ಕರ್ನಾಟಕ, ಮಹಾರಾಷ್ಟ್ರದಲ್ಲಿ ಅವಳಿ ರೂಪಾಂತರಿಯ ಅಟ್ಟಹಾಸ ಜೋರಾಗಿದೆ ಎಂದ ಕೇಂದ್ರ!

​​ಬ್ರಿಟನ್‌ ಕೊರೊನಾ ಎನ್ನಲಾಗುವ ಬಿ1.1.7 ರೂಪಾಂತರಿಯು ಕಳೆದ ಒಂದೂವರೆ. ತಿಂಗಳಿಂದ ದೇಶಾದ್ಯಂತ ಪ್ರಸರಣ ವೇಗವನ್ನು ಇಳಿಕೆ ಮಾಡಿದೆ. ಹಾಗಿದ್ದೂ, ದಿಲ್ಲಿ, ಪಂಜಾಬ್‌ನ ಸೋಂಕಿತರಲ್ಲಿ ಕಾಣಸಿಗುತ್ತಿದೆ. ಕರ್ನಾಟಕದಲ್ಲಿ 82 ಸೋಂಕಿತರಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ದೇಶದ 10 ಸರಕಾರಿ ಪ್ರಯೋಗಾಲಯಗಳಲ್ಲಿ ಡಿಸೆಂಬರ್‌ನಿಂದ ಸುಮಾರು 18,053 ಸೋಂಕಿತರಿಂದ ಸಂಗ್ರಹಿಸಲಾಗಿದೆ.

ಕರ್ನಾಟಕ, ಮಹಾರಾಷ್ಟ್ರದಲ್ಲಿ ಅವಳಿ ರೂಪಾಂತರಿಯ ಅಟ್ಟಹಾಸ ಜೋರಾಗಿದೆ ಎಂದ ಕೇಂದ್ರ!
Linkup
ಹೊಸದಿಲ್ಲಿ: ಸದ್ಯ ದೇಶದಲ್ಲಿಕೊರೊನಾ ಸೋಂಕಿನಿಂದ ಹೆಚ್ಚು ತತ್ತರಿಸಿರುವ ರಾಜ್ಯಗಳಾದ ಮಹಾರಾಷ್ಟ್ರ, , ಗುಜರಾತಿನಲ್ಲಿ ಕೊರೊನಾ (ಡಬಲ್‌ ಮ್ಯೂಟೆಂಟ್‌) ಅಟ್ಟಹಾಸ ಜೋರಾಗಿದೆ. ಉಳಿದಂತೆ ಉತ್ತರ ಭಾರತದಲ್ಲಿ ಬ್ರಿಟನ್‌ ರೂಪಾಂತರಿ ಕೊರೊನಾ ಪ್ರಸರಣ ಜನರನ್ನು ಬಾಧಿಸುತ್ತಿದೆ ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಹೇಳಿದೆ. ಬ್ರಿಟನ್‌ ಕೊರೊನಾ ಎನ್ನಲಾಗುವ ಬಿ1.1.7 ರೂಪಾಂತರಿಯು ಕಳೆದ ಒಂದೂವರೆ. ತಿಂಗಳಿಂದ ದೇಶಾದ್ಯಂತ ಪ್ರಸರಣ ವೇಗವನ್ನು ಇಳಿಕೆ ಮಾಡಿದೆ. ಹಾಗಿದ್ದೂ, ದಿಲ್ಲಿ, ಪಂಜಾಬ್‌ನ ಸೋಂಕಿತರಲ್ಲಿ ಕಾಣಸಿಗುತ್ತಿದೆ. ಕರ್ನಾಟಕದಲ್ಲಿ 82 ಸೋಂಕಿತರಲ್ಲಿ ಈ ರೂಪಾಂತರಿ ಪತ್ತೆಯಾಗಿದೆ. ದೇಶದ 10 ಸರಕಾರಿ ಪ್ರಯೋಗಾಲಯಗಳಲ್ಲಿ ಡಿಸೆಂಬರ್‌ನಿಂದ ಸುಮಾರು 18,053 ಸೋಂಕಿತರಿಂದ ಸಂಗ್ರಹಿಸಲಾಗಿದೆ. ರಕ್ತ ಮತ್ತು ಕಫದ ಮಾದರಿಗಳನ್ನು ಪರೀಕ್ಷಿಸಿ ರೂಪಾಂತರಿಗಳ ಪ್ರಸರಣದ ಬಗ್ಗೆ ಕೂಲಂಕಷ ಅಧ್ಯಯನ ನಡೆಸಲಾಗುತ್ತಿದೆ ಎಂದು ಎನ್‌ಸಿಡಿಸಿ ನಿರ್ದೇಶಕ ಸುಜಿತ್‌ ಸಿಂಗ್‌ ತಿಳಿಸಿದ್ದಾರೆ.