ಕೇಂದ್ರ ಸಚಿವ ಸಂಪುಟ: 4ರಿಂದ 6ಕ್ಕೇರಿದ ರಾಜ್ಯ ಪ್ರಾತಿನಿಧ್ಯ

ಡಿ.ವಿ. ಸದಾನಂದ ಗೌಡ ಅವರ ರಾಜೀನಾಮೆ ಮತ್ತು ನಾಲ್ಕು ಹೊಸ ಮುಖಗಳ ಸೇರ್ಪಡೆಯೊಂದಿಗೆ ಸಂಪುಟದಲ್ಲಿ ರಾಜ್ಯದ ಒಟ್ಟು ಆರು ಮಂದಿ ಪ್ರಾತಿನಿಧ್ಯ ಪಡೆದಂತಾಗಿದೆ.

ಕೇಂದ್ರ ಸಚಿವ ಸಂಪುಟ: 4ರಿಂದ 6ಕ್ಕೇರಿದ ರಾಜ್ಯ ಪ್ರಾತಿನಿಧ್ಯ
Linkup
ಬೆಂಗಳೂರು: ನಾಲ್ವರು ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಕೇಂದ್ರ ಸಂಪುಟದಲ್ಲಿರಾಜ್ಯದ ಪ್ರಾತಿನಿಧ್ಯ ನಾಲ್ಕರಿಂದ ಆರಕ್ಕೇರಿದೆ. ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದ ಗೌಡ ಮತ್ತು ಸುರೇಶ್‌ ಅಂಗಡಿ ಕೇಂದ್ರ ಮಂತ್ರಿ ಮಂಡಲದಲ್ಲಿದ್ದರು. ನಿರ್ಮಲಾ ಸೀತಾರಾಮನ್‌ ಅವರದ್ದೂ ರಾಜ್ಯದ ಕೋಟಾ ಆಗಿತ್ತು. ಈ ನಡುವೆ, ಸುರೇಶ್‌ ಅಂಗಡಿಯವರು ಮೃತರಾಗಿದ್ದರು. ಇದೀಗ ಡಿ.ವಿ. ಸದಾನಂದ ಗೌಡ ಅವರ ರಾಜೀನಾಮೆ ಮತ್ತು ನಾಲ್ಕು ಹೊಸ ಮುಖಗಳ ಸೇರ್ಪಡೆಯೊಂದಿಗೆ ಸಂಪುಟದಲ್ಲಿ ರಾಜ್ಯದ ಒಟ್ಟು ಆರು ಮಂದಿ ಪ್ರಾತಿನಿಧ್ಯ ಪಡೆದಂತಾಗಿದೆ. ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌, ಸಂಸದರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎ. ನಾರಾಯಣ ಸ್ವಾಮಿ ಹೊಸದಾಗಿ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ.