ಕರ್ನಾಟಕದಲ್ಲಿ ಅಕ್ಕಿ ದರದಲ್ಲಿ ಶೇ.10ರಷ್ಟು ಏರಿಕೆ..! ಬಾಸುಮತಿ ಅಕ್ಕಿ ಕೆ.ಜಿ.ಗೆ 10 ರೂ. ಹೆಚ್ಚಳ..!

ಇದೀಗ ಮಳೆ ಕಡಿಮೆಯಾಗಿ, ಜನವರಿ ಹೊತ್ತಿಗೆ ಒಣ ವಾತಾವರಣ ಕಂಡು ಬಂದರೆ ಈಗಿನ ಅಕ್ಕಿಯ ದರ ಸ್ಥಿರವಾಗಿರಬಹುದು. ಅಥವಾ ಕಡಿಮೆಯಾಗಲೂಬಹುದು. ಆದರೆ ಇದೇ ರೀತಿ ಮಳೆ, ತೇವಾಂಶದಿಂದ ಕೂಡಿದ ವಾತಾವರಣವಿದ್ದರೆ ಅಕ್ಕಿಯ ದರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಕರ್ನಾಟಕದಲ್ಲಿ ಅಕ್ಕಿ ದರದಲ್ಲಿ ಶೇ.10ರಷ್ಟು ಏರಿಕೆ..! ಬಾಸುಮತಿ ಅಕ್ಕಿ ಕೆ.ಜಿ.ಗೆ 10 ರೂ. ಹೆಚ್ಚಳ..!
Linkup
: ದಿನ ನಿತ್ಯ ಬಳಕೆಯ ಅಕ್ಕಿಯ ದರದಲ್ಲಿ (ಸ್ಟೀಮ್‌ ರೈಸ್‌) ಇತ್ತೀಚೆಗೆ ಶೇ. 10 - 15 ರಷ್ಟು ಏರಿಕೆಯಾಗಿದೆ. ಅಕ್ಟೋಬರ್‌ ತಿಂಗಳ ದರಕ್ಕೆ ಹೋಲಿಸಿದರೆ, ಡಿಸೆಂಬರ್‌ನಲ್ಲಿ ಕೆಲ ಬಗೆಯ ಅಕ್ಕಿಗಳು ಕೆ. ಜಿ. ಗೆ 4 ರೂ. ನಿಂದ 10 ರೂ. ವರೆಗೆ ಏರಿಕೆಯಾಗಿವೆ. ಅದರಲ್ಲೂ ಪಲಾವ್‌, ಬಿರಿಯಾನಿಯಂತಹ ಅಡುಗೆಗಳಿಗೆ ಯಥೇಚ್ಛವಾಗಿ ಬಳಸುವ ಬಾಸುಮತಿ ಸ್ಟೀಮ್‌ ರೈಸ್‌ನ ಬೆಲೆ ಸಗಟು ದರದಲ್ಲಿಯೇ ಕೆ. ಜಿ. ಮೇಲೆ 10 ರೂ. ಜಾಸ್ತಿಯಾಗಿದೆ. ಚಿಲ್ಲರೆ ದರದಲ್ಲಿ ಕೆ. ಜಿ. ಮೇಲೆ 15 ರೂ.ವರೆಗೆ ಹೆಚ್ಚಳವಾಗಿದೆ. ಮಳೆಯಿಂದ ರಾಗಿ, ಭತ್ತ ಮತ್ತಿತರ ಬೆಳೆಗಳು ಹಾನಿಗೀಡಾಗಿವೆ. ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಮಳೆಯ ಅವಾಂತರದಿಂದಾಗಿ ಗೋಧಿ, , ತೊಗರಿ ಮತ್ತಿತರ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ. ಈಗಾಗಲೇ ಬಾಸ್ಮತಿಯಂತಹ ಕೆಲವು ಬಹುಬೇಡಿಕೆಯ ಅಕ್ಕಿಯ ಏರಿಕೆಯಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹರಿಯಾಣ, ಪಂಜಾಬ್‌ನಲ್ಲಿ ಮಳೆಯಿಂದಾಗಿ ಭತ್ತದ ಬೆಳೆ ಕೊಯ್ಲು ಮಾಡುವುದು ತಡವಾಗಿದೆ. ಜತೆಗೆ 'ಸೇಲಾ' ಎಂಬ ಹೆಸರಿನ ಬಾಸ್ಮತಿ ಅಕ್ಕಿಯು ಯಶವಂತಪುರ ಎಪಿಎಂಸಿಯಲ್ಲಿ ಅಕ್ಟೋಬರ್‌ನಲ್ಲಿ ಕೆ. ಜಿ. ಗೆ 80 ರೂ. ಇತ್ತು. ಇದೀಗ 90 ರೂ. ಗೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಇತರೆ ಸ್ಥಳೀಯ ಹಾಗೂ ಹೊರ ರಾಜ್ಯಗಳ ಸ್ಟೀಂ ಅಕ್ಕಿ ಕೆ. ಜಿ. ಗೆ 2 - 4 ರೂ. ವರೆಗೆ ಏರಿಕೆಯಾಗಿದೆ. ಛತ್ತೀಸ್‌ಗಢ ಮತ್ತಿತರ ಭಾಗಗಳಿಂದ ಬರುತ್ತಿದ್ದ ಅಕ್ಕಿ ಹಾಗೂ ಕೊಲ್ಲಂ ರೈಸ್‌ನ ದರ ಈ ವರ್ಷ ಪ್ರತಿ ಕೆ. ಜಿ. ಗೆ 2 - 3 ರೂ. ಇಳಿಯಬೇಕಾಗಿತ್ತು. ಆದರೆ ಈ ವರ್ಷ ದರದಲ್ಲಿ ಇಳಿಕೆಯಾಗಲೇ ಇಲ್ಲ. ಇದೀಗ ಕಡಿಮೆಯಾಗಿ, ಜನವರಿ ಹೊತ್ತಿಗೆ ಒಣ ವಾತಾವರಣ ಕಂಡು ಬಂದರೆ ಈಗಿನ ಅಕ್ಕಿಯ ದರ ಸ್ಥಿರವಾಗಿರಬಹುದು. ಅಥವಾ ಕಡಿಮೆಯಾಗಲೂಬಹುದು. ಆದರೆ ಇದೇ ರೀತಿ ಮಳೆ, ತೇವಾಂಶದಿಂದ ಕೂಡಿದ ವಾತಾವರಣವಿದ್ದರೆ ಅಕ್ಕಿಯ ದರದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಎಪಿಎಂಸಿ ಸಮಿತಿ - ಎಫ್‌ಕೆಸಿಸಿಐ ಅಧ್ಯಕ್ಷ ರಮೇಶ್‌ಚಂದ್ರ ಲಹೋಟಿ. ರಾಯಚೂರು, ಸಿರಗುಪ್ಪ, ಮಾನ್ವಿ ಭಾಗಗಳಲ್ಲಿ ಬೆಳೆದ ಒಂದು ವರ್ಷದಷ್ಟು ಹಳೆಯ ಅಕ್ಕಿ ಕೆ. ಜಿ. ಗೆ 40-45 ರೂ. ಇದೆ. ಆದರೆ ಸ್ಟೀಂ ಅಕ್ಕಿಗೆ ಸ್ವಲ್ಪ ಕೊರತೆಯಾಗಿದೆ. ಹೀಗಾಗಿ ಹೊಸ ಅಕ್ಕಿಯ ದರದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ. ಹೀಗಾಗಿ ಎಲ್ಲಾ ಬಗೆಯ ಸ್ಟೀಂ ಅಕ್ಕಿಯ ದರದಲ್ಲಿ ಶೇ. 10ರಷ್ಟು ಏರಿಕೆಯಾಗಿದೆ. ಕಲಬುರಗಿಯಿಂದ ಮುಂದಿನ ತಿಂಗಳು ತೊಗರಿ ಬೆಳೆ ಕೊಯ್ಲಿಗೆ ಬರಲಿದೆ. ಫಸಲಿನ ಆಧಾರದ ಮೇಲೆ ತೊಗರಿ ಬೇಳೆಯ ಬೆಲೆ ನಿರ್ಧಾರವಾಗಲಿದೆ. ಮಳೆ ಮತ್ತು ತೇವಾಂಶದಿಂದ ಕೂಡಿದ ವಾತಾವರಣ ಬದಲಾದರೆ ಮಾತ್ರ ದಿನಸಿ ಪದಾರ್ಥಗಳ ಬೆಲೆಯಲ್ಲಿ ಸ್ಥಿರತೆ ಕಾಣಬಹುದು. ಒಂದು ವೇಳೆ ಮತ್ತೂ ಮುಂದುವರಿದರೆ ಮಾತ್ರ ಬೆಲೆಗಳಲ್ಲಿ ಸಾಕಷ್ಟು ಏರಿಕೆಯಾಗುವ ಸಾಧ್ಯತೆ ಇಲ್ಲದಿಲ್ಲ ಎಂದು ರಮೇಶ್‌ಚಂದ್ರ ಲಹೋಟಿ ತಿಳಿಸಿದರು.