ಚಿರಾಗ್ ಪಾಸ್ವಾನ್ ಸಂಬಂಧಿ, ಎಲ್‌ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಅತ್ಯಾಚಾರ ಪ್ರಕರಣ

ಬಿಹಾರ ಸಮಷ್ಟಿಪುರ ಲೋಕಸಭೆ ಕ್ಷೇತ್ರದ ಎಲ್‌ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಪಕ್ಷದ ಕಾರ್ಯಕರ್ತೆಯೊಬ್ಬರು ದಿಲ್ಲಿಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯವೆದ್ದಿದ್ದವರಲ್ಲಿ ಪ್ರಿನ್ಸ್ ರಾಜ್ ಒಬ್ಬರು.

ಚಿರಾಗ್ ಪಾಸ್ವಾನ್ ಸಂಬಂಧಿ, ಎಲ್‌ಜೆಪಿ ಸಂಸದ ಪ್ರಿನ್ಸ್ ರಾಜ್ ವಿರುದ್ಧ ಅತ್ಯಾಚಾರ ಪ್ರಕರಣ
Linkup
ಹೊಸದಿಲ್ಲಿ: ಲೋಕ ಜನಶಕ್ತಿ ಪಕ್ಷದ () ಸಂಸದ ಹಾಗೂ ಸಂಬಂಧಿ ವಿರುದ್ಧ ಆರೋಪ ಕೇಳಿಬಂದಿದ್ದು, ಮಹಿಳೆಯೊಬ್ಬರ ದೂರಿನ ಅನ್ವಯ ದಿಲ್ಲಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಬಿಹಾರದ ಸಮಷ್ಟಿಪುರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಪ್ರಿನ್ಸ್ ರಾಜ್, ತಮ್ಮ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ ಹಾಕಿದ್ದರು ಎಂದು ಎಲ್‌ಜೆಪಿ ಕಾರ್ಯಕರ್ತೆಯೊಬ್ಬರು ಮೂರು ತಿಂಗಳ ಹಿಂದೆ ದಿಲ್ಲಿಯ ಕನ್ನಾಟ್ ಪ್ಲೇಸ್ ಪೊಲೀಸರಿಗೆ ದೂರು ನೀಡಿದ್ದರು. ದಿಲ್ಲಿ ಕೋರ್ಟ್ ಸೆಪ್ಟೆಂಬರ್ 9ರಂದು ಆದೇಶ ನೀಡಿದ ಬಳಿಕ ಮೂರು ತಿಂಗಳ ಹಿಂದಿನ ಆರೋಪದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಮಹಿಳೆ ಜುಲೈನಲ್ಲಿ ಕೋರ್ಟ್ ಮೊರೆ ಹೋಗಿದ್ದರು. ಜೂನ್ 17ರಂದು ಟ್ವೀಟ್ ಮಾಡಿದ್ದ ಪ್ರಿನ್ಸ್ ರಾಜ್, ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದರು. 'ನನ್ನ ವಿರುದ್ಧ ಮಾಡಲಾದ ಇಂತಹ ಯಾವುದೇ ಹೇಳಿಕೆ ಅಥವಾ ಆರೋಪಗಳನ್ನು ನಾನು ಖಡಾಖಂಡಿತವಾಗಿ ನಿರಾಕರಿಸುತ್ತೇನೆ. ಈ ಎಲ್ಲ ಆರೋಪಗಳೂ ಸಂಪೂರ್ಣ ಸುಳ್ಳು, ತಿರುಚಿದ ಮತ್ತು ನನ್ನನ್ನು ವೃತ್ತಿಯಿಂದ ಹಾಗೂ ವೈಯಕ್ತಿಕವಾಗಿ ನನ್ನ ವರ್ಚಸ್ಸಿಗೆ ಕಳಂಕ ತರುವ ಉದ್ದೇಶದ ಬೃಹತ್ ಕ್ರಿಮಿನಲ್ ಸಂಚಿನ ಭಾಗ' ಎಂದು ಹೇಳಿದ್ದರು. 'ನಮ್ಮ ದೇಶದ ಮಹಿಳೆಯರ ರಕ್ಷಣೆಗಾಗಿ ಇರುವ ಈ ಸದುದ್ದೇಶದ ಕಾನೂನುಗಳನ್ನು ದುರ್ಬಳಕೆ ಮಾಡಿಕೊಳ್ಳುವ ಪುನರಾವರ್ತಿತ ಹಾಗೂ ಹಾನಿಯುಂಟುಮಾಡುವ ಪ್ರಯತ್ನಗಳಿಂದ ನನಗೆ ಅತೀವ ನೋವಾಗಿದೆ' ಎಂದಿದ್ದರು. ಈ ಮಹಿಳೆ ಈ ಹಿಂದೆ ಕೂಡ ತಮ್ಮ ವಿರುದ್ಧ ಇದೇ ರೀತಿಯ ಆರೋಪಗಳನ್ನು ಮಾಡಿದ್ದರು. ಆಕೆಯ ವಿರುದ್ಧ ಫೆಬ್ರವರಿಯಲ್ಲಿ ತಾವು ದೂರು ನೀಡಿದ್ದು, ಎಫ್‌ಐಆರ್ ಕೂಡ ದಾಖಲಾಗಿತ್ತು ಎಂದು ಅವರು ಹೇಳಿದ್ದರು. ಎಲ್‌ಜೆಪಿಯಲ್ಲಿ ಅಸಮಾಧಾನ ಉಂಟಾಗಿ ಈ ವರ್ಷದ ಆರಂಭದಲ್ಲಿ ಪಕ್ಷ ಹೋಳಾದಾಗ ಬಂಡಾಯವೆದ್ದಿದ್ದ ಐವರು ಮುಖಂಡರಲ್ಲಿ ಪ್ರಿನ್ಸ್ ರಾಜ್ ಕೂಡ ಒಬ್ಬರು. ತಮ್ಮ ಸೋದರ ಸಂಬಂಧಿ ಜತೆಗಿನ ಚಿರಾಗ್ ಬಾಂಧವ್ಯ ಹದಗೆಟ್ಟಿತ್ತು. ಚಿರಾಗ್ ಹೊರತುಪಡಿಸಿ ಪ್ರಿನ್ಸ್ ರಾಜ್ ಸೇರಿದಂತೆ ಉಳಿದ ಐವರು ಸಂಸದರೊಂದಿಗೆ ಚಿರಾಗ್ ಚಿಕ್ಕಪ್ಪ ಪಶುಪತಿ ಕುಮಾರ್ ಪರಾಸ್, ಪಕ್ಷವನ್ನು ವಿಭಜಿಸಿದ್ದರು.