ಕೇರಳದಲ್ಲಿ ಕೊರೊನಾ ಬೆನ್ನಲ್ಲೇ ಮತ್ತೊಂದು ಕಂಟಕ..! 15 ಜನರಲ್ಲಿ ಜೈಕಾ ವೈರಸ್‌ ಪತ್ತೆ..!

ಸಾಧಾರಣವಾಗಿ ಗರ್ಭಿಣಿಯರಿಗೆ ಜೈಕಾ ವೈರಸ್‌ ಬಾಧಿಸುತ್ತದೆ. ಗರ್ಭಿಣಿಯರಿಗೆ ವೈರಸ್‌ ಬಾಧಿಸಿದರೆ ಜನಿಸುವ ಮಗುವಿಗೆ ಅಂಗ ವೈಕಲ್ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಪ್ರಸ್ತುತ ರೋಗ ಬಾಧಿಸಿದ 15 ಮಂದಿಯಲ್ಲಿ 14 ಮಂದಿಯೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಾಗಿದ್ದಾರೆ.

ಕೇರಳದಲ್ಲಿ ಕೊರೊನಾ ಬೆನ್ನಲ್ಲೇ ಮತ್ತೊಂದು ಕಂಟಕ..! 15 ಜನರಲ್ಲಿ ಜೈಕಾ ವೈರಸ್‌ ಪತ್ತೆ..!
Linkup
: ಕೇರಳದಲ್ಲಿ 15 ಜನರಲ್ಲಿ ವೈರಸ್‌ ಪತ್ತೆಯಾಗಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶನ ನೀಡಿದೆ. ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ 24 ವರ್ಷದ ಗರ್ಭಿಣಿಯಲ್ಲಿ ಜೈಕಾ ವೈರಸ್‌ ಪ್ರಥಮವಾಗಿ ಪತ್ತೆಯಾಗಿದೆ. ಈಡಿಸ್‌ ಸೊಳ್ಳೆಗಳ ಮೂಲಕ ಹರಡುವ ಈ ವೈರಸ್‌ ಬಾಧಿತರಿಗೆ ಜ್ವರ, ಮೈ ಕೈ ನೋವು, ಗಂಟು ನೋವು, ಶರೀರದ ಭಾಗಗಳು ಕೆಂಪು ಬಣ್ಣಕ್ಕೆ ತಿರುಗುವುದು, ತಲೆನೋವು ಲಕ್ಷಣ ಕಾಣಿಸಿಕೊಳ್ಳುತ್ತದೆ. ಸಾಧಾರಣವಾಗಿ 2 ರಿಂದ 7 ದಿನಗಳ ಬಳಿಕ ರೋಗ ಲಕ್ಷಣಗಳು ಗೋಚರಿಸುತ್ತದೆ. ಜೈಕಾ ವೈರಸ್‌ ಬಾತರಿಗೆ ಅತೀ ವೇಗವಾಗಿ ರೋಗ ಲಕ್ಷಣಗಳು ಕಾಣಿಸುವುದಿಲ್ಲ. ಸಾಧಾರಣವಾಗಿ ಗರ್ಭಿಣಿಯರಿಗೆ ಜೈಕಾ ವೈರಸ್‌ ಬಾಧಿಸುತ್ತದೆ. ಗರ್ಭಿಣಿಯರಿಗೆ ವೈರಸ್‌ ಬಾಧಿಸಿದರೆ ಜನಿಸುವ ಮಗುವಿಗೆ ಅಂಗ ವೈಕಲ್ಯ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ವೈರಸ್‌ ಬಾಧಿಸಿದ ಮಕ್ಕಳು ಹಾಗೂ ಹಿರಿಯರಿಗೆ ನಾಡಿ ಸಂಬಂಧ ಸಮಸ್ಯೆ ಉಂಟಾಗುತ್ತದೆ. ಜೈಕಾ ವೈರಸ್‌ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರದ ತಂಡ ಕೇರಳಕ್ಕೆ ಆಗಮಿಸಿದೆ. ಜೈಕಾ ದೃಢಗೊಂಡ ಹಿನ್ನೆಲೆ ಪರಿಶೀಲಿಸಿ ಅದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಕೇರಳಕ್ಕೆ ಎಲ್ಲ ರೀತಿಯ ಸಹಾಯ ನೀಡುವುದಾಗಿ ತಂಡ ತಿಳಿಸಿದೆ. ಪ್ರಸ್ತುತ ರೋಗ ಬಾಧಿಸಿದ 15 ಮಂದಿಯಲ್ಲಿ 14 ಮಂದಿಯೂ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಾಗಿದ್ದಾರೆ. ಕೋವಿಡ್‌ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶನ ನೀಡಿದೆ. ಕೋವಿಡ್‌ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲೇ ಜೈಕಾ ವೈರಸ್‌ ಪತ್ತೆಯಾಗಿರುವುದು ಸಮಸ್ಯೆಗೆ ಕಾರಣವಾಗಿದೆ.