ಕೋವಿಡ್ ಪ್ರಕರಣಗಳ ಅಲರ್ಟ್‌ಗೆ ಹೊಸ ಕ್ರಮ ಜಾರಿಗೊಳಿಸಿದ ದಿಲ್ಲಿ: ವಿವಿಧ ಹಂತಗಳಿಗೆ ಬಣ್ಣಗಳ ಸಂಕೇತ

ಕೋವಿಡ್ ಪ್ರಕರಣಗಳ ಏರಿಕೆಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲು ದಿಲ್ಲಿ ಸರಕಾರ ಬಣ್ಣಗಳ ಮೂಲಕ ಅಲರ್ಟ್ ಘೋಷಿಸುವ ಕ್ರಮವನ್ನು ಜಾರಿಗೆ ತಂದಿದೆ.

ಕೋವಿಡ್ ಪ್ರಕರಣಗಳ ಅಲರ್ಟ್‌ಗೆ ಹೊಸ ಕ್ರಮ ಜಾರಿಗೊಳಿಸಿದ ದಿಲ್ಲಿ: ವಿವಿಧ ಹಂತಗಳಿಗೆ ಬಣ್ಣಗಳ ಸಂಕೇತ
Linkup
ಹೊಸದಿಲ್ಲಿ: ಮೂರನೇ ಅಲೆಯ ಸಂಭಾವ್ಯ ಬೆದರಿಕೆ ನಡುವೆ, ಮುಂಬರುವ ದಿನಗಳಲ್ಲಿ ಪ್ರಕರಣಗಳಲ್ಲಿ ಯಾವುದೇ ಏರಿಕೆ ಕಂಡುಬಂದರೆ ಅದನ್ನು ಎದುರಿಸಲು ವರ್ಗೀಕೃತ ಕ್ರಿಯಾ ಯೋಜನೆಯನ್ನು ಸರಕಾರ ಜಾರಿಗೊಳಿಸಿದೆ. ನೈಸರ್ಗಿಕ ವಿಕೋಪಗಳನ್ನು ಸೂಚಿಸುವ ಬಣ್ಣಗಳಂತೆ, ಕೋವಿಡ್ ಸನ್ನಿವೇಶವನ್ನೂ ಬಣ್ಣಗಳ ಮೂಲಕ ಗುರುತಿಸುವ ನಾಲ್ಕು ಹಂತಗಳನ್ನು ರೂಪಿಸಲಾಗಿದೆ. ದಿಲ್ಲಿ ಸರಕಾರ ಭಾನುವಾರ ಹೊರಡಿಸಿರುವ ಆದೇಶದಂತೆ, ಕೋವಿಡ್ ತೀವ್ರತೆಯನ್ನು ನಾಲ್ಕು ವಿಭಿನ್ನ ಬಣ್ಣಗಳ ಸಂಕೇತದಲ್ಲಿ ಗುರುತಿಸುವ ಪ್ರತ್ಯೇಕ ಮಾರ್ಗಸೂಚಿಯ ಕ್ರಿಯಾ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ. ಪ್ರಕಾರ, ಯೆಲ್ಲೋ ಅಲರ್ಟ್ ಒಂದನೇ ಹಂತದ ತೀವ್ರತೆಯನ್ನು ಸೂಚಿಸಲಿದೆ. ಇದರಲ್ಲಿ ಪಾಸಿಟಿವಿಟಿ ದರ ಸತತ ಎರಡು ದಿನ ಶೇ 0.5ಕ್ಕಿಂತ ಕಡಿಮೆ ಇದ್ದರೆ ಅಥವಾ ವಾರದಲ್ಲಿ 1,500 ಪ್ರಕರಣಗಳು ಅಥವಾ ಒಂದು ವಾರದಲ್ಲಿ 500ಕ್ಕಿಂತ ಹೆಚ್ಚು ಆಕ್ಸಿಜನ್ ಹಾಸಿಗೆಗಳು ತುಂಬಿದರೆ ಇದು ಜಾರಿಯಾಗುತ್ತದೆ. ಯೆಲ್ಲೋ ಅಲರ್ಟ್‌ನಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ದಿನ ಬಿಟ್ಟು ದಿನ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗುತ್ತದೆ. ಮೆಟ್ರೋ ಸೇವೆಗಳು, ಬಸ್‌ಗಳು ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯಾಚರಣೆ ನಡೆಸಬಹುದಾಗಿದೆ. ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ನಸುಗೆಂಪು ಅಲರ್ಟ್ (ಅಂಬರ್) ಶೇ 1 ಕ್ಕಿಂತ ಪಾಸಿಟಿವಿಟಿ ದರ ಅಥವಾ ಒಂದು ವಾರ 3,500ಕ್ಕಿಂತ ಹೊಸ ಪ್ರಕರಣಗಳು ವರದಿಯಾದರೆ ಅಥವಾ 700 ಆಕ್ಸಿಜನ್ ಹಾಸಿಗೆಗಳು ತುಂಬಿದರೆ ಘೋಷಿಸಲಾಗುತ್ತದೆ. ಇಲ್ಲಿ ವಾರಾಂತ್ಯದ ಕರ್ಫ್ಯೂಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗುತ್ತದೆ. ಮೆಟ್ರೋ ರೈಲಿಗಳಲ್ಲಿ ಶೇ 33ರಷ್ಟು ಸಾಮರ್ಥ್ಯದಲ್ಲಿ ಓಡಾಡಲು ಅವಕಾಶ ನೀಡಲಾಗುತ್ತದೆ. ಶೇ 2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಕರಣ ಸತತ ಎರಡು ದಿನ ದಾಖಲಾದರೆ ಅಥವಾ ವಾರದಲ್ಲಿ 9,000 ಪ್ರಕರಣ ದಾಖಲಾದರೆ ಅಥವಾ 1,000ಕ್ಕಿಂತ ಹೆಚ್ಚಿನ ಆಕ್ಸಿಜನ್ ಬೆಡ್ ಆಕ್ರಮಿತವಾದರೆ ಆರೆಂಜ್ ಅಲರ್ಟ್ ಜಾರಿಗೆ ಬರಲಿದೆ. ಇದರಲ್ಲಿ ಭಾಗಶಃ ಲಾಕ್‌ಡೌನ್ ಸ್ವರೂಪ ಜಾರಿಯಾಗುತ್ತದೆ. ನಾಲ್ಕನೇ ಹಂತದಲ್ಲಿ ಜಾರಿಯಾಗುತ್ತದೆ. ಪಾಸಿಟಿವಿಟಿ ದರ ಶೇ 5ಕ್ಕಿಂತ ಹೆಚ್ಚಾದರೆ ಅಥವಾ ವಾರದಲ್ಲಿ 16,000 ಪ್ರಕರಣ ಅಥವಾ 3,000 ಆಕ್ಸಿಜನ್ ಬೆಡ್ ಭರ್ತಿಯಾದರೆ ಈ ಘೋಷಣೆ ಮಾಡಲಾಗುತ್ತದೆ. ಇಲ್ಲಿ ಸಂಪೂರ್ಣ ಕರ್ಫ್ಯೂ ಜಾರಿಯಾಗಲಿದೆ.