ಕ್ರಿಪ್ಟೋ ಕ್ಷೇತ್ರಕ್ಕೆ ನೀವು ಹೊಸಬರೇ? ಹಾಗಿದ್ದರೆ 'ವಾಜಿರ್‌ಎಕ್ಸ್‌' ನಲ್ಲಿ ಸಿಗಲಿದೆ ಎಲ್ಲ ಮಾಹಿತಿ

ಭಾರತದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್‌ ಎನಿಸಿರುವ ವಾಜಿರ್‌ಎಕ್ಸ್ ಕೆಲವು ತಿಂಗಳ ಹಿಂದಷ್ಟೇ ವಿಶಿಷ್ಟ ರೀತಿಯ ಕ್ರಿಪ್ಟೋ ಕ್ಯಾಲ್ಕುಲೇಟರ್‌ಗಳನ್ನು ಬಿಡುಗಡೆ ಮಾಡಿದೆ. ವಾಜಿರ್‌ಎಕ್ಸ್‌' ನಲ್ಲಿ ಕ್ರಿಪ್ಟೋ ಕ್ಯಾಲ್ಕುಲೇಟರ್‌ ಜತೆಗೆ ಡಿಜಿಟಲ್‌ ಕರೆನ್ಸಿ ಕುರಿತ ಎಲ್ಲ ಮಹಿತಿ ಲಭ್ಯ.

ಕ್ರಿಪ್ಟೋ ಕ್ಷೇತ್ರಕ್ಕೆ ನೀವು ಹೊಸಬರೇ? ಹಾಗಿದ್ದರೆ 'ವಾಜಿರ್‌ಎಕ್ಸ್‌' ನಲ್ಲಿ ಸಿಗಲಿದೆ ಎಲ್ಲ ಮಾಹಿತಿ
Linkup
ಬೆಂಗಳೂರ: ಭಾರತದ ಅತಿದೊಡ್ಡ ಎನಿಸಿರುವ ವಾಜಿರ್‌ಎಕ್ಸ್ ಕೆಲವು ತಿಂಗಳ ಹಿಂದಷ್ಟೇ ವಿಶಿಷ್ಟ ರೀತಿಯ ಕ್ರಿಪ್ಟೋ ಕ್ಯಾಲ್ಕುಲೇಟರ್‌ಗಳನ್ನು ಬಿಡುಗಡೆ ಮಾಡಿದೆ. ಹೊಸ ಹೂಡಿಕೆದಾರರು ಕ್ರಿಪ್ಟೋ ನಾಣ್ಯಗಳ ಮೇಲೆ ಹೂಡಿಕೆ ಮಾಡುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭವಾಗಿಸುವ ಉದ್ದೇಶದೊಂದಿಗೆ ಈ ಕ್ರಿಪ್ಟೋ ಕ್ಯಾಲ್ಕುಲೇಟರ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. ದೆಹಲಿಯಲ್ಲಿ ಸುಮಾರು 21.78%, ಪುಣೆಯಲ್ಲಿ 16.31% ಮತ್ತು ನೋಯ್ಡಾದಲ್ಲಿ 10.89% ರಷ್ಟು ಮಂದಿ ಈ ಕ್ಯಾಲ್ಕುಲೇಟರ್ ಬಗೆಗೆ ಕುತೂಹಲ ವ್ಯಕ್ತಿಪಡಿಸಿದ್ದಾರೆ. ಕ್ಯಾಲ್ಕುಲೇಟರ್‌ಗಳಲ್ಲಿ ಸರಾಗ ಯುಐ, ಹೊಸ ಹೂಡಿಕೆದಾರರ ಗಮನಸೆಳೆಯುವಲ್ಲಿ ಒಂದು ಪ್ರಮುಖ ಅಂಶವಾಗಿದೆ. ಈವರೆಗೆ 