ಕಾಫಿ, ಗೋಧಿ, ಜವಳಿ ರಫ್ತು ಭಾರಿ ಹೆಚ್ಚಳ; ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ

ಕಳೆದ ಏಳೆಂಟು ತಿಂಗಳಿನಿಂದ ಕಾಫಿ, ಗೋಧಿ, ಜವಳಿ, ಆಟೋಮೊಬೈಲ್‌, ಎಂಜಿನಿಯರಿಂಗ್‌ ರಫ್ತು ಸತತವಾಗಿ ಚೇತರಿಸುತ್ತಿದೆ ಎಂದು ಅಂಕಿ -ಅಂಶಗಳು ತಿಳಿಸಿವೆ. ಕಾಫಿ ರಫ್ತು ಹೆಚ್ಚಿರುವುದು ಹಲವು ವರ್ಷಗಳಿಂದ ಬೆಲೆ ಇಲ್ಲದೆ ಕಂಗೆಟ್ಟಿದ್ದ ಕಾಫಿ ಬೆಳೆಗಾರರ ಪಾಲಿಗೆ ಸಂತಸ ತಂದಿದೆ.

ಕಾಫಿ, ಗೋಧಿ, ಜವಳಿ ರಫ್ತು ಭಾರಿ ಹೆಚ್ಚಳ; ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ
Linkup
ಹೊಸದಿಲ್ಲಿ: ಕೋವಿಡ್‌-19 ಹೊಡೆತಕ್ಕೆ ತತ್ತರಿಸಿದ್ದ ಭಾರತದ ವಲಯ ಕಳೆದ ಏಳೆಂಟು ತಿಂಗಳಿನಿಂದ ಸತತವಾಗಿ ಚೇತರಿಸುತ್ತಿದೆ. ಕಾಫಿ, , , ಆಟೋಮೊಬೈಲ್‌, ಎಂಜಿನಿಯರಿಂಗ್‌ ರಫ್ತು ಸುಧಾರಿಸಿದೆ ಎಂದು ಅಂಕಿ -ಅಂಶಗಳು ತಿಳಿಸಿವೆ. ಹೆಚ್ಚಿರುವುದು ಹಲವು ವರ್ಷಗಳಿಂದ ಬೆಲೆ ಇಲ್ಲದೆ ಕಂಗೆಟ್ಟಿದ್ದ ಕಾಫಿ ಬೆಳೆಗಾರರ ಪಾಲಿಗೆ ಶುಭ ಸುದ್ದಿಯಾಗಿದೆ. ಕಾಫಿಕಳೆದ ಜನವರಿ-ಆಗಸ್ಟ್‌ ಅವಧಿಯಲ್ಲಿ ಭಾರತದ ಕಾಫಿ ರಫ್ತಿನಲ್ಲಿ ಶೇ. 14ರಷ್ಟು ಹೆಚ್ಚಳ ದಾಖಲಾಗಿದೆ. ಭಾರತದ ಇನ್‌ಸ್ಟಂಟ್‌ ಕಾಫಿ, ಅರೆಬಿಕಾ ಮತ್ತು ಕಾಫಿಗೆ ಬೇಡಿಕೆ ಸೃಷ್ಟಿಯಾಗಿದೆ. ಜನವರಿ 1 ರಿಂದ ಆಗಸ್ಟ್‌ 31ರ ತನಕ 2.56 ಲಕ್ಷ ಟನ್‌ ಕಾಫಿ ರಫ್ತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2.25 ಲಕ್ಷ ಟನ್‌ ರಫ್ತಾಗಿತ್ತು. ಕಳೆದ ವರ್ಷ ಕಾಫಿ ದರ ಕಡಿಮೆಯಾಗಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಆದರೆ ಈ ಬಾರಿ ರಫ್ತು ಹೆಚ್ಚಾಗಿರುವುದರಿಂದ ಕಳೆದ ಕೆಲವು ತಿಂಗಳಿನಿಂದ ಕಾಫಿ ಬೆಲೆ ಏರುಮುಖವಾಗಿದೆ. ಆದರೆ ಕಾಫಿ ಸಂಗ್ರಹವಿಲ್ಲದೆ, ಬೆಳೆಗಾರರಿಗೆ ಮಾತ್ರ ಇದರ ಲಾಭ ಸಿಗುತ್ತಿಲ್ಲ. ''ಕಳೆದ ವರ್ಷ ಬೆಳೆ ಕುಸಿತದ ಪರಿಣಾಮ, ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ರಫ್ತಾಗದಿದ್ದರೂ, ಆರೋಗ್ಯಕರ ಚೇತರಿಕೆ ಆಗಿರುವುದು ತ್ರಪ್ತಿದಾಯಕವಾಗಿದೆ'' ಎಂದು ಕಾಫಿ ರಫ್ತುದಾರರ ಅಸೋಸಿಯೇಶನ್‌ ಅಧ್ಯಕ್ಷ ರಮೇಶ್‌ ರಾಜ ಹೇಳಿದ್ದಾರೆ. ಮುಖ್ಯವಾಗಿ ಯುರೋಪ್‌ನಲ್ಲಿ ಭಾರತದ ಕಾಪಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಜವಳಿಅಮೆರಿಕ ಮತ್ತು ಯುರೋಪ್‌ನಿಂದ ಜವಳಿ, ಅಪಾರಲ್‌ ಉತ್ಪನ್ನಗಳಿಗೆ ಬೇಡಿಕೆ ವೃದ್ಧಿಸಿದೆ. ಅಮೆರಿಕಕ್ಕೆ ಜವಳಿ ರಫ್ತು 2021ರ ಮೊದಲ 7 ತಿಂಗಳಿನಲ್ಲಿ ಶೇ. 55ರಷ್ಟು ಏರಿಕೆಯಾಗಿದೆ. ಇದು ಅಮೆರಿಕಕ್ಕೆ ಜವಳಿ ರಫ್ತು ಮಾಡುವ ಟಾಪ್‌ 5 ರಾಷ್ಟ್ರಗಳಲ್ಲಿಯೇ ಅತಿ ವೇಗದ ಬೆಳವಣಿಗೆಯಾಗಿದೆ. ಭಾರತದ ಜವಳಿ ಉತ್ಪನ್ನಗಳ ರಫ್ತನ್ನು 100 ಶತಕೋಟಿ ಡಾಲರ್‌ ವೃದ್ಧಿಸಲು (ಅಂದಾಜು 7.40 ಲಕ್ಷ ಕೋಟಿ ರೂ.) ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಉತ್ಪಾದನೆ ಆಧಾರಿತ ಪ್ರೋತ್ಸಾಹ ಧನ ಯೋಜನೆಯನ್ನು ಜವಳಿ ವಲಯಕ್ಕೂ ವಿಸ್ತರಿಸಲಾಗುವುದು (ಪಿಎಲ್‌ಐ) ಎಂದು ಅವರು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶ ಜವಳಿ ವಲಯದಲ್ಲಿ ಭಾರಿ ವೇಗದಲ್ಲಿ ಮುನ್ನಡೆದಿತ್ತು. ಇದು ದೇಶಕ್ಕೆ ಹಿನ್ನಡೆ ಉಂಟು ಮಾಡಿತ್ತು. ಆದರೆ ಇದೀಗ ಮತ್ತೆ ಭಾರತದ ಜವಳಿ ವಲಯದ ರಫ್ತು ಏರಿಕೆ ಕಂಡಿದೆ. ಎಂಜಿನಿಯರಿಂಗ್‌ ಅಮೆರಿಕ, ಯುರೋಪ್‌ ಮತ್ತು ಯುಎಇನಿಂದ ವ್ಯಾಪಕ ಬೇಡಿಕೆಯ ಪರಿಣಾಮ ಎಂಜಿನಿಯರಿಂಗ್‌ ಸರಕುಗಳ ರಫ್ತು ಚೇತರಿಸಿದೆ. ಜುಲೈನಲ್ಲಿ 9.14 ಶತಕೋಟಿ ಡಾಲರ್‌ (ಅಂದಾಜು 66,722 ಕೋಟಿ ರೂ.) ಎಂಜಿನಿಯರಿಂಗ್‌ ರಫ್ತು ನಡೆದಿದೆ ಎಂದು ಎಂಜಿನಿಯರಿಂಗ್‌ ಎಕ್ಸ್‌ಪೋರ್ಟ್‌ ಪ್ರಮೋಷನ್‌ ಕೌನ್ಸಿಲ್‌ ತಿಳಿಸಿದೆ. ಕಳೆದ ಏಪ್ರಿಲ್‌-ಜೂನ್‌ನಲ್ಲಿ ದ್ವಿಚಕ್ರ ವಾಹನಗಳ ರಫ್ತು 2020ರ ಇದೇ ಅವಧಿಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿದೆ.