ಕೊರೊನಾ ಲಸಿಕೆಯ ಹತ್ತಾರು ಆಯ್ಕೆ ಶೀಘ್ರದಲ್ಲೇ ಲಭ್ಯ..! ಮೂಗಿಗೆ ಡ್ರಾಪ್ಸ್‌ ರೂಪದಲ್ಲೂ ವ್ಯಾಕ್ಸಿನ್..!

ಮೊದಲಿಗೆ ಕೊರೊನಾ ವಾರಿಯರ್ಸ್‌ ಹಾಗೂ ನಂತರ ವಯಸ್ಕರಿಗೆ ಲಸಿಕೆ ನೀಡಲು ಆರಂಭಿಸಿದೆವು. ಹೀಗಾಗಿ, ಕೊರೊನಾ ಎರಡನೇ ಅಲೆ ವೇಳೆ ಹೋರಾಡಲು ಸಾಧ್ಯವಾಯ್ತು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಕೊರೊನಾ ಲಸಿಕೆಯ ಹತ್ತಾರು ಆಯ್ಕೆ ಶೀಘ್ರದಲ್ಲೇ ಲಭ್ಯ..! ಮೂಗಿಗೆ ಡ್ರಾಪ್ಸ್‌ ರೂಪದಲ್ಲೂ ವ್ಯಾಕ್ಸಿನ್..!
Linkup
: ನಿರೋಧಕ ಲಸಿಕೆಯನ್ನು ಇಂಜೆಕ್ಷನ್ ರೂಪದಲ್ಲಿ ಚುಚ್ಚಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ, ಮೂಗಿಗೆ ಡ್ರಾಪ್ಸ್‌ ರೂಪದಲ್ಲೂ ಹಾಕಿಸಿಕೊಳ್ಳಬಹುದು..! ಹೌದು..! ಅಂತಾದ್ದೊಂದು ಹೊಸ ಆಯ್ಕೆ ಶೀಘ್ರದಲ್ಲೇ ಸಿಗಲಿದೆ. ಈ ಸಂಬಂಧ ಪ್ರಧಾನಿ ಮೋದಿ ತಮ್ಮ ಸುದೀರ್ಘ ಭಾಷಣದಲ್ಲಿ ವಿವರಿಸಿದ್ದಾರೆ. ಮೂಗಿನಿಂದ ನೀಡುವ ವಿಧಾನವನ್ನೂ ಪರೀಕ್ಷಿಸುತ್ತಿದ್ದೇವೆ ಎಂದ ಪ್ರಧಾನಿ ಮೋದಿ, ಶೀಘ್ರದಲ್ಲೇ ಇಂಥಾ ಲಸಿಕೆ ಕೂಡಾ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದ್ಧಾರೆ. ದೇಶದಲ್ಲಿ ಇದೀಗ ಒಟ್ಟು 7 ಕಂಪನಿಗಳು ಲಸಿಕೆ ತಯಾರು ಮಾಡ್ತಿವೆ. ಇನ್ನೂ 3 ಕಂಪನಿಗಳ ಲಸಿಕೆ ಪರೀಕ್ಷೆಯ ಹಂತದಲ್ಲಿದೆ. ಬೇರೆ ದೇಶಗಳಿಂದಲೂ ಲಸಿಕೆ ಖರೀದಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ ಪ್ರಧಾನಿ ಮೋದಿ, ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಆತಂಕ ಇರುವ ಹಿನ್ನೆಲೆಯಲ್ಲಿ, ಮಕ್ಕಳನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯೋಗ ನಡೆಯುತ್ತಿದೆ ಎಂದು ವಿವರಿಸಿದರು. ದೇಶದಲ್ಲಿ ಕೊರೊನಾ ವೈರಸ್ ನಿರೋಧಕ ಲಸಿಕೆಯ ತಯಾರಿಗೆ ಆತ್ಮನಿರ್ಭರ ಅಭಿಯಾನ ಹಾಗೂ ಮಿಷನ್ ಕೋವಿಡ್ ಅಡಿಯಲ್ಲಿ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದೆವು ಎಂದು ವಿವರಿಸಿದ ಪ್ರಧಾನಿ ಮೋದಿ, ಈ ಅನುದಾನ ಬಳಸಿಕೊಂಡು ಕ್ಲಿನಿಕಲ್ ಟ್ರಯಲ್ಸ್‌ ಹಾಗೂ ಸಂಶೋಧನೆಗಳು ನಡೆದವು ಎಂದು ವಿವರಿಸಿದರು. ಭಾರತ ತನ್ನ ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೇಗೆ ಕಾಪಾಡುತ್ತೆ ಎಂಬ ಪ್ರಶ್ನೆ ಇತ್ತು. ಆದ್ರೆ, ತಜ್ಞರ ನಿರಂತರ ಪರಿಶ್ರಮದಿಂದ ಎಲ್ಲಾ ಶಂಕೆಯನ್ನು ನಾವು ಹೋಗಲಾಡಿಸಿದ್ದೇವೆ. ಒಂದೇ ವರ್ಷದ ಒಳಗೆ ಮೇಡ್‌ ಇನ್ ಇಂಡಿಯಾ ಲಸಿಕೆ ಲಭ್ಯವಾಯ್ತು ಎಂದ ಪ್ರಧಾನಿ ಮೋದಿ, ದೇಶದಲ್ಲಿ ಈವರೆಗೆ 23 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಿದ್ದೇವೆ ಎಂದರು. ಕೇಂದ್ರ ಸರ್ಕಾರವು ಸಿಎಂಗಳ ಜೊತೆ ಹಾಗೂ ವಿಪಕ್ಷ ನಾಯಕರ ಜೊತೆ ಚರ್ಚಿಸಿ ಲಸಿಕಾ ನೀತಿ ರೂಪಿಸಿತು. ಮೊದಲಿಗೆ ಕೊರೊನಾ ವಾರಿಯರ್ಸ್‌ ಹಾಗೂ ನಂತರ ವಯಸ್ಕರಿಗೆ ನೀಡಲು ಆರಂಭಿಸಿದೆವು. ಹೀಗಾಗಿ, ಕೊರೊನಾ ಎರಡನೇ ಅಲೆ ವೇಳೆ ಹೋರಾಡಲು ಸಾಧ್ಯವಾಯ್ತು ಎಂದ ಪ್ರಧಾನಿ ಮೋದಿ, ಕೊರೊನಾ 2ನೇ ಅಲೆಗೆ ಮುನ್ನವೇ ನಾವು ವಾರಿಯರ್ಸ್‌ಗೆ ಲಸಿಕೆ ನೀಡದಿದ್ದರೆ ಏನಾಗುತ್ತಿತ್ತು ಊಹಿಸಿ..? ಎಂದು ಸವಾಲೆಸೆದರು. ಆಂಬುಲೆನ್ಸ್‌ ಚಾಲಕರು, ಸ್ವಚ್ಛತಾ ಕಾರ್ಮಿಕರಿಗೂ ಲಸಿಕೆ ನೀಡಿದೆವು. ಹೀಗಾಗಿ, ಅವರು ನಿರ್ಭೀತಿಯಿಂದ ಕೆಲಸ ಮಾಡಿದರು, ಲಕ್ಷಾಂತರ ಜನರ ಜೀವ ಉಳಿಸಿದರು ಎಂದು ಪ್ರಧಾನಿ ಮೋದಿ ವಿವರಿಸಿದರು. ಇದೇ ವೇಳೆ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ವಯ ಬಡವರಿಗೆ ರೇಷನ್ ವಿತರಿಸುವ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ಯೋಜನೆಯನ್ನು ಜೂನ್‌ವರೆಗೆ ವಿಸ್ತರಿಸಲಾಗಿತ್ತು. ಇದೀಗ ದೀಪಾವಳಿವರೆಗೂ ಮುಂದುವರಿಸಲಾಗುವುದು ಎಂದು ಘೋಷಿಸಿದರು.