100% ಪುರುಷ ಬಳಕೆದಾರರನ್ನು ಹೊಂದಿದೆ. ಇದರಲ್ಲಿ ಮೂರು ವಿಧದ ಕ್ಯಾಲ್ಕುಲೇಟರ್ ಗಳಿವೆ. ಕ್ರಿಪ್ಟೋ ಮತ್ತು ಹಿಂದಿನ ಕಾರ್ಯಕ್ಷಮತೆ ಕ್ಯಾಲ್ಕುಲೇಟರ್, ಕ್ರಿಪ್ಟೋ ಬಡ್ಡಿದರ ಕ್ಯಾಲ್ಕುಲೇಟರ್ ಮತ್ತು ಕ್ರಿಪ್ಟೋ ಕನ್ವರ್ಟರ್‌ ಕೂಡ ವಾಜಿರ್‌ಎಕ್ಸ್‌ನಲ್ಲಿ ಲಭ್ಯವಿದೆ. ಈ ಸೌಲಭ್ಯ ಕ್ರಿಪ್ಟೋ ಉದ್ಯಮದಲ್ಲಿ ಒಂದು ಉತ್ತಮ ಪ್ರಗತಿಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಕ್ರಿಪ್ಟೋ ಕನ್ವರ್ಟರ್‌ಗಳಿಗಿಂತ ಕ್ರಿಪ್ಟೋ ಕನ್ವರ್ಟರ್ ಭಿನ್ನವಾಗಿ. ಈ ಕ್ಯಾಲ್ಕುಲೇಟರ್‌ಗಳು ಬಳಕೆದಾರರಿಗೆ ಕ್ರಿಪ್ಟೋಕರೆನ್ಸಿಯ ಹಿಂದಿನ ದಾಖಲೆಯನ್ನು ವಿಶ್ಲೇಷಿಸಲು ಮತ್ತು ಸಂಭಾವ್ಯ ಭವಿಷ್ಯದ ಆದಾಯವನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಬಳಕೆದಾರರು ಪ್ರಯಾಣಿಸುತ್ತಿರುವಾಗಲೂ ಕ್ಯಾಲ್ಕುಲೇಟರ್‌ಗಳನ್ನು ಬಳಸಬಹುದು. ಈ ಕ್ಯಾಲ್ಕುಲೇಟರ್‌ಗಳನ್ನು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಬೆಡ್ ಮಾಡಲು ಬಯಸುವ ಪಾಲುದಾರರಿಗೆ, ಇದು ಕೇವಲ 5 ನಿಮಿಷ ತೆಗೆದುಕೊಳ್ಳುತ್ತದೆ. ಪ್ರತಿ ಹೂಡಿಕೆದಾರರಿಗೂ, ಕ್ರಿಪ್ಟೋ ಮಾರುಕಟ್ಟೆಯಲ್ಲಿ ರಿಟರ್ನ್ ಆನ್ ಇನ್ವೆಸ್ಟ್ಮೆಂಟ್ (ROI) ಕೇಂದ್ರ ಬಿಂದುವಾಗಿದೆ. ಈ ಕ್ಯಾಲ್ಕುಲೇಟರ್‌ಗಳ ಮೂಲಕ, ಸಂಭಾವ್ಯ ಖರೀದಿದಾರರು ಕ್ರಿಪ್ಟೋಕರೆನ್ಸಿಯ ಹಿಂದಿನ ಪ್ರವೃತ್ತಿಯನ್ನು ಮೌಲ್ಯಮಾಪನ ಮಾಡಬಹುದು ಮತ್ತು ಬಿಟ್‌ಕಾಯಿನ್, ಎಥೆರಿಯಮ್ ಮತ್ತು ಇತರ ಸಂಪತ್ತು ಉತ್ಪಾದಿಸುವ ಸ್ವತ್ತುಗಳ ಭವಿಷ್ಯದ ಬೆಳವಣಿಗೆಯನ್ನು ಅಂದಾಜು ಮಾಡಬಹುದು. ಬಳಕೆದಾರರು ಆರ್‌ಒಐ ಫಲಿತಾಂಶಗಳನ್ನು ಚಿನ್ನ, ನಿಫ್ಟಿ ಸ್ಟಾಕ್‌ಗಳು ಮತ್ತು ಸ್ಥಿರ ಠೇವಣಿಗಳೊಂದಿಗೆ ಹೋಲಿಸಬಹುದು. ಹಲವು ಕಾಲಾವಧಿ, ಹೂಡಿಕೆಯ ಆವರ್ತನ ಮತ್ತು ಹಣದುಬ್ಬರದ ದರ ಸೇರಿದಂತೆ ಕೆಲವು ಅಂಶಗಳನ್ನು ಆಧರಿಸಿ ಹೂಡಿಕೆ ನಿರ್ಧಾರಗಳನ್ನು ವಿಶ್ಲೇಷಿಸಲು ಇದು ಸಹಾಯ ಮಾಡುತ್ತದೆ. ವಾಜಿರ್‌ಎಕ್ಸ್ ಸಂಸ್ಥಾಪಕ ನಿಶ್ಚಲ್ ಶೆಟ್ಟಿ ಮಾತನಾಡಿ, “ವಾಜಿರ್‌ಎಕ್ಸ್‌ನಲ್ಲಿ, ಪ್ರತಿಯೊಬ್ಬರಿಗೂ ಕ್ರಿಪ್ಟೋಕರೆನ್ಸಿಗಳ ಖರೀದಿ ಮತ್ತು ವಿನಿಮಯವನ್ನು ಸರಳಗೊಳಿಸುವ ಗುರಿ ಹೊಂದಿದ್ದೇವೆ. ಕ್ರಿಪ್ಟೋ ಕ್ಯಾಲ್ಕುಲೇಟರ್‌ಗಳ ನಮ್ಮ ಹೊಸ ಸೇರ್ಪಡೆಯಾಗಿದ್ದು, ಕ್ರಿಪ್ಟೋ ಕ್ಷೇತ್ರದಲ್ಲಿ ಇದೊಂದು ಹೊಸ ಹೆಜ್ಜೆಯಾಗಿದೆ. ಕ್ರಿಪ್ಟೋದಲ್ಲಿ ನಮ್ಮ ಧ್ಯೇಯವಾಕ್ಯವಾದ ಹೂಡಿಕೆ ಮಾಡುವ ಮೊದಲು ಡಿವೈಒಆರ್‌ (ನಿಮ್ಮ ಸ್ವಂತ ಸಂಶೋಧನೆ ಮಾಡಿ) ಮೇಲೆ ಇದು ಕೇಂದ್ರೀಕರಿಸುತ್ತದೆ. ಮಾರುಕಟ್ಟೆ ಪ್ರವೃತ್ತಿಗಳನ್ನು ಅನ್ವೇಷಿಸುವುದು, ಬಹು ಕ್ರಿಪ್ಟೋಕರೆನ್ಸಿಗಳ ಹಿಂದಿನ ಕಾರ್ಯಕ್ಷಮತೆ ಮತ್ತು ಆರ್‌ಒಐ ಅನ್ನು ಊಹಿಸುವುದು ಹೊಸ ಹೂಡಿಕೆದಾರರಿಗೆ ಕ್ರಿಪ್ಟೋ ಹೂಡಿಕೆ ಪ್ರಯತ್ನಿಸಲು ಸಹಾಯ ಮಾಡುತ್ತದೆ. ಜನರು ಮಾಹಿತಿಯುಕ್ತ ಹೂಡಿಕೆಗಳನ್ನು ಮಾಡಿದಾಗ, ಇದು ಕ್ರಿಪ್ಟೋ ಉದ್ಯಮ ಹಾಗೂ ಹೂಡಿಕೆದಾರರ ಸಮುದಾಯದ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತದ ಎಂದರು.