ಕೋಲ್ಕತ್ತಾ To ಮುಂಬೈ ವಿಮಾನದಲ್ಲಿ ಹಾವು ಕಂಡು ಬೆಚ್ಚಿಬಿದ್ದ ಪ್ರಯಾಣಿಕರು..!

​​ಬ್ಯಾಗೇಜ್‌ ಕಂಬಿಗೆ ಸುರಳಿ ಸುತ್ತಿಕೊಂಡಿದ್ದ ಹಾವನ್ನು ಕಂಡು ಹೌಹಾರಿದ ಸಿಬ್ಬಂದಿ, ಥಟ್ಟನೆ ವಿಮಾನ ಇಳಿದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಸಿಬ್ಬಂದಿಯನ್ನು ಕರೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಸೇರಿಸಲಾಗಿದೆ.

ಕೋಲ್ಕತ್ತಾ To ಮುಂಬೈ ವಿಮಾನದಲ್ಲಿ ಹಾವು ಕಂಡು ಬೆಚ್ಚಿಬಿದ್ದ ಪ್ರಯಾಣಿಕರು..!
Linkup
(ಪಶ್ಚಿಮ ಬಂಗಾಳ): ಅಪರೂಪಕ್ಕೊಮ್ಮೆ ಮನೆಯ ಒಳಾಂಗಣದಲ್ಲಿ ಪ್ರತ್ಯಕ್ಷಗೊಂಡು ಗಾಬರಿ ಹುಟ್ಟಿಸುವ ಉರಗ ಏರಿದರೆ ಹೇಗಿರುತ್ತದೆ ಸನ್ನಿವೇಶ..? ಹೌದು, ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೊ ವಿಮಾನದ ಒಳಗೆ ಹಾವೊಂದು ಪವಡಿಸಿ ಫಜೀತಿ ಸೃಷ್ಟಿಸಿದ ಪ್ರಸಂಗ ನಡೆದಿದೆ. ಛತ್ತೀಸ್‌ಗಢದ ರಾಯಪುರದಿಂದ ಬಂದು ಮುಂಬಯಿಗೆ ಹಾರಲು ಅಣಿಯಾಗಿದ್ದ ಇಂಡಿಗೊ ಪ್ರಯಾಣಿಕ ವಿಮಾನದಲ್ಲಿ ಪತ್ತೆಯಾಗಿ ನಿಲ್ದಾಣದಲ್ಲಿ ಕೆಲ ಕಾಲ ಗಲಿಬಿಲಿಯ ಸನ್ನಿವೇಶ ಸೃಷ್ಟಿಯಾಗಿತ್ತು. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮುನ್ನ ವಿಮಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿತ್ತು. ಆ ವೇಳೆ ಬ್ಯಾಗೇಜ್‌ ಕ್ಯಾಬಿನ್‌ ಪರಿಶೀಲಿಸುತ್ತಿದ್ದ ಸಿಬ್ಬಂದಿಗೆ ಹಾವು ಕಾಣಿಸಿಕೊಂಡಿದೆ..! ಬ್ಯಾಗೇಜ್‌ ಕಂಬಿಗೆ ಸುರಳಿ ಸುತ್ತಿಕೊಂಡಿದ್ದ ಹಾವನ್ನು ಕಂಡು ಹೌಹಾರಿದ ಸಿಬ್ಬಂದಿ, ಥಟ್ಟನೆ ವಿಮಾನ ಇಳಿದು ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಅರಣ್ಯ ಸಿಬ್ಬಂದಿಯನ್ನು ಕರೆಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಅರಣ್ಯ ಸೇರಿಸಲಾಗಿದೆ. 'ಅದು ವಿಷಕಾರಿ ಹಾವು ಅಲ್ಲ. ಇಲಿ, ಕಪ್ಪೆಗಳನ್ನು ಬೇಟೆಯಾಡುವ ಕೇರೆ ಹಾವು' ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಲಗೇಜ್‌ ತೆರವುಗೊಳಿಸಿದ ನಂತರ ಖಾಲಿ ಜಾಗ ಹುಡುಕಿ ಬಂದು ಅದು ಕುಳಿತಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಅಂತೂ ಹಾವಿನ ಕಾರಣದಿಂದಾಗಿ ಮುಂಬಯಿಗೆ ಹಾರಬೇಕಿದ್ದ ಆ ವಿಮಾನದ ಪಯಣ ರದ್ದಾಗಿದೆ. ಪ್ರಯಾಣಿಕರಿಗೆ ಬೇರೊಂದು ವಿಮಾನ ವ್ಯವಸ್ಥೆ ಮಾಡಿ ಕಳಿಸಿಕೊಡಲಾಗಿದೆ.