನ್ನು ಕೇಂದ್ರ ಸಚಿವರು ಹಂಚಿಕೊಳ್ಳುವ ಮೂಲಕ, ಸರ್ಕಾರದ ವಿರುದ್ಧದ ಆರೋಪಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಸರ್ಕಾರದ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬರೆದಿದ್ದ ಕಟು ಟೀಕೆಯ ಪತ್ರಕ್ಕೆ ತಿರುಗೇಟು ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷೆ ಜೆಪಿ ನಡ್ಡಾ, ನಾಲ್ಕು ಪುಟಗಳ ಪ್ರತಿಕ್ರಿಯೆ ರವಾನಿಸಿದ್ದಾರೆ. ಪಿಎಂ ಕೇರ್ಸ್ ನಿಧಿ ಅಡಿಯಲ್ಲಿ ಖರೀದಿಸಿದ ವೆಂಟಿಲೇಟರ್‌ಗಳ ಹಂಚಿಕೆ ಮಾಡಲಾಗಿದೆ ಮತ್ತು ಈ ಬಿಕ್ಕಟ್ಟನ್ನು ನಿಭಾಯಿಸಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬ ಬಗ್ಗೆ ವಿವರಿಸಿದ್ದಾರೆ.