ಚುನಾವಣಾ ಆಯೋಗದ ನ್ಯಾಯವಾದಿಗಳ ತಂಡಕ್ಕೆ ರಾಜೀನಾಮೆ ನೀಡಿದ ವಕೀಲ

ಚುನಾವಣಾ ಆಯೋಗದ ಸುಪ್ರೀಂಕೋರ್ಟ್ ನ್ಯಾಯವಾದಿಗಳ ಸಮಿತಿಗೆ ವಕೀಲ ಮೋಹಿತ್ ಡಿ ರಾಮ್ ರಾಜೀನಾಮೆ ನೀಡಿದ್ದಾರೆ. ಚುನಾವಣಾ ಆಯೋಗದ ನಿಲುವುಗಳೊಂದಿಗೆ ತಮ್ಮ ಮೌಲ್ಯಗಳು ಹೊಂದಾಣಿಕೆಯಾಗದೆ ಇರುವುದರಿಂದ ಹಿಂದೆ ಸರಿಯುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಚುನಾವಣಾ ಆಯೋಗದ ನ್ಯಾಯವಾದಿಗಳ ತಂಡಕ್ಕೆ ರಾಜೀನಾಮೆ ನೀಡಿದ ವಕೀಲ
Linkup
ಹೊಸದಿಲ್ಲಿ: ಚುನಾವಣಾ ಆಯೋಗದ ವಕೀಲರ ತಂಡದಿಂದ ಹಿರಿಯ ವಕೀಲರೊಬ್ಬರು ನೀಡಿದ್ದಾರೆ. ಈ ಸಂದರ್ಭದಲ್ಲಿ ಚುನಾವಣಾ ಆಯೋಗದ ನೀತಿಗಳೊಂದಿಗೆ ತಮ್ಮ ಮೌಲ್ಯಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ಅವರು ಕಾರಣ ನೀಡಿದ್ದಾರೆ. 2013ರಿಂದಲೂ ಚುನಾವಣಾ ಆಯೋಗದ ವಕೀಲರ ಸಮಿತಿಯಲ್ಲಿದ್ದ ಮೋಹಿತ್ ಡಿ ರಾಮ್, ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 'ಚುನಾವಣಾ ಆಯೋಗದ ಪ್ರಸ್ತುತದ ಕಾರ್ಯಾಚರಣೆಗೆ ನನ್ನ ಮೌಲ್ಯಗಳು ಹೊಂದಾಣಿಕೆಯಾಗುತ್ತಿಲ್ಲ ಎನ್ನುವುದು ನನಗೆ ಗೊತ್ತಾಗಿದೆ. ಹೀಗಾಗಿ ಸುಪ್ರೀಂಕೋರ್ಟ್‌ಗಾಗಿ ಇರುವ ಆಯೋಗದ ವಕೀಲರ ಸಮಿತಿಯಿಂದ ನನ್ನ ಜವಾಬ್ದಾರಿಗಳಿಂದ ಹಿಂದೆ ಸರಿಯುತ್ತಿದ್ದೇನೆ' ಎಂದು ತಿಳಿಸಿದ್ದಾರೆ. ಚುನಾವಣಾ ಆಯೋಗವನ್ನು ಪ್ರತಿನಿಧಿಸಿದ್ದು ತಮ್ಮ ವೃತ್ತಿಯಲ್ಲಿ ಸ್ಮರಣಾರ್ಹ ಮೈಲುಗಲ್ಲು ಎಂದು ಅವರು ಬಣ್ಣಿಸಿದ್ದಾರೆ. ನ್ಯಾಯಾಂಗದ ಅಭಿಪ್ರಾಯಗಳನ್ನು ಮಾಧ್ಯಮಗಳು ವರದಿ ಮಾಡುವುದನ್ನು ತಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ವಿಫಲ ಹೋರಾಟ ನಡೆಸಿದ ಕೆಲವು ದಿನಗಳ ಬಳಿಕ ರಾಮ್ ರಾಜೀನಾಮೆ ನೀಡಿದ್ದಾರೆ. ಎರಡು ತಿಂಗಳ ಕಾಲ ಚುನಾವಣಾ ಪ್ರಚಾರ ನಡೆಸುವುದನ್ನು ತಡೆಯದೆ ಕೋವಿಡ್ ಎರಡನೆಯ ಅಲೆ ಹರಡಲು ಚುನಾವಣಾ ಆಯೋಗ ಕಾರಣವಾಗಿದೆ. ಹೀಗಾಗಿ ಆಯೋಗದ ಅಧಿಕಾರಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಹೇಳಿತ್ತು. ಇದನ್ನು ಮಾಧ್ಯಮಗಳಲ್ಲಿ ವರದಿ ಮಾಡಿದ್ದನ್ನು ಚುನಾವಣಾ ಆಯೋಗವು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಆದರೆ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರವಾಗಿದೆ ಎಂದಿದ್ದ ಕೋರ್ಟ್, ಮಾಧ್ಯಮಗಳು ಕೋರ್ಟ್‌ನಲ್ಲಿ ನಡೆಯುವ ಎಲ್ಲ ವಿದ್ಯಮಾನಗಳನ್ನೂ ವರದಿ ಮಾಡಲು ಅಧಿಕಾರ ಹೊಂದಿವೆ ಎಂದಿತ್ತು. ಇದರಿಂದ ಚುನಾವಣಾ ಆಯೋಗಕ್ಕೆ ನ್ಯಾಯಾಲಯದಲ್ಲಿ ಮುಖಭಂಗ ಉಂಟಾಗಿತ್ತು.