ಕೋವಿಡ್ ಸಂಕಷ್ಟ: ಪ್ರಧಾನಿ ಮೋದಿಗೆ 6 ಸಲಹೆಗಳನ್ನು ನೀಡಿದ ಮಲ್ಲಿಕಾರ್ಜುನ ಖರ್ಗೆ

ಕೋವಿಡ್ ಎದುರಿಸುವ ಹೋರಾಟದಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ತೆಗೆದುಕೊಳ್ಳಬೇಕಿರುವ ಕ್ರಮಗಳ ಬಗ್ಗೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಆರು ಸಲಹೆಗಳನ್ನು ನೀಡಿದ್ದಾರೆ.

ಕೋವಿಡ್ ಸಂಕಷ್ಟ: ಪ್ರಧಾನಿ ಮೋದಿಗೆ 6 ಸಲಹೆಗಳನ್ನು ನೀಡಿದ ಮಲ್ಲಿಕಾರ್ಜುನ ಖರ್ಗೆ
Linkup
ಹೊಸದಿಲ್ಲಿ: ಕೋವಿಡ್ ಎರಡನೆಯ ಅಲೆಯನ್ನು ತಗ್ಗಿಸುವ ಹೋರಾಟಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಅವರು ಪ್ರಧಾನಿ ನರೇಂದ್ರ ಮೋದಿಗೆ ಆರು ಸಲಹೆಗಳನ್ನು ನೀಡಿದ್ದಾರೆ. 'ಭಾರತದ ಜನಸಾಮಾನ್ಯರು ತಮ್ಮ ಪ್ರೀತಿ ಪಾತ್ರರನ್ನು ವೈರಸ್‌ನಿಂದ ಉಳಿಸಿಕೊಳ್ಳುವ ಚಿಕಿತ್ಸೆಗಾಗಿ ಭೂಮಿ, ಆಭರಣ ಮತ್ತು ತಮ್ಮ ಜೀವಮಾನದ ಉಳಿತಾಯಗಳನ್ನೆಲ್ಲ ಕಳೆದುಕೊಂಡಿದ್ದಾರೆ' ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಂಕ್ರಾಮಿಕವನ್ನು ನಿಯಂತ್ರಿಸಲು ಸಮಗ್ರ ಪರಿಣಾಮಕಾರಿ ನೀಲನಕ್ಷೆ ತಯಾರಿಸುವ ಸಲುವಾಗಿ ಸರ್ವಪಕ್ಷ ಸಭೆ ಕರೆಯುವಂತೆ ಮತ್ತು ಎಲ್ಲ ಭಾರತೀಯರಿಗೂ ಕೋವಿಡ್ ಲಸಿಕೆ ನೀಡಲು ಹಂಚಿಕೆ ಮಾಡಿರುವ 35,000 ಕೋಟಿ ರೂಪಾಯಿಯನ್ನು ಸದ್ಬಳಕೆ ಮಾಡುವಂತೆ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರವು ತನ್ನ ಕರ್ತವ್ಯಗಳನ್ನು ಮರೆತಿರುವಂತೆ ಅನಿಸುತ್ತಿರುವುದರಿಂದ ನಾಗರಿಕ ಸಮಾಜ ಮತ್ತು ನಾಗರಿಕ ಗುಂಪುಗಳು ಈ ಅಸಾಧಾರಣ ರಾಷ್ಟ್ರೀಯ ಹೋರಾಟದಲ್ಲಿ ಹೋರಾಡುವಂತಾಗಿದೆ ಎಂದಿರುವ ಖರ್ಗೆ, ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಕಿಡಿಕಾರಿದ್ದಾರೆ. ಲಸಿಕೆ ಉತ್ಪಾದನೆಯನ್ನು ಹೆಚ್ಚಿಸಲು ಕಡ್ಡಾಯ ಪರವಾನಗಿಯನ್ನು ನಿಯಂತ್ರಿಸಬೇಕು, ಅತಿ ಮುಖ್ಯ ವೈದ್ಯಕೀಯ ಸಾಮಗ್ರಿಗಳ ಮೇಲಿನ ತೆರಿಗೆಯನ್ನು ತೆರವುಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ. ವಿದೇಶಿ ಪರಿಹಾರ ಸಾಮಗ್ರಿಗಳ ಹಂಚಿಕೆಯನ್ನು ಚುರುಕುಗೊಳಿಸಬೇಕು ಮತ್ತು ನಿರುದ್ಯೋಗಿ ವಲಸಿಗರಿಗೆ ಸಹಾಯ ಮಾಡಲು ಎಂನರೇಗಾ ಅಡಿಯಲ್ಲಿ ಕನಿಷ್ಠ ಕೂಲಿಯನ್ನು ಮತ್ತು ಕೆಲಸದ ದಿನಗಳನ್ನು 100 ರಿಂದ 200 ದಿನಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಖರ್ಗೆ ಅವರು ಪ್ರಧಾನಿ ಅವರಿಗೆ ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪತ್ರ ಬರೆದು ಮನವಿ ಮಾಡಿರುವ ಕಾಂಗ್ರೆಸ್‌ನ ಮೂರನೇ ನಾಯಕರಾಗಿದ್ದಾರೆ. ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಪತ್ರ ಬರೆದಿದ್ದರು